ETV Bharat / sports

ಎರಡೇ ದಿನಕ್ಕೆ ಮುಗಿದ ಟೆಸ್ಟ್​: ಸರಣಿ ಸಮಬಲ, ಟೀಂ ಇಂಡಿಯಾಗೆ ಹೊಸ ವರ್ಷದ ಮೊದಲ ಗೆಲುವು - ಭಾರತ

South Africa vs India, 2nd Test: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯವನ್ನು ಗೆದ್ದು ಭಾರತ 1-1 ಅಂತರದಿಂದ ಸರಣಿಯಲ್ಲಿ ಭಾರತ ಸಮಬಲ ಸಾಧಿಸಿದೆ. ಈ ಮೂಲಕ 2024ರ ಹೊಸ ವರ್ಷದ ಕ್ರಿಕೆಟ್​ ಅಭಿಯಾನವನ್ನು ಟೀಂ ಇಂಡಿಯಾ ಜಯದೊಂದಿಗೆ ಶುರು ಮಾಡಿದೆ.

author img

By ETV Bharat Karnataka Team

Published : Jan 4, 2024, 4:08 PM IST

Updated : Feb 24, 2024, 3:02 PM IST

ಕೇಪ್​ ಟೌನ್​ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯವಾಗಿದೆ. ಎರಡೂ ತಂಡಗಳ ಬೌಲರ್​ಗಳು ಪ್ರಾಬಲ್ಯ ಮೆರೆದಿದ್ದರಿಂದ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಟೆಸ್ಟ್ ಅಂತ್ಯಗೊಂಡಿದೆ. ಈ ಪಂದ್ಯವನ್ನು ಗೆದ್ದ ರೋಹಿತ್​ ಶರ್ಮಾ ಪಡೆ ಸರಣಿಯನ್ನು1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.

ಕೇಪ್ ಟೌನ್​ನಲ್ಲಿ ನಡೆದ ಪಂದ್ಯದಲ್ಲಿ ಬುಧವಾರ ಟಾಸ್​ ಗೆದ್ದು ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 55 ರನ್​ಗಳಿಗೆ ಆಲೌಟ್​ ಆಗಿದ್ದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 153 ರನ್​ಗಳನ್ನು ಮಾತ್ರ ಕಲೆ ಹಾಕಿ 98 ರನ್​ಗಳ ಮುನ್ನಡೆ ಸಾಧಿಸಿತ್ತು. ಇಂದು ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 176 ರನ್​ಗಳಿಗೆ ಹರಿಣಗಳು ಸರ್ವಪತನ ಕಂಡು ರೋಹಿತ್​ ಪಡೆ ಗೆಲುವಿಗೆ 79 ರನ್​ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 12 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 80 ರನ್​ಗಳನ್ನು ಗಳಿಸಿ ಗೆಲುವು ಸಾಧಿಸಿದೆ.

ಎರಡೂ ದಿನವೂ ಬೌಲರ್​ಗಳ ಮೆರೆದಾಟ: ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆಯಲ್ಲಿತ್ತು. ಹೀಗಾಗಿ ರೋಹಿತ್​ ಬಳಗ ಎರಡನೇ ಪಂದ್ಯವನ್ನು ಗೆಲ್ಲುವ ಒತ್ತಡದೊಂದಿಗೆ ಗುರಿಯನ್ನು ಹೊಂದಿತ್ತು. ಇದಕ್ಕೆ ಮೊದಲ ದಿನವೇ ಬೌಲರ್​ಗಳು ಉತ್ತಮ ಸಾಥ್ ನೀಡಿತು. ಅದರಲ್ಲೂ, ಮೊಹಮ್ಮದ್​ ಸಿರಾಜ್ ಮಾರಕ ಬೌಲಿಂಗ್​ ಮೂಲಕ 6 ವಿಕೆಟ್​ ಕಿತ್ತು ಹರಿಣಗಳನ್ನು ಕಾಡಿದರು.

