ETV Bharat / sports

ಆಲ್​ ಇಂಗ್ಲೆಂಡ್ ಓಪನ್: ಜಪಾನ್​ ಆಟಗಾರ್ತಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು - ಸಿಂಧು vs ಚೊಚುವಾಂಗ್​

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವಚಾಂಪಿಯನ್ ಸಿಂಧು 16-21, 21-16, 21-19 ರ ಗೇಮ್​ ಅಂತರದಲ್ಲಿ ವಿಶ್ವದ 5ನೇ ಶ್ರೇಯಾಂಕದ ಆಟಗಾರ್ತಿಯನ್ನು ಮಣಿಸಿದರು.

All England Open
ಪಿವಿ ಸಿಂಧು
author img

By

Published : Mar 20, 2021, 4:30 AM IST

ಬರ್ಮಿಂಗ್​ಹ್ಯಾಮ್: ಭಾರತದ ಸ್ಟಾರ್​ ಶಟ್ಲರ್ ಪಿವಿ ಸಿಂಧು ಗುರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸಿಂಧು, ಚೀನಾದ ಅಕಾನೆ ಯಮಗುಚಿಯನ್ನು ಮಣಿಸಿ ಆಲ್​ ಇಂಗ್ಲೆಂಡ್ ಓಪನ್​ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವಚಾಂಪಿಯನ್ ಸಿಂಧು 16-21, 21-16, 21-19 ರ ಗೇಮ್​ ಅಂತರದಲ್ಲಿ ವಿಶ್ವದ 5ನೇ ಶ್ರೇಯಾಂಕದ ಆಟಗಾರ್ತಿಯನ್ನು ಮಣಿಸಿದರು.

ಮೊದಲ ಸೆಟ್​ನಲ್ಲಿ ಹಿನ್ನಡೆಯನುಭವಿಸಿದರೂ, ನಂತರ ತಿರುಗಿಬಿದ್ದ ಸಿಂಧು 2ನೇ ಸೆಟ್ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್​ನಲ್ಲಿ ಒಂದು ಹಂತದಲ್ಲಿ 15-11ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಚೀನಾ ಆಟಗಾರ್ತಿ ತಿರುಗಿಬಿದ್ದು 17-17ರಲ್ಲಿ ಸಮಬಲಕ್ಕೆ ತಂದರು. ಕೊನೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ 21-19ರಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದರು. ಸಿಂಧು ಸೆಮಿಫೈನಲ್​ನಲ್ಲಿ ಥಾಯ್ಲೆಂಡ್​ನ ಪಾರ್ನ್​ಪಾವೀ ಚೊಚುವಾಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಆದರೆ ಯುವ ಆಟಗಾರ ಲಕ್ಷ್ಯ ಸೇನ್​ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವದ 36ನೇ ಶ್ರೇಯಾಂಕದ ಮಾರ್ಕ್​ ಕಾಲ್ಜೌವ್​ ವಿರುದ್ಧ 17-21, 21-16, 17-21ರ ಅಂತರದಿಂದ ಸೋಲಲ್ಪಟ್ಟರು. ಮಹಿಳಾ ಡಬಲ್ಸ್​ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಕೂಡ ಸೋಲು ಕಂಡಿದ್ದಾರೆ.

ಇದನ್ನು ಓದಿ:ಟೀಂ ಇಂಡಿಯಾಗೆ ಕನ್ನಡಿಗನ ಆಯ್ಕೆ: ಪ್ರಸಿದ್ಧ್​ ಕೃಷ್ಣ ಮೊದಲ ಪ್ರತಿಕ್ರಿಯೆ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.