ETV Bharat / sitara

ಬಿಗ್​ಬಾಸ್-8 ಸ್ಪರ್ಧಿಗಳ ಭೇಟೆ ಶುರು....ಶೋ ಆರಂಭವಾಗುವುದು ಯಾವಾಗ...? - Big Boss season 8

ಕನ್ನಡ ಬಿಗ್​ಬಾಸ್​ 8ನೇ ಸೀಸನ್ 2021 ಆರಂಭದಲ್ಲೇ ಶುರುವಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸ್ಪರ್ಧಿಗಳ ಭೇಟೆಯೂ ಆರಂಭವಾಗಿದ್ದು, ದೊಡ್ಮನೆ ರಿಪೇರಿ ಕಾರ್ಯಗಳು ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ವಾಹಿನಿ ಈ ಸಂಬಂಧ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ig Boss season 8
ಬಿಗ್​​ಬಾಸ್​​ ಸೀಸನ್ 8 ಆರಂಭಕ್ಕೆ ತಯಾರಿ
author img

By

Published : Nov 19, 2020, 10:15 AM IST

ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳ ಪೈಕಿ ಬಿಗ್​​​​​​​​​​​​​​​ಬಾಸ್ ಕೂಡಾ ಒಂದು. ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಬಿಗ್​​​​​​​ಬಾಸ್ ಇತರ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿದೆ. ಆದರೆ ಕನ್ನಡದಲ್ಲಿ ಇನ್ನೂ ಆರಂಭವಾಗಿಲ್ಲ. ಇದಕ್ಕೆ ಕಾರಣ ಕೊರೊನಾ ಭೀತಿ. ಈಗಾಗಲೇ ಸೀಸನ್ 8 ಆರಂಭವಾಗಬೇಕಿತ್ತು. ಆದರೆ ಮುಂದಿನ ಸೀಸನ್​​​ಗೆ ಈಗ ತಯಾರಿ ನಡೆಯುತ್ತಿದೆ.

ig Boss season 8
ಬಿಗ್​​ಬಾಸ್​​ ಸೀಸನ್ 8 ಆರಂಭಕ್ಕೆ ತಯಾರಿ

ಸೀಸನ್​​​ 8 ಬಿಗ್​​ಬಾಸ್​​​​​ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು 2021 ಆರಂಭದಲ್ಲಿ ಕಾರ್ಯಕ್ರಮ ಆರಂಭವಾಗಲಿದೆಯಂತೆ. ಬೆಂಗಳೂರಿನ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್​​​ಬಾಸ್​​​​​​​​​​​​ ಮನೆಯ ರಿಪೇರಿ ಕಾರ್ಯ ಶುರುವಾಗಿದೆ. ಬಿಗ್​​​​​​​​​​​​​​​​​​​​​ಬಾಸ್ ಶೋ ನಡೆಸುವುದಕ್ಕೆ ಬೇಕಾದ ರೀತಿಯಲ್ಲಿ ಮನೆಯನ್ನು ತಯಾರು ಮಾಡುವಲ್ಲಿ ಒಂದು ತಂಡ ಕೆಲಸ ಆರಂಭಿಸಿದೆ. ಶೀಘ್ರವೇ ಕ್ಯಾಮರಾಗಳನ್ನು ಫಿಕ್ಸ್ ಮಾಡುವ ಕೆಲಸಗಳು ಆರಂಭಗೊಳ್ಳಲಿದೆ. ಇದರ ಜೊತೆಗೆ ದೊಡ್ಮನೆಯೊಳಗೆ ಒಂದಷ್ಟು ತಾಂತ್ರಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಬಾರಿಯ ಸ್ಪರ್ಧಿಗಳ ಮನ ಸೆಳೆಯಲು ವಿಶೇಷ ರೀತಿಯಲ್ಲಿ ಮನೆಯನ್ನು ತಯಾರು ಮಾಡಲು ನಿರ್ಧರಿಸಿದ್ದು, ಮನೆಯ ಕೆಲಸಗಳು ಪೂರ್ಣಗೊಳ್ಳಲು ಒಂದು ತಿಂಗಳಾದರೂ ಸಮಯ ಬೇಕು ಎಂದು ಬಿಗ್​​ಬಾಸ್ ಆಯೋಜಕರು ಹೇಳಿದ್ದಾರೆ.

ig Boss season 8
ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್​ಬಾಸ್​​​​-8

ಮನೆ ಕಾರ್ಯ ಪೂರ್ಣಗೊಂಡ ನಂತರ ಅಧಿಕೃತವಾಗಿ ಶೋ ಯಾವಾಗ ಆರಂಭವಾಗಲಿದೆ ಎಂಬ ವಿಚಾರವನ್ನು ತಿಳಿಸಲಾಗುತ್ತದೆ. ಇದರ ಜೊತೆಗೆ ದೊಡ್ಮನೆಯೊಳಗೆ ಕಾಲಿಡುವ ಸ್ಪರ್ಧಿಗಳಿಗಾಗಿ ಹುಡುಕಾಟವೂ ಶುರುವಾಗಿದೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಯಶಸ್ವಿ 7 ಸೀಸನ್​​​​​​​​​​ಗಳನ್ನು ಪೂರೈಸಿರುವ ಬಿಗ್​​​​​​​​​​​​​​​​​ಬಾಸ್ 8 ನೇ ಸೀಸನ್ ನೋಡಲು ಕಿರುತೆರೆಪ್ರಿಯರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.