ETV Bharat / sitara

Bigg Boss-8: ವೈಷ್ಣವಿ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಹೇಗಿದೆ ಗೊತ್ತಾ? - ಕನ್ನಡ ಬಿಗ್‍ಬಾಸ್ ಸೀಸನ್​ 8

ಬಿಗ್‍ಬಾಸ್ ಮನೆಯಲ್ಲಿ ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ಪ್ರತಿ ದಿನವನ್ನು ನಾನು ಎಂಜಾಯ್ ಮಾಡಿದ್ದೇನೆ. ಬಿಗ್‍ಬಾಸ್ ಕಳುಹಿಸಿರುವ ಈ ಫೋಟೋಗಳು ಒಂದೊಂದೂ ಕೂಡ ಒಂದು ಕಥೆ ಹೇಳುತ್ತವೆ. ತುಂಬಾ ಧನ್ಯವಾದಗಳು ಎಂದು ವೈಷ್ಣವಿ ಹೇಳಿದ್ರು.

what-do-the-members-of-the-house-feel-about-vaishnavi
ವೈಷ್ಣವಿ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಹೇಗಿದೆ ಗೊತ್ತಾ?
author img

By

Published : Aug 4, 2021, 4:35 AM IST

ಈ ಹಿಂದೆ ಅರವಿಂದ್ ವಾಲ್ ಫೋಟೋ, ಈಗ ವೈಷ್ಣವಿ ಅವರ ವಾಲ್ ಫೋಟೋ. ಹೌದು, ಬಿಗ್​​ಬಾಸ್ ಮನೆಯ ಗಾರ್ಡನ್ ಏರಿಯಾ ಸಂಜೆಯಾಗುತ್ತಿದ್ದಂತೆ ದೀಪಾಲಂಕಾರಗಳಿಂದ ಕೂಡಿದ ಫೋಟೋ ವಿಜೃಂಭಿಸುತ್ತಿದೆ. ಬೆಸ್ಟ್ ಡ್ರೆಸ್​ನಲ್ಲಿ ಗೆದ್ದಿದ್ದ ವೈಷ್ಣವಿ ಅವರ ವಾಲ್ ಹಾಗೂ ಬಿಗ್‍ಬಾಸ್ ಜರ್ನಿಯ ಕ್ಯೂಟ್ ಫೋಟೋಗಳು ಎಲ್ಲರ ಗಮನ ಸೆಳೆದವು.

ಇದೇ ವೇಳೆ ವೈಷ್ಣವಿ ಅವರ ಬಗ್ಗೆ ಮನೆಯವರಿಗೆ ಇರುವ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶವನ್ನು ಬಿಗ್ ಬಾಸ್ ನೀಡಿದರು. ಎಲ್ಲರ ಅಭಿಪ್ರಾಯ ಹೀಗಿತ್ತು..

ಅರವಿಂದ್ : ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೂ ಹೇಗೆ ಇದ್ದರೋ, ಈವರೆಗೂ ಹಾಗೇ ಇದ್ದಾರೆ. ಒಳ್ಳೆಯ ಸ್ನೇಹಿತನನ್ನು ನಾನು ನಿಮ್ಮಲ್ಲಿ ಎದುರು ನೋಡುತ್ತೇನೆ.‌ ಒಳ್ಳೆಯ ಮನಸ್ಸಿನವರು. ಹೀಗೆ ಇರಿ.

ದಿವ್ಯಾ‌ ಉರುಡುಗ: ವೈಷ್ಣವಿ ನನಗೆ ಬಿಗ್‍ಬಾಸ್ ಮನೆಗಿಂತ ಬರುವ ಮೊದಲೆ ಗೊತ್ತು. ನಿಮ್ಮ ಮನಸ್ಸು ಒಳ್ಳೆಯದು. ನಿಮ್ಮ ನಗು, ಅಡುಗೆ, ಜೋಕ್ಸ್ ಎಲ್ಲ ನನಗೆ ಇಷ್ಟ. ನನಗೆ ಹುಷಾರಿಲ್ಲದಿದ್ದಾಗ ನನ್ನನ್ನು ಕೇರ್ ಮಾಡಿದ್ದೀರಾ. ತುಂಬಾ ಧನ್ಯವಾದಗಳು.

