ಕಾರ್ಟೂನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...? ಮಕ್ಕಳು ಬಹಳ ಇಷ್ಟಪಡುವ ಕಾರ್ಟೂನನ್ನು ದೊಡ್ಡವರು ಕೂಡಾ ನೋಡದೆ ಇರಲು ಸಾಧ್ಯವಿಲ್ಲ. ಅದರಲ್ಲೂ ಟಾಮ್ ಅ್ಯಂಡ್ ಜೆರ್ರಿಯಂಥ ಕಾರ್ಟೂನ್ ಇದ್ದರೆ ಸಾಕು ಬೇರೇನೂ ಬೇಡ.
ಒಂದು ಹೊತ್ತು ಕಾರ್ಟೂನ್ ನೋಡಿದರೆ ಸಾಕು, ಮನಸ್ಸಿಗೆ ಏನೂ ಒಂದು ರೀತಿಯ ಸಂತೋಷ ಎನಿಸುತ್ತದೆ. ಮಾತ್ರವಲ್ಲ, ಏನಾದರೂ ಬೇಸರವಿದ್ದರೆ ಕ್ಷಣಾರ್ಧದಲ್ಲಿ ಮಾಯವಾಗಿಬಿಡುತ್ತದೆ. ಇದೀಗ ಕಿರುತೆರೆಗೂ ಕಾರ್ಟೂನ್ ಗೂ ಏನು ಸಂಬಂಧ ಎಂದು ನೀವು ಊಹಿಸುತ್ತಿದ್ದೀರಾ? ನಿಮ್ಮ ನೆಚ್ಚಿನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿ ದಿನ ಸಂಜೆ ಒಂದು ಗಂಟೆ ಕಾರ್ಟೂನ್ ಪ್ರಸಾರವಾಗಲಿದೆ. ಅದು ಕೂಡಾ ಕನ್ನಡ ಭಾಷೆಯಲ್ಲಿ. ಸಾಮಾನ್ಯವಾಗಿ ಕನ್ನಡದಲ್ಲಿ ಕಾರ್ಟೂನ್ ಪ್ರಸಾರವಾಗುವುದು ಬಹಳ ಅಪರೂಪ. ಅಂತದ್ದರಲ್ಲಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಟೂನ್ ಪ್ರಸಾರವಾಗುತ್ತಿದೆ. ವಾಲ್ಟರ್ & ತಂದೂರಿ ಎಂಬ ಹೆಸರಿನ ಕಾರ್ಟೂನ್ ಪ್ರತಿದಿನ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಕಾರ್ಟೂನ್ ಕಲರ್ಸ್ ಸೂಪರ್ ವಾಹಿನಿಯ ಪ್ರೇಕ್ಷಕರಿಗೆ, ಅದರಲ್ಲೂ ಮಕ್ಕಳಿಗೆ ಮನರಂಜನೆ ನೀಡುವುದಂತೂ ನಿಜ.