ಪರಿಣಾಮ ಎಂಬಂತೆ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ಅನ್ನು 55 ರನ್​ಗಳಿಗೆ ಮುಗಿಸಿತ್ತು. ಆದರೆ, ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತವನ್ನು ಕಟ್ಟಿಹಾಕುವಲ್ಲಿ ಯಶಸ್ಸಿಯಾಗಿದ್ದ ರೋಹಿತ್​ ಪಡೆ ಕೂಡ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತ್ತು. ಹರಿಣಗಳ ಬೌಲರ್​​ಗಳ ಸಹ ಮೇಲುಗೈ ಸಾಧಿಸಿದರು. ಇದರಿಂದ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದ ಏಳು ಆಟಗಾರರು ರನ್​ಗಳ ಖಾತೆಯನ್ನೇ ತೆರೆಯಲಿಲ್ಲ. ಹೀಗಾಗಿ 153 ರನ್​ಗಳಿಗೆ ಭಾರತ ಕೂಡ ಸರ್ವಪತನ ಕಂಡಿತ್ತು. ಆದರೂ, ಎರಡನೇ ಇನ್ನಿಂಗ್ಸ್​ಗೆ 98 ರನ್​ಗಳ ಮುನ್ನಡೆ ಪಡೆದಿತ್ತು.

ಬಳಿಕ ತನ್ನ ಎರಡನೇ ಇನ್ನಿಂಗ್ಸ್​ನಲ್ಲೂ ಭಾರತೀಯ ಬೌಲರ್​ಗಳು ಮೆರೆದಾಡಿದರು. ಜಸ್ಪ್ರೀತ್ ಬುಮ್ರಾ ಆರು ವಿಕೆಟ್​ ಕಿತ್ತು ಮಿಂಚಿದರು. ಇದರಿಂದ ಎರಡನೇ ದಿನದ ಮೊದಲ ಅವಧಿಯಲ್ಲೇ 36.5 ಓವರ್​ಗಳಲ್ಲಿ 176 ರನ್​ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್​ ಆಗಿತ್ತು. ಟೀಂ ಇಂಡಿಯಾ ಗೆಲುವಿಗೆ ಎರಡನೇ ಇನ್ನಿಂಗ್ಸ್​ನಲ್ಲಿ 79 ರನ್​​ಗಳು ಗುರಿ ನೀಡಿತ್ತು. ತಂಡ ಪರ ಯಶಸ್ವಿ ಜೈಸ್ವಾಲ್ 28, ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 12 ರನ್ ಓಟಾದರು. ರೋಹಿತ್​ ಶರ್ಮಾ 17, ಶ್ರೇಯಸ್ ಅಯ್ಯರ್ 4 ರನ್​ ಗಳಿಸಿ ಅಜೇಯರಾಗಿ ಉಳಿದರು.

ಟೆಸ್ಟ್​ ಇತಿಹಾಸದಲ್ಲೇ ಕಿರಿಯ ಪಂದ್ಯ: 2024ರ ಹೊಸ ವರ್ಷದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯ ಇದಾಗಿದೆ. ಇದು ನಾಲ್ಕೂವರೆ ಸೆಷನ್‌ಗಳ ಒಳಗೆ ಆಟ ಮುಗಿದಿದ್ದು, ಟೆಸ್ಟ್​ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಗೆ ಅಂತ್ಯವಾದ ಪಂದ್ಯವೂ ಇದಾಗಿದೆ. ನಾಲ್ಕು ಇನ್ನಿಂಗ್​ಗಳಲ್ಲಿ 642 ಎಸೆತಗಳು ಮಾತ್ರ ಎಸೆಯಲ್ಪಟ್ಟಿವೆ. 1932ರಲ್ಲಿ ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ 656 ಬಾಲ್​ಗಳಲ್ಲಿ ಟೆಸ್ಟ್​ ಮುಗಿದಿತ್ತು.

ಇನ್ನು, ಕೇಪ್‌ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಏಷ್ಯಾದ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಬರೆದಿದೆ. ಎರಡು ಪಂದ್ಯಗಳ 12 ವಿಕೆಟ್​ ಪಡೆದ ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಅವರೊಂದಿಗೆ ಸರಣಿಯ ಆಟಗಾರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಏಳು ವಿಕೆಟ್​ ಪಡೆದ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ 2ನೇ ಟೆಸ್ಟ್​: ಮೊದಲ ದಿನವೇ 23 ವಿಕೆಟ್​ಗಳು ಪತನ, ಹರಿಣಗಳಿಗೆ 36 ರನ್​ಗಳ ಹಿನ್ನಡೆ

Last Updated : Feb 24, 2024, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.