ಈ ಬಾರಿ ಬಿಗ್ಬಾಸ್ ಮನೆಗೆ ಹೋಗುವ ಸೆಲೆಬ್ರಿಟಿಗಳು ಯಾರೆಂಬ ಮಾಹಿತಿಯನ್ನು ಕಲರ್ಸ್ ಕನ್ನಡ ವಾಹಿನಿ ಇನ್ನೂ ಬಿಟ್ಟುಕೊಟ್ಟಿಲ್ಲವಾದರೂ ಕೆಲವು ಸೆಲೆಬ್ರಿಟಿಗಳ ಹೆಸರು ಅಂತಿಮವಾಗಿದೆ. ಅದರಲ್ಲಿ ಹಿರಿಯ ನಟ ಜೈಗದೀಶ್, ಕಿರುತೆರೆ ನಟಿ ಸುಜಾತ, ದುನಿಯಾ ರಶ್ಮಿ ಸೇರಿದಂತೆ ಮತ್ತಿತರರ ಹೆಸರುಗಳು ಸದ್ದು ಮಾಡ್ತಿವೆ.
![bigboss season 7](https://etvbharatimages.akamaized.net/etvbharat/prod-images/kn-bng-bb7-reffuse-ka10018_12102019175955_1210f_1570883395_485.jpg)
ಆದರೆ ಇಬ್ಬರು ಖ್ಯಾತ ನಟಿಯರು ಕೊನೆ ಗಳಿಗೆಯಲ್ಲಿ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಸ್ಫರ್ಧಿಸಲು ಹಿಂಜರಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಹಿರಿಯ ಪತ್ರಕರ್ತರೊಬ್ಬರು ಈ ಬಾರಿ ಬಿಗ್ಬಾಸ್ನಲ್ಲಿ ಭಾಗವಹಿಸುತ್ತಿರುವುದು. ಅದರಲ್ಲಿ ಸ್ಯಾಂಡಲ್ವುಡ್ ಖ್ಯಾತ ನಟಿ ಹಾಗೂ ಕಿರುತೆರೆ ಖ್ಯಾತ ನಟಿ ಇಬ್ಬರೂ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರಂತೆ. ಶಾಪಿಂಗ್ ಕೂಡಾ ಮುಗಿಸಿ ಲಗೇಜ್ ಕೂಡಾ ಪ್ಯಾಕ್ ಮಾಡಿದ್ದರಂತೆ. ಆದರೆ ಕೊನೆ ಘಳಿಗೆಯಲ್ಲಿ ಈ ಧಿಡೀರ್ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನಾಳೆ ಬೆಳಗ್ಗಿನಿಂದಲೇ ಬಿಗ್ಬಾಸ್ ಮನೆಯಲ್ಲಿ ಶೂಟಿಂಗ್ ಆರಂಭವಾಗಲಿದ್ದು ಸ್ಪರ್ಧಿಗಳ ಪಟ್ಟಿಯಲ್ಲಿ ಕೊನೆಯ ಹಂತದಲ್ಲಿ ಕೂಡಾ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.