ಹೈದರಾಬಾದ್: ಸ್ವಿಟ್ಜರ್ಲ್ಯಾಂಡಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಬಳಿಕ ಹಲವು ಟೂರ್ನಿಗಳಲ್ಲಿ ಆರಂಭಿಕ ಸುತ್ತುಗಳಲ್ಲೇ ಸೋಲನುಭವಿಸಿರುವ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧುಗೆ ತನ್ನ ಚಾಂಪಿಯನ್ಶಿಪ್ನಿಂದ ಮತ್ತೊಂದು ದೊಡ್ಡ ಟೂರ್ನಿಯಲ್ಲಿ ಆಡುವ ಅವಕಾಶ ದೊರೆತಿದೆ.
ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಮೊದಲ 8 ಸ್ಪರ್ಧಿಗಳು ಮಾತ್ರ ಭಾಗವಹಿಸಲು ಅವಕಾಶವಿರುವ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಪಿವಿ ಸಿಂಧು ಪ್ರಸ್ತುತ ವಿಶ್ವ ಟೂರ್ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಆದರೆ, ಇವರಿಗೆ ನೇರ ಅರ್ಹತೆಯಿಲ್ಲದಿದ್ದರೂ ವಿಶ್ವಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದಿರುವ ಕಾರಣದಿಂದ ವಿಶ್ವ ಟೂರ್ ಫೈನಲ್ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಲ್ಲದೆ ಈ ಟೂರ್ನಿಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಆಟಗಾರ್ತಿ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
ಸಿಂಧು ಬಿಟ್ಟರೆ ಕೆಲ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಚಿರಾಗ್-ಸಾತ್ವಿಕ್ ಜೋಡಿ ಗಾಯದ ಕಾರಣ ಕೆಲವು ಟೂರ್ನಾಮೆಂಟ್ಗಳನ್ನು ಕೈಬಿಟ್ಟಿದ್ದರಿಂದ ಶ್ರೇಯಾಂಕದಲ್ಲಿ ಎಡವಿ ಈ ಸ್ಪರ್ದೆಯಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
-
Ladies and Gentleman!
— BAI Media (@BAI_Media) December 9, 2019 " class="align-text-top noRightClick twitterSection" data="
The TOP 8 Women Single's shuttlers during the opening ceremony of the #BWFWorldTourFinals2019 in China including 2018 Champion @Pvsindhu1. All the best #pvsindhu. #IndiaontheRise#badminton#WorldTourFinals2019 pic.twitter.com/Y7nffpryEh
">Ladies and Gentleman!
— BAI Media (@BAI_Media) December 9, 2019
The TOP 8 Women Single's shuttlers during the opening ceremony of the #BWFWorldTourFinals2019 in China including 2018 Champion @Pvsindhu1. All the best #pvsindhu. #IndiaontheRise#badminton#WorldTourFinals2019 pic.twitter.com/Y7nffpryEhLadies and Gentleman!
— BAI Media (@BAI_Media) December 9, 2019
The TOP 8 Women Single's shuttlers during the opening ceremony of the #BWFWorldTourFinals2019 in China including 2018 Champion @Pvsindhu1. All the best #pvsindhu. #IndiaontheRise#badminton#WorldTourFinals2019 pic.twitter.com/Y7nffpryEh
ಸಿಂಧು ಚೀನಾದ ಜೋಡಿ ಚೆನ್ ಯು ಫೆಯಿ ಹಾಗೂ ಹೆ ಬಿಂಗ್ ಜಿಯಾವೊ, ಜಪಾನ್‌ನ ಅಕಾನೆ ಯಮಗುಚಿ ಇರುವ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ತೈವಾನ್‌ನ ತೈ ಜು ಯಿಂಗ್, ಥಾಯ್ಲೆಂಡ್‌ನ ಜೋಡಿ ರಚನೊಕ್ ಇಂತನಾನ್, ಬುಸಾನನ್ ಒಂಗ್‌ಬಮ್ರುಂಗ್‌ಪನ್ ಮತ್ತು ಜಪಾನ್‌ನ ನೊಜೊಮಿ ಒಕುಹರಾ ಬಿ ಗುಂಪಿನಲ್ಲಿದ್ದಾರೆ. ಪಿವಿ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಚೀನಾದ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ. ಯಮಗುಚಿ ವಿರುದ್ಧ ಸಿಂಧು 10-6ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದಾರೆ.