ETV Bharat / sitara

ಶುರುವಾಯಿತು 'ಎಲ್ಲಿದ್ದೀರಾ ರಾಹುಲ್ ದ್ರಾವಿಡ್​'...'ಕ್ರಿಕೆಟ್ ವಾಲ್​'​ ಕರೆತರಲು ಭಾರೀ ಕಸರತ್ತು - ವೀಕೆಂಡ್ ವಿಥ್ ರಮೇಶ್​

ರಾಹುಲ್ ದ್ರಾವಿಡ್ ಅವರನ್ನು ಕನ್ನಡದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಕರೆತರಲು ಸೋಷಿಯಲ್ ಮೀಡಿಯಾ ಅಭಿಯಾನ ಶುರುವಾಗಿದೆ. ಫೇಸ್​ಬುಕ್​, ಟ್ವಿಟ್ಟರ್​, ವಾಟ್ಸಾಪ್​ಗಳಲ್ಲಿ #WWRDravid (we want Rahul Dravid) ಹ್ಯಾಷ್ ಟ್ಯಾಗ್​ನಡಿ ಪೋಸ್ಟ್​ಗಳು ರಾರಾಜಿಸುತ್ತಿವೆ.

ಚಿತ್ರಕೃಪೆ : Zee kannada Facebook
author img

By

Published : Apr 19, 2019, 9:04 PM IST

ಕನ್ನಡದ 'ವೀಕೆಂಡ್ ವಿಥ್ ರಮೇಶ್​' ಕಾರ್ಯಕ್ರಮಕ್ಕೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬರಬೇಕು ಅನ್ನೋದು ಕನ್ನಡಿಗರ ಒತ್ತಾಸೆ. ​ಮೊದಲ ಸೀಸನ್​ನಿಂದಲೂ 'ರಾಹುಲ್ ಕರೆತನ್ನಿ' ಎನ್ನುವ ಕೂಗು ಝೀ ವಾಹಿನಿಯ ಕದ ತಟ್ಟುತ್ತಲೇ ಇದೆ.

  • " class="align-text-top noRightClick twitterSection" data="">

ಕಾರ್ಯಕ್ರಮದ ತಂಡ ಕೂಡ 'ಕ್ರಿಕೆಟ್ ವಾಲ್​'ಗೆ ಪತ್ರ ಬರೆದು ಆಹ್ವಾನ ನೀಡಿದೆ. ಆದರೆ, ಈ ಬಗ್ಗೆ ದ್ರಾವಿಡ್ ಅವರಿಂದ ಯಾವ ರಿಯಾಕ್ಷನ್ ಕೂಡ ಬಂದಿಲ್ಲ. ಈಗಾಗಲೇ ಪ್ರಾರಂಭವಾಗಿರುವ ನಾಲ್ಕನೇ ಸೀಸನ್​ಗಾದ್ರೂ ರಾಹುಲ್ ಅವರನ್ನು ಸಾಧಕರ ಸೀಟ್​ ಮೇಲೆ ಕೂರಿಸಲೇ ಬೇಕು ಅನ್ನೋ ಸಂಕಲ್ಪ ತೊಟ್ಟಿರುವ ವಾಹಿನಿ ಹೊಸ ಮಾರ್ಗ ಕಂಡುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ #WWRDravid (we want Rahul Dravid) ಹ್ಯಾಷ್ ಟ್ಯಾಗ್​ನಡಿ ಅಭಿಯಾನ ಪ್ರಾರಂಭಿಸಿದೆ.

#WWRDravid ಎಂದು ಎಲ್ಲರೂ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿ. ದ್ರಾವಿಡ್ ಅವರಿಗೆ ಟ್ಯಾಗ್​ ಮಾಡಿ. ಈ ಮಾಡುವ ಮೂಲಕ ಅವರನ್ನು ಸಾಧಕರ ಸೀಟ್'ಗೆ ಕರೆತರುವ ಪ್ರಯತ್ನ ಮಾಡೋಣ ಎಂದು zee kannada ವಾಹಿನಿ ಕೇಳಿಕೊಂಡಿದೆ. ಅವರ ಈ ನೂತನ ಪ್ರಯತ್ನಕ್ಕೆ ಭಾರೀ ರೆಸ್ಪಾನ್ಸ್​ ಸಿಕ್ಕಿದೆ. ನಿನ್ನೆಯಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ವಾಹಿನಿಯ ಅಧಿಕೃತ ಪೇಜ್​ನ ಪೋಸ್ಟ್​ ಶೇರ್ ಮಾಡಿದ್ದಾರೆ. 600 ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿ, ಲೆಜೆಂಡ್ ತಾರೆ ಕಾರ್ಯಕ್ರಮಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದಾರೆ. ವಾಟ್ಸಾಪ್ ಸ್ಟೇಟಸ್​​ನಲ್ಲಿಯೂ we want Rahul Dravid ಪೋಸ್ಟ್​ಗಳು ಹರಿದಾಡುತ್ತಿವೆ. ವಾಹಿನಿಯ ಈ ಪ್ರಯತ್ನ ಸಫಲವಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.