ETV Bharat / sitara

ಹೋಟೆಲ್​​ನಲ್ಲಿ ವೆಯ್ಟರ್​​​​​​​​​​​​​​​​​​​​​​​​​​​​​​​​​ ಮೇಲೆ ಕಿಚ್ಚ ಸುದೀಪ್ ಕೋಪಗೊಂಡಿದ್ದೇಕೆ?

ಕಲರ್ಸ್​ ಕನ್ನಡ ಬಿಗ್​ಬಾಸ್ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದ್ದು ತನ್ನ ಅಧಿಕೃತ ಇನ್ಸ್​​​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಸುದೀಪ್​ ಹೋಟೆಲ್​​​​ ಒಂದರಲ್ಲಿ ಕಾಫಿ ಕುಡಿಯಲು ಹೋದಾಗ ವೆಯ್ಟರ್ ಜೊತೆ ನಡೆಯುವ ಮಾತುಕತೆಯ ಸನ್ನಿವೇಶವನ್ನು ಈ ಪ್ರೋಮೋದಲ್ಲಿ ತೋರಿಸಲಾಗಿದೆ.

ಕಿಚ್ಚ ಸುದೀಪ್
author img

By

Published : Oct 11, 2019, 5:25 PM IST

Updated : Oct 11, 2019, 5:36 PM IST

ಅಕ್ಟೋಬರ್ 13 ಅಂದರೆ ಇದೇ ಭಾನುವಾರದಿಂದ ಕಿರುತೆರೆಗೆ ಲಗ್ಗೆ ಇಡುತ್ತಿರುವ ಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7 ರತ್ತ ಎಲ್ಲರ ದೃಷ್ಟಿ ಇದೆ. ಎಲ್ಲಿ ಹೋದರೂ ಈ ಬಾರಿ ಬಿಗ್​ಬಾಸ್​ ಮನೆ ಕದ ತಟ್ಟುವವರು ಯಾರು ಎಂಬುದೇ ಚರ್ಚೆ.

  • " class="align-text-top noRightClick twitterSection" data="">

ಸುದೀಪ್ ಹೋಟೆಲ್​​​​​​ ಒಂದಕ್ಕೆ ಕಾಫಿ ಕುಡಿಯಲು ಹೋದಾಗ ಸಪ್ಲೈಯರ್ ಮೇಲೆ ಕೋಪಗೊಂಡು 'ಅಕ್ಟೋಬರ್ 13 ರಂದು ಶುರು ಆಗ್ತಿದೆ, ಈ ಬಾರಿ ಎಲ್ಲರೂ ಸೆಲಬ್ರಿಟಿಗಳೇ ಇರ್ತಾರೆ. ಸೀರಿಯಲ್​ನೋರು ಇರ್ತಾರೆ, ಸಿನಿಮಾದೋರೂ ಇರ್ತಾರೆ, ಹುಡುಗಿಯರೂ ಇರ್ತಾರೆ, ಹುಡುಗರೂ ಇರ್ತಾರೆ, ಸೀಕ್ರೇಟ್ ರೂಮ್ ಇದೆ, ಸ್ಟೋರ್ ರೂಮ್ ಇದೆ, ನಡೆಸಿಕೊಡುತ್ತಿರುವುದೂ ನಾನೇ, ಇದು ಸಾಕಾ ಇನ್ನೇನಾದ್ರೂ ಬೇಕಾ ಎಂದು ಒಂದೇ ಉಸಿರಿಗೆ ಹೇಳಿದ್ದಾರೆ. ಅಷ್ಟಕ್ಕೂ ಈ ಡೈಲಾಗ್ ಇರುವುದು ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಬಿಗ್​​ಬಾಸ್ ಹೊಸ ಪ್ರೋಮೋದಲ್ಲಿ. ಸಾರ್ವಜನಿಕರ ಪ್ರಶ್ನೆಗಳಿಗೆ ಹೈರಾಣಾಗಿರುವ ಕಿಚ್ಚ ಪ್ರಶ್ನೆ ಕೇಳುವ ಮುನ್ನವೇ ಎಲ್ಲವನ್ನೂ ಹೇಳಿ ನಿಟ್ಟುಸಿರು ಬಿಡುವ ಸನ್ನಿವೇಶವನ್ನು ಹೊಸದಾಗಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸೃಷ್ಟಿಸಲಾಗಿದೆ.

