ETV Bharat / sitara

ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ನಲ್ಲಿ ಸಂಚಾರಿ ವಿಜಯ್​ಗೆ ಗೌರವ - ಫ್ರಾಂಕ್ಲಿನ್‌ ಥಿಯೇಟರ್‌

"Always In Our Heart, Sanchari Vijay Gone Yet Not Forgotten" ಇದು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್‌ ಬೋರ್ಡ್‌ ಮೇಲೆ ಡಿಸ್‌ಪ್ಲೇ ಆಗಲಿದೆ.

Tribute to Sanchari Vijay
ದಿ. ಸಂಚಾರಿ ವಿಜಯ್​ಗೆ ಗೌರವ
author img

By

Published : Jun 29, 2021, 7:33 PM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಂದು ನಮ್ಮೊಂದಿಗಿಲ್ಲ. ಆದರೆ, ಸಂಚಾರಿ ವಿಜಯ್ ನಟಿಸಿರುವ ಚಿತ್ರಗಳು ಹಾಗೂ ಮಾಡಿರುವ ಸಮಾಜಮುಖಿ ಕೆಲಸ ಕಾರ್ಯಗಳು, ವಿಜಯ್ ನನ್ನು ನೆನಪಿಸುವಂತೆ ಮಾಡುತ್ತಿವೆ.

38 ವರ್ಷದ ವಿಜಯ್ ಚಿತ್ರರಂಗದಲ್ಲಿ ಸಾಧಿಸಬೇಕಾದದ್ದು ಸಾಕಷ್ಟಿತ್ತು. ವಿಭಿನ್ನ ಬಗೆಯ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಬೇಕಿದ್ದ ಸಂಚಾರಿ ವಿಜಯ್​​, ವಿಧಿಯ ಆಟಕ್ಕೆ ಜೂನ್ 15ರಂದು ಬೈಕ್ ಅಪಘಾತದಲ್ಲಿ ನಿಧನರಾದರು. ಇದೀಗ ದಿ. ಸಂಚಾರಿ ವಿಜಯ್​ಗೆ, ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್​​ನಿಂದ ಗೌರವ ಸಲ್ಲಿಸಲಾಗಿದೆ.

Tribute to Sanchari Vijay
ಬಿ.ಎಸ್ ಲಿಂಗದೇವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್

ಹೌದು, "Always In Our Heart, Sanchari Vijay Gone Yet Not Forgotten" ಇದು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್‌ ಬೋರ್ಡ್‌ ಮೇಲೆ ಡಿಸ್‌ಪ್ಲೇ ಆಗಲಿದೆ. ಅಗಲಿದ ಅತ್ಯದ್ಭುತ ಕಲಾವಿದ ಸಂಚಾರಿ ವಿಜಯ್‌ಗೆ ಫ್ಲಾಂಕ್ಲಿನ್‌ ಥಿಯೇಟರ್‌ನವರು ಸಲ್ಲಿಸಿದ ಗೌರವ ಇದಾಗಿದೆ.

ಈ ಬಗ್ಗೆ ನಾನು ಅವನಲ್ಲ ಅವಳು, ಸಿನಿಮಾ ನಿರ್ದೇಶಕ ಬಿ.ಎಸ್ ಲಿಂಗದೇವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್‌ಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ 'ನಾನು ಅವನಲ್ಲ ಅವಳು' ಸಿನಿಮಾದಿಂದ. ಇದೀಗ ಲಿಂಗದೇವರು ಅವರು ಫ್ರಾಂಕ್ಲಿನ್ ಚಿತ್ರಮಂದಿರದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‌ನವರು ವಿಜಯ್ ನೆನಪಲ್ಲಿ ಇಂದು Always in our Heart, Sanchari Vijay, Gone Yet Not Forgotten ಎಂಬ ಮೆಸೇಜ್ ಪ್ರದರ್ಶನ ಮಾಡೋದಿಕ್ಕೆ ಕಾರಣವು ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್‌ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕಿರಿಕ್’ ಬದಿಗೊತ್ತಿ ಒಂದಾದ ರಕ್ಷಿತ್ ಶೆಟ್ಟಿ-ಲಹರಿ ವೇಲು ಜೋಡಿ

ಬದುಕಿದ್ದಾಗ ಸಾಕಷ್ಟು ಮೆಚ್ಚುಗೆ ಕೆಲಸಗಳನ್ನು ಮಾಡಿ ಚಿತ್ರರಂಗದಲ್ಲಿ ಅಪಾರ ಪ್ರೀತಿ ಗಳಿಸಿದ ಸಂಚಾರಿ ವಿಜಯ್, ನಮ್ಮನ್ನೆಲ್ಲ ಅಗಲಿದ ನಂತರ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.