ETV Bharat / sitara

'14 ಡೇಸ್​' ಕ್ವಾರಂಟೈನ್​​​ನಲ್ಲಿ ಇದ್ದ ಯತಿರಾಜ್​ ಆ ಕೆಟ್ಟ ನಿರ್ಧಾರ ಮಾಡಿದ್ದೇಕೆ...?

author img

By

Published : Jul 18, 2020, 10:24 AM IST

ಸಿನಿಮಾ, ಧಾರಾವಾಹಿ ಚಿತ್ರೀಕರಣ ಮೊದಲಿನಂತೆ ನಡೆಯುತ್ತಿಲ್ಲವಾದರೂ ನಟ, ನಿರ್ದೇಶಕ ಯತಿರಾಜ್ ಮಾತ್ರ ಮನೆಯಲ್ಲಿ ಸುಮ್ಮನೆ ಕೂರದೆ ಕಿರುಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆ. ಇದೀಗ '14 ಡೇಸ್' ಎಂಬ ಕಿರುಚಿತ್ರವನ್ನು ಅವರು ತಯಾರಿಸಿದ್ದಾರೆ.

Yethiraj direction 14 days short film
ಯತಿರಾಜ್​

ಕೊರೊನಾ ಲಾಕ್​ಡೌನ್ ಸಮಯದಲ್ಲಿ 'ಕೊರೊನಾ ಕಾಣಿಕೆ', 'ಸೌಂಡ್' ಕಿರುಚಿತ್ರಗಳನ್ನು ಮಾಡಿ ಸಮಾಜಕ್ಕೆ ಸಂದೇಶ ನೀಡುತ್ತಿರುವ ನಟ, ನಿರ್ದೇಶಕ ಯತಿರಾಜ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ನಟ, ಬರಹಗಾರ, ನಿರ್ಮಾಪಕ, ನಿರ್ದೇಶಕ ಯತಿರಾಜ್​​ ಇದೀಗ '14 ಡೇಸ್' ಎಂಬ ಕಿರುಚಿತ್ರವನ್ನು ತಯಾರಿಸಿದ್ದು ಕಲಾವಿದ ಅಕಾಡೆಮಿ ಯೂಟ್ಯೂಬ್​​ನಲ್ಲಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕೊರೊನಾ ವೈರಸ್​ನಿಂದ 14 ದಿನಗಳ ಕಾಲ ಒಬ್ಬರೇ ಮನೆಯಲ್ಲಿ ಅಥವಾ ರೂಂನಲ್ಲಿ ಜೀವಿಸಬೇಕಾದ ಪರಿಸ್ಥಿತಿಯಲ್ಲಿ ಮನಸ್ಸಿನಲ್ಲಿ ಆಗುವ ಅಲ್ಲೋಲ ಕಲ್ಲೋಲಗಳ ಬಗ್ಗೆ ಯತಿರಾಜ್ ಈ ಕಿರುಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.

  • " class="align-text-top noRightClick twitterSection" data="">

ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ 14 ವರ್ಷಗಳ ಕಾಲ ಮಡದಿ ಸೀತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಕಾಡಿಗೆ ಹೋದದ್ದು ಎಲ್ಲರಿಗೂ ತಿಳಿದಿದೆ. ಈ ಕಲಿಯುಗದಲ್ಲಿ 14 ದಿನಗಳ ಕ್ವಾರಂಟೈನ್​​ಲ್ಲಿ ಒಬ್ಬನೇ ಇರಲು ಮನುಷ್ಯ ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ಈ ಕಿರುಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಯತಿರಾಜ್​ ಜೊತೆ ಮಜಾ ಟಾಕೀಸ್ ಖ್ಯಾತಿಯ ಪವನ್ ಕೂಡಾ ಅಭಿನಯಿಸಿದ್ದಾರೆ.

ರೂಮ್​ನಲ್ಲಿ ಕ್ವಾರಂಟೈನ್ ಆಗುವ ವ್ಯಕ್ತಿ ತಲೆಯಲ್ಲಿ ಅನೇಕ ಯೋಚನೆಗಳು ತಿರುಗುತ್ತಿರುತ್ತದೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕೂಡಾ ಮಾಡುತ್ತಾನೆ. ಆದರೆ ಅದೆಲ್ಲವೂ ಕನಸು ಎಂದು ಅರಿವಾಗುತ್ತದೆ. 6:47 ನಿಮಿಷ ಅವಧಿಯ ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣವನ್ನು ಕೂಡಾ ಯತಿರಾಜ್ ಅವರೇ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.