ಪ್ರೋಮೋದಲ್ಲಿರುವಂತೆ ಹೋಟೆಲ್​ನಲ್ಲಿ ಸ್ನೇಹಿತನೊಂದಿಗೆ ಸುದೀಪ್​ ಕುಳಿತಿದ್ದಾಗ, ಅವರ ಬಳಿ ಬರುವ ವೆಯ್ಟರ್​​​​​,​ ಸರ್...​ ಎಂದು ಹೇಳಿ ಮಾತು ಮುಂದುವರಿಸುವ ಮುನ್ನವೇ ಬಿಗ್​ಬಾಸ್​ ಬಗ್ಗೆಯೇ ಕೇಳುತ್ತಿದ್ದಾರೆ ಎಂದು ಭಾವಿಸಿ ಕಿಚ್ಚ ಮೇಲಿನ ಡೈಲಾಗ್ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ವೆಯ್ಟರ್​​​​, ಅಲ್ಲಾ ಸಾರ್​ ಏನ್​ ತೆಗೆದುಕೊಳ್ಳುತ್ತೀರಾ ಎಂದು ಕೇಳಲು ಬಂದೆ ಎಂದಾಗ ಸುದೀಪ್​ ಸಮಾಧಾನ ಮಾಡಿಕೊಂಡು ನಗುತ್ತಾ, ಎರಡು ಕಾಫಿ ಸಾಕಪ್ಪ ಎನ್ನುತ್ತಾರೆ. ಮತ್ತೆ ಮಾತನಾಡುವ ವೆಯ್ಟರ್​, ಅದೆಲ್ಲಾ ಸರಿ ಸರ್​ ಲಕ್ಷುರಿ ಬಜೆಟ್​ನಲ್ಲಿ ಬಿಯರ್​ ಯಾಕೆ ಕೊಡಲ್ಲ ಎಂದು ಸುದೀಪ್​ಗೆ ಪಂಚಿಂಗ್​​ ಪ್ರಶ್ನೆ ಕೇಳಿದಾಗ ಸುದೀಪ್ ಬೆರಗಾಗುವ ಸನ್ನಿವೇಶವನ್ನು ಈ ಪ್ರೋಮೋದಲ್ಲಿ ತೋರಿಸಲಾಗಿದೆ. ಪ್ರೋಮೋವನ್ನು ಕಲರ್ಸ್​ ಕನ್ನಡ ಅಧಿಕೃತ ಇನ್​ಸ್ಟಾಗ್ರಾಂ, ಫೇಸ್​​​ಬುಕ್​​​​​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದೆ.

Intro:ಸುದೀಪ್ ಪತ್ರಿಕಾಗೋಷ್ಠಿಯ ಫೋಟೋ ಇದ್ದರೆ ಬಳಸಿಕೊಳ್ಳಿBody:ಬೆಂಗಳೂರು: ಇದೇ ಭಾನುವಾರದಿಂದ ಕಿರುತೆರೆಗೆ 7ನೇ ಬಾರಿ ಲಗ್ಗೆಯಿಡುತ್ತಿರುವ ರಿಯಾಲಿಟಿ ಶೋ “ಬಿಗ್​ಬಾಸ್​” ಮೇಲೆ ಸಾಕಷ್ಟು ಕುತೂಹಲ ಗರಿಗೆದರಿದೆ. ಎಲ್ಲೇ ಹೋದರು ಈ ಬಾರಿ ಬಿಗ್​ ಹೌಸ್​ ಕದ ತಟ್ಟುವವರು ಯಾರೆಂಬುದೇ ಚರ್ಚೆಯಾಗಿದೆ. ಇದರ ನಡುವೆ ಯಾರು ಹೋಗಬಹುದು ಎಂಬ ಊಹೆಗಳು ನಡೆಯುತ್ತಿವೆ. ಈಗಾಗಲೇ ಹಲವರ ಹೆಸರು ಜನರ ಬಾಯಲ್ಲಿ ಬಂದು ಹೋಗಿವೆ. ಇದೇ ವಿಚಾರವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಕಾರ್ಯಕ್ರಮದ ಪ್ರೋಮೋಗಳು ತಯಾರಾಗಿರುವುದು ಶೋ ಮೇಲೆ ಮತ್ತಷ್ಟು ಆಸಕ್ತಿ ಹುಟ್ಟುವಂತೆ ಮಾಡಿದೆ.

