ಕಲರ್ಸ್ ಕನ್ನಡದ ಖ್ಯಾತ ಕಾರ್ಯಕ್ರಮ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಆಗಸ್ಟ್ 29 ರಿಂದ ಮತ್ತೆ ಆರಂಭವಾಗುತ್ತಿರುವುದು ತಿಳಿದ ವಿಚಾರ. ವಾರಾಂತ್ಯದಲ್ಲಿ ವೀಕ್ಷಕರನ್ನು ನಕ್ಕು ನಗಿಸಲು ಸೃಜನ್ ಹಾಗೂ ತಂಡ ಮತ್ತೆ ಸಿದ್ಧವಾಗಿದೆ.
![Maja talkies](https://etvbharatimages.akamaized.net/etvbharat/prod-images/kn-bng-01-majatalkies-actors-photo-ka10018_25082020121215_2508f_1598337735_46.jpg)
ಈ ಬಾರಿಯ ಮಜಾ ಟಾಕೀಸ್ನಲ್ಲಿ ಕುರಿ ಪ್ರತಾಪ್ ಕೂಡಾ ಇರಲಿದ್ದಾರೆ. ಕಳೆದ ಸೀಸನ್ಗಳಲ್ಲೂ ನವಿರಾದ ಹಾಸ್ಯದ ಮೂಲಕ ವೀಕ್ಷಕರ ಮನ ಸೆಳೆದಿರುವ ಸೃಜನ್ ಲೋಕೇಶ್ ಹಾಗೂ ತಂಡ ಇದೀಗ ಮತ್ತೆ ಜನರ ಮುಂದೆ ಬರುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. 'ಮಜಾ ಟಾಕೀಸ್ ಸೀಸನ್ 3 ಆರಂಭವಾಗುತ್ತಿರುವುದಕ್ಕೆ ನಾನು ವೈಯಕ್ತಿಕವಾಗಿ ತುಂಬಾ ಉತ್ಸುಕನಾಗಿದ್ದೇನೆ. ಲಾಕ್ ಡೌನ್ನಿಂದಾಗಿ ಕ್ಯಾಮರಾ ಮಿಸ್ ಮಾಡಿಕೊಂಡಿದ್ದೆ. ಸಣ್ಣ ಗ್ಯಾಪ್ ನಂತರ ಮತ್ತೆ ಸೆಟ್ಗೆ ತೆರಳಲು ತುಂಬಾ ಥ್ರಿಲ್ ಆಗಿದ್ದೇನೆ. ಕೊರೊನಾ ಕಿರಿಕಿರಿಯಿಂದ ಬೇಸತ್ತ ವೀಕ್ಷಕರಿಗೆ ಮಜಾ ಟಾಕೀಸ್ ಹೊಸ ಸೀಸನ್ ಪಕ್ಕಾ ಮನರಂಜನೆ ನೀಡಲಿದೆ' ಎಂದು ಸೃಜನ್ ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- View this post on Instagram
ಮಜಾ ಮತ್ತೆ ಶುರು ಇನ್ನು ನಾಲ್ಕೆ ದಿನ. #srujanlokesh #majatalkies #colorskannada #lokeshproductions
">
ಈಗಾಗಲೇ ಮಜಾ ಟಾಕೀಸ್ ಹೊಸ ಸೀಸನ್ ಪ್ರೊಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರೊಮೋದಲ್ಲಿ ಸೃಜನ್ ಲೋಕೇಶ್ , ಅಪರ್ಣಾ , ಮಿಮಿಕ್ರಿ ದಯಾನಂದ್ , ಪವನ್ ಕುಮಾರ್ , ಮಂಡ್ಯ ರಮೇಶ್ ಇದ್ದಾರೆ. ಆದರೆ ಈ ಬಾರಿ ಮಿಸ್ ಆಗಿರುವುದೇ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ. ಮೊದಲ ಎರಡು ಸೀಸನ್ಗಳಲ್ಲಿ ಶ್ವೇತಾ, ಸೃಜನ್ ಪತ್ನಿ ರಾಣಿ ಆಗಿ ಎಲ್ಲರನ್ನೂ ನಕ್ಕು ನಗಿಸಿದ್ದರು. ಆದರೆ ಈ ಬಾರಿ ಶ್ವೇತಾ ಜಾಗಕ್ಕೆ ಬೇರೆ ನಟಿ ಬರುತ್ತಿದ್ದಾರೆ. ಆದರೆ ಆಕೆ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರೋಮೋದಲ್ಲಿ ಕೂಡಾ ಆಕೆಯ ಮುಖವನ್ನು ತೋರಿಸಿಲ್ಲ. ಶ್ವೇತಾ ಚಂಗಪ್ಪ ಮಗನ ಆರೈಕೆಯಲ್ಲಿ ಬ್ಯುಸಿ ಆಗಿದ್ದು, ಈ ಬಾರಿ ಅವರು ಮಜಾ ಟಾಕೀಸ್ನಲ್ಲಿ ಮಿಸ್ ಆಗುತ್ತಿದ್ದಾರೆ.
- View this post on Instagram
ಮಜಾ ಮತ್ತೆ ಶುರು ಇನ್ನು ಮೂರೇ ದಿನ. #srujanlokesh #lokeshproductions #colorskannada #majatalkies.
">
ಒಟ್ಟಿನಲ್ಲಿ ಲಾಕ್ ಡೌನ್, ಕೊರೊನಾ ಬೇಸರದಲ್ಲಿರುವ ಜನರಿಗೆ ಮಜಾ ಟಾಕೀಸ್ ಹೇಗೆ ಮನರಂಜನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.