'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ನಿನ್ನೆಯ ಸಂಚಿಕೆಯಲ್ಲಿ ನಟ, ರಂಗಭೂಮಿ ಕಲಾವಿದ ಬಿರಾದರ್ ಅತಿಥಿಯಾಗಿ ಆಗಮಿಸಿ ತಮ್ಮ ಜೀವನದ ಪ್ರಮುಖ ಘಟನೆಗಳ ಬಗ್ಗೆ ವೀಕ್ಷಕರ ಬಳಿ ಹಂಚಿಕೊಂಡರು.
- " class="align-text-top noRightClick twitterSection" data="">
ಬಿರಾದರ್ ಅಭಿನಯಿಸಿದ ಮೊದಲ ಸಿನಿಮಾ 'ಬರ'. ಆ ಚಿತ್ರದಲ್ಲಿ ಅಭಿನಯಿಸಲು ತಮಗೆ ಹೇಗೆ ಅವಕಾಶ ದೊರೆಯಿತು ಎಂಬುದನ್ನು ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಒಮ್ಮೆ ಅನಂತ್ನಾಗ್ ಹಾಗೂ ಸಿನಿಮಾ ತಂಡ 'ಬರ' ಚಿತ್ರದ ಶೂಟಿಂಗ್ಗಾಗಿ ಬೀದರ್ಗೆ ಬಂದಿದ್ದಾಗ ಅಲ್ಲಿ ಬಹಳ ಬಿಸಿಲು ಇತ್ತಂತೆ. ಈ ಬಿಸಿಲಿನಲ್ಲಿ ಮೊಸರು, ಮಜ್ಜಿಗೆ ಇಲ್ಲದಿದ್ದರೆ ಆಗುವುದಿಲ್ಲ ಎಂದು ಚಿತ್ರತಂಡದ ಇತರರ ಜೊತೆ ಅನಂತ್ನಾಗ್ ಮರಾಠಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರಂತೆ. ಇದನ್ನು ಗಮನಿಸಿದ ಬಿರಾದರ್ ಮರುದಿನವೇ ಅನಂತ್ನಾಗ್ ಅವರಿಗೆ ಮೊಸರು ತಂದು ನೀಡಿದರಂತೆ.
ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಂತ್ನಾಗ್ ಬಿರಾದರ್ ಬಗ್ಗೆ ವಿಚಾರಿಸಿದ್ದಾರೆ. ಅವರು ಕೂಡಾ ರಂಗಭೂಮಿ ಕಲಾವಿದ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇದೆ ಎಂಬ ವಿಷಯ ತಿಳಿದು ಅದೇ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಕೊಡಿಸಿದ್ದಾರೆ. ಅಂದಿನಿಂದ ಸಿನಿಮಾ ವೃತ್ತಿಜೀವನ ಆರಂಭಿಸಿದ ಬಿರಾದರ್ ಇದುವರೆಗೂ ಸುಮಾರು 250 ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.