ಪ್ರಶಾಂತ್ ಸಂಬರಗಿ: ಈ ಮನೆಯಲ್ಲಿ ಮನಸ್ಸು ಬಿಚ್ಚಿ ಮಾತನಾಡಲು ಇರುವ ಏಕೈಕ ವ್ಯಕ್ತಿ ಅಂದ್ರೆ ವೈಷ್ಣವಿ. ಯಾರನ್ನಾದ್ರೂ ನಂಬಬೇಕು, ಹೃದಯದಿಂದ ಮಾತನಾಡಬೇಕು ಎಂದರೆ ಅದು ವೈಷ್ಣವಿ. ಮೊದಲು ಟಾಸ್ಕ್ ಆಡದ ವೈಷ್ಣವಿ ನಂತರ ಚೆನ್ನಾಗಿ ಆಡುತ್ತಿದ್ದಾರೆ. ತಾಯಿ ಗುಣ ಹೊಂದಿರುವ ವೈಷ್ಣವಿಗೆ ಒಳ್ಳೆಯದಾಗಲಿ.

ದಿವ್ಯಾ ಸುರೇಶ್: ವೈಷ್ಣವಿ ನಿನ್ನ ಹೆಸರಿನಷ್ಟೇ ನೀನು ಸುಂದರವಾಗಿದ್ದೀಯಾ. ನನಗೆ ತಾಳ್ಮೆ ಬಂದಿದೆ ಎಂದರೆ ಅದುವೆ ನಿಮ್ಮಿಂದ. ನಿಮ್ಮ ನಗು, ಅಡುಗೆ, ಡ್ರೆಸ್ ಸೆನ್ಸ್, ಹೇರ್ ಸ್ಟೈಲ್ ಎಲ್ಲವೂ ನನಗಿಷ್ಟ.

ಮಂಜು ಪಾವಗಡ: ಸ್ಪರ್ಧಿನೇ ಅಲ್ಲ ಎಂದು ವೈಷ್ಣವಿಗೆ ಹೇಳಿದ್ದೆ. ಆದರೆ ನಂತರ ವೈಷ್ಣವಿ ಆಟವೇ ಬದಲಾಯಿತು. ತುಂಬಾ ತರ್ಲೆ, ಚೇಷ್ಟೆ ಮಾಡಿದ್ದೇವೆ ತುಂಬಾ ಸಂತೋಷವಾಗಿದೆ.

ಇದೇ ವೇಳೆ ಮಾತನಾಡಿದ ವೈಷ್ಣವಿ, ಒಂದು ದಿನ ಮಂಜಣ್ಣ, ಅವರು ನನಗೆ ಕಾಂಪಿಟೇಟರ್ ಅಲ್ಲ ಎಂದು ಕಮೆಂಟ್ ಮಾಡಿದ್ದರು. ನಾನು ಅದನ್ನು ಸೀರಿಯಸ್ ಚಾಲೆಂಜ್ ಆಗಿ ತೆಗೆದುಕೊಂಡೆ. ನಿನ್ನ ಬೆಸ್ಟ್ ನೀನು ಮಾಡು ಎಂದು ನನಗೆ ಕೆಲವು ಕಿವಿಮಾತು ಹೇಳಿದ್ದರು. ಅವರು ಬೂಸ್ಟ್, ಮೋಟಿವ್ ಮಾಡಿದ್ದರಿಂದ ನಾನು ಇಲ್ಲಿವರೆಗೂ ಬಂದಿದ್ದೇನೆ ಥ್ಯಾಕ್ಸ್ ಮಂಜಣ್ಣ ಎಂದರು.

ಬಿಗ್‍ಬಾಸ್ ಮನೆಯಲ್ಲಿ ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ಪ್ರತಿ ದಿನವನ್ನು ನಾನು ಎಂಜಾಯ್ ಮಾಡಿದ್ದೇನೆ. ಬಿಗ್‍ಬಾಸ್ ಕಳುಹಿಸಿರುವ ಈ ಫೋಟೋಗಳು ಒಂದೊಂದೂ ಕೂಡ ಒಂದು ಕಥೆ ಹೇಳುತ್ತವೆ. ತುಂಬಾ ಧನ್ಯವಾದಗಳು ಎಂದು ವೈಷ್ಣವಿ ಅನಿಸಿಕೆ‌ ಹಂಚಿಕೊಂಡರು.

ಇದನ್ನೂ ಓದಿ: 'ಹೆಡ್ ಬುಷ್' ನಿರ್ಮಾಣ ಜವಾಬ್ದಾರಿ ಹೊತ್ತ ಡಾಲಿ ಧನಂಜಯ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.