ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೀನ್ಸ್' ಕಾರ್ಯಕ್ರಮ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲಬ್ರಿಟಿಗಳು ಬಂದು ಹೋಗಿದ್ದಾರೆ. ಇತ್ತೀಚೆಗೆ ನಿರೂಪಕಿ ಅನುಶ್ರೀ ಹಾಗೂ ಸರಿಗಮಪ ಖ್ಯಾತಿಯ ಹನುಮಂತು ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದರು.
- " class="align-text-top noRightClick twitterSection" data="
">
ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6.30 ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಬಾರಿ 'ಬ್ರಹ್ಮಗಂಟು' ಧಾರಾವಾಹಿಯ ಅತ್ತೆ-ಸೊಸೆ ಗೀತಾ ಹಾಗೂ ಸುಮತಿ ಬರುತ್ತಿದ್ದಾರೆ. ಧಾರಾವಾಹಿಯಲ್ಲಿ ಸೊಸೆ ಪಾತ್ರ ಮಾಡುತ್ತಿರುವ ಗೀತಾ ಭಟ್ ಹಾಗೂ ಅತ್ತೆ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿ ಈ ಬಾರಿಯ 'ಜೀನ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂಚಿಕೆ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈ ವಾರ ಪ್ರಸಾರವಾಗಲಿದೆ. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕನ ತಾಯಿ ಸುಮತಿ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿ ಹಾಗೂ ನಾಯಕಿ ಗೀತಾ ಅಲಿಯಾಸ್ ಗುಂಡಮ್ಮ ಆ್ಯಕ್ಟಿಂಗ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತೆರೆ ಮೇಲೆ ಇವರ ನಟನೆಯನ್ನು ನೋಡಿ ಮೈ ಮರೆತಿರುವ ವೀಕ್ಷಕರು ಈಗ ರಿಯಾಲಿಟಿ ಶೋನಲ್ಲಿ ಈ ಅತ್ತೆ ಸೊಸೆಯನ್ನು ನೋಡಲಿದ್ದಾರೆ. ಸುಷ್ಮಾ ಕೆ. ರಾವ್ ನಿರೂಪಣೆಯಲ್ಲಿ ಸೊಗಸಾಗಿ ಮೂಡಿ ಬರುತ್ತಿರುವ 'ಜೀನ್ಸ್' ಕಾರ್ಯಕ್ರಮದಲ್ಲಿ ನಾಲ್ಕು ವಿಭಿನ್ನ ಟಾಸ್ಕ್ಗಳಿದ್ದು ಸ್ಪರ್ಧಿಗಳ ಜೊತೆ ಪ್ರೇಕ್ಷಕರಿಗೂ ಮನರಂಜನೆ ದೊರೆಯುವುದು ಗ್ಯಾರಂಟಿ.