https://www.instagram.com/p/B3a8zPihUcf/?utm_source=ig_web_copy_link

ಸಾರ್ವಜನಿಕರ ಪ್ರಶ್ನೆಗಳಿಗೆ ಹೈರಾಣಾಗಿ ಪ್ರಶ್ನೆ ಕೇಳುವ ಮುನ್ನವೇ ಎಲ್ಲವನ್ನು ಹೇಳಿ ನಿಟ್ಟುಸಿರುವ ಬಿಡುವ ಸನ್ನಿವೇಶವನ್ನು ಹೊಸದಾಗಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸೃಷ್ಟಿಸಲಾಗಿದೆ. ಪ್ರೋಮೋದಲ್ಲಿರುವಂತೆ ಹೋಟೆಲ್​ನಲ್ಲಿ ಸ್ನೇಹಿತನ ಜತೆ ಸುದೀಪ್​ ಕುಳಿತಿದ್ದಾಗ, ಅವರ ಬಳಿ ಬರುವ ವೇಯಿಟರ್​ ಸರ್​ ಎಂದು ಮಾತು ಮುಂದುವರಿಸುವ ಮುನ್ನವೇ ಬಿಗ್​ಬಾಸ್​ ಬಗ್ಗೆಯೇ ಕೇಳುತ್ತಿದ್ದಾರೆ ಎಂದು ಭಾವಿಸಿ, ಅಕ್ಟೋಬರ್ 13ರಿಂದ ಶುರುವಾಗುತ್ತಿದೆ. ಈ ಬಾರಿ ಎಲ್ಲರೂ ಸೆಲೆಬ್ರಿಟಿಗಳೇ ಇರುತ್ತಾರೆ. ಸೀರಿಯಲ್​, ಸಿನಿಮಾದವರು, ಹುಡುಗರು ಹಾಗೂ ಹುಡುಗಿಯರು ಇರುತ್ತಾರೆ. ಸೀಕ್ರೆಟ್​ ರೂಮ್​ ಮತ್ತು ಸ್ಟೋರ್​ ರೂಮ್​ ಇದೆ. ಈ ಬಾರಿಯು ನಾನೇ ನಡೆಸಿಕೊಡುತ್ತಿರುವುದು ಇಷ್ಟೇ ಸಾಕಾ ಇನ್ನೇನಾದರೂ ಬೇಕಾ ಎಂದು ಸುದೀಪ್​ ಹೇಳುತ್ತಾರೆ. ಅದಕ್ಕೆ ವೇಯಿಟರ್​ ಅಲ್ಲ ಸಾರ್​ ಏನ್​ ತೆಗೆದುಕೊಳ್ಳುತ್ತೀರಾ ಎಂದು ಕೇಳಲು ಬಂದೆ ಎಂದಾಗ ಸುದೀಪ್​ ಎರಡು ಕಾಫಿ ಸಾಕಪ್ಪ ಎನ್ನುತ್ತಾರೆ. ಅದಕ್ಕೆ ವೆಯಿಟರ್​ ಅದೆಲ್ಲಾ ಸರಿ ಸರ್​ ಲಕ್ಷುರಿ ಬಜೆಟ್​ನಲ್ಲಿ ಬಿಯರ್​ ಯಾಕೆ ಕೊಡಲ್ಲ ಎಂದು ಸುದೀಪ್​ಗೆ ಪಂಚಿಂಗ್​​ ಡೈಲಾಗ್​ ಹೊಡೆದಾಗ ಸುದೀಪ್ ಬೆರಗಾಗುವ ಸನ್ನಿವೇಶ ವಿಡೀಯೊದಲ್ಲಿದೆ.​

ವಿಡಿಯೋವನ್ನು ಕಲರ್ಸ್​ ಕನ್ನಡ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಏನೇನ್ ಇರುತ್ತೆ, ಯಾರ್‌ಯಾರೆಲ್ಲಾ ಇರ್ತಾರೆ ಅನ್ನೋದು ಅಕ್ಟೋಬರ್ 13, ಸಂಜೆ 6 ಕ್ಕೆ ಗೊತ್ತಾಗುತ್ತೆ. ಸದ್ಯಕ್ಕೆ ಕಾಫಿ ಕುಡೀರಿ ಎಂದು ಬರೆದುಕೊಂಡಿದ್ದಾರೆ.

Conclusion:
Last Updated : Oct 11, 2019, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.