ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ 'ಮತ್ತೆ ವಸಂತ'ದಿಂದ ನಾಯಕ ನಟ ವಿವೇಕ್ ಸಿಂಹ ಅವರು ಹೊರ ಬಂದಿದ್ದಾರೆ. ಈ ಕುರಿತು ಅವರು ಇನ್ಸ್ಟಾಗ್ರಾಂ ಮೂಲಕ ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ನಾನು ಮತ್ತೆ ವಸಂತ ಧಾರಾವಾಹಿಯಿಂದ ಹೊರ ಬಂದಿದ್ದೇನೆ. ನಿಜಕ್ಕೂ ಒಂದು ಅದ್ಭುತ ಪಯಣ. ಈ ಸುಂದರವಾದ ಪಯಣವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಸಹನಟರಾದ ಅಕ್ಷತಾ ದೇಶಪಾಂಡೆ, ಕಿರಣ್‌ಕುಮಾರ್, ಕೃಷ್ಣರಾಜ್ ಶೆಟ್ಟಿ, ಜಯದೇವ ಮೋಹನ್, ಸ್ಪಂದನಾ ಪ್ರಸಾದ್ ಜೊತೆಗೆ ತಂತ್ರಜ್ಞರು, ಮೇಕಪ್ ಆರ್ಟಿಸ್ಟ್, ಲೈಟ್ ಬಾಯ್ಸ್ ಮಾತ್ರವಲ್ಲ ಧಾರಾವಾಹಿ ತಂಡದಲ್ಲಿರುವ ಪ್ರತಿಯೊಬ್ಬರನ್ನು ಕೂಡ ನಾನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮತ್ತೆ ವಸಂತ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವಂತೆ ಮಾಡಿದ ನಿರ್ಮಾಪಕರಿಗೆ, ಸ್ಟಾರ್ ಸುವರ್ಣ ವಾಹಿನಿಯವರಿಗೆ ಧನ್ಯವಾದಗಳು' ಎಂದು ವಿವೇಕ್ ಸಿಂಹ ಬರೆದುಕೊಂಡಿದ್ದಾರೆ.
ಸೌಭಾಗ್ಯವತಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ವಿವೇಕ್ ಸಿಂಹ ಜನುಮದ ಜೋಡಿ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ತದ ನಂತರ ಮಹಾದೇವಿ ಧಾರಾವಾಹಿಯಲ್ಲಿ ಸೂರ್ಯ ಎಂಬ ರಗಡ್ ಲುಕ್ನಲ್ಲಿ ನಟಿಸಿದ ವಿವೇಕ್ ಸಿಂಹ, ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಮಗನಾಗಿ ಕಾಣಿಸಿಕೊಂಡಿದ್ದ.
ನಟನೆಯ ಹೊರತಾಗಿ ವಿವೇಕ್ ಸಿಂಹ ಅದ್ಭುತ ನೃತ್ಯಗಾರರೂ ಹೌದು. ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ನಲ್ಲಿ ಭಾಗವಹಿಸಿರುವ ವಿವೇಕ್ ಸಿಂಹ ವಿಭಿನ್ನ ಶೈಲಿಯ ನೃತ್ಯದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದರು.