ಫುಜೊ(ಚೀನಾ ಓಪನ್): ಚೀನಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟುಗಳಾದ ಸಿಂಧು, ಶ್ರೀಕಾಂತ್ ಸೋಲಿನ ನಂತರ ಸೈನಾ ನೆಹ್ವಾಲ್ ಕೂಡ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಕಶ್ಯಪ್ ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
29 ವರ್ಷದ ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಚಾಯ್ ಯಾನ್ ಯಾನ್ ವಿರುದ್ಧ 9-21, 12-21 ರಿಂದ ಸೋಲು ಕಂಡರು. ಈ ಪಂದ್ಯವನ್ನು ಚೀನಾದ ಆಟಗಾರ್ತಿ ಕೇವಲ 24 ನಿಮಿಷಗಳಲ್ಲಿ ವಶಪಡಿಸಿಕೊಂಡರು.
ಸೈನಾ ಸೋಲುಕಂಡು ನಿರಾಶೆಯನುಭವಿಸಿದರೆ ಅವರ ಪತಿ ಪರುಪಳ್ಳಿ ಕಶ್ಯಪ್ ಥಾಯ್ಲೆಂಡ್ನ ಸಿತ್ತಿಕೊಮ್ ಥಮ್ಮಸಿನ್ ವಿರುದ್ಧ 21-14, 21-13 ರ ನೇರ ಗೇಮ್ಗಳಲ್ಲಿ ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದರು.
ಕಶ್ಯಪ್ ಎರಡನೇ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಲೆಕ್ಸನ್ ವಿರುದ್ಧ ಸೆಣಸಲಿದ್ದಾರೆ.
ಇನ್ನು ಭಾರತದ ಸಿಂಗಲ್ಸ್ ಆಟಗಾರರಾದ ಪಿ ವಿ ಸಿಂಧು, ಕಿಡಂಬಿ ಶ್ರೀಕಾಂತ್, ಹೆಚ್ಎಸ್ ಪ್ರಣಯ್ ರಾವ್, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಚೀನಾ ಓಪನ್ನಿಂದ ನಿರ್ಗಮಿಸಿದ್ದಾರೆ.