ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯಳಾಗಿ ಅಭಿನಯಿಸುವ ಮೂಲಕ ಗೌತಮಿ ಜಾಧವ್ ಮನೆ ಮಾತಾಗಿದ್ದಾರೆ.
ನಾಗಪಂಚಮಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಗೌತಮಿ ಜಾಧವ್, ನಂತರ ಕನ್ನಡದ ಮೂರು ಸಿನಿಮಾಗಳಲ್ಲಿ ನಟಿಸಿದರು. ಈಗ ತಮಿಳು ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡ ಗೌತಮಿ ಜಾಧವ್, ಪರಭಾಷೆಯ ಸಿನಿರಂಗದಲ್ಲಿಯೂ ಛಾಪು ಮೂಡಿಸಿದರು.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿರುವ ಗೌತಮಿ ಜಾಧವ್, ಫ್ಯಾಷನ್ ಡಿಸೈನಿಂಗ್ನತ್ತ ವಿಶೇಷ ಒಲವು ಮೂಡಿದ ಕಾರಣ ಮುಂದೆ ಅದನ್ನು ಕಲಿತರು. ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಗೌತಮಿ, ಫ್ಯಾಷನ್ ಡಿಸೈನಿಂಗ್ ನಂತರ ಜಿಮ್ನಾಸ್ಟಿಕ್ಸ್ ಕೂಡ ಕಲಿತರು.
ಜಿಮ್ನಾಸ್ಟಿಕ್ಸ್ ತರಬೇತಿ ಪಡೆಯಲು ಹೋದಾಗ ಅಲ್ಲಿಗೆ ಬರುತ್ತಿದ್ದ ನಟ-ನಟಿಯರನ್ನು ಕಂಡಾಗ ತಾನು ನಟಿಯಾಗಬೇಕು ಎಂಬ ಕನಸು ಹುಟ್ಟಿತ್ತು. ಅದರಂತೆ ನಾಗಪಂಚಮಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಅಸ್ತು ಎಂದ ಗೌತಮಿ, ನಾಗಪಂಚಮಿಯ ನಂತರ ಓದಿನತ್ತ ಗಮನ ಹರಿಸಿದರು.
ಪದವಿಯ ನಂತರ ಮತ್ತೆ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಅವರು, ಸದ್ಯ ಸತ್ಯ ಧಾರವಾಹಿಯಲ್ಲಿ ನಾಯಕಿಯಾಗಿ ಮಾಸ್ ಲುಕ್ನಲ್ಲಿ ಮಿಂಚುತ್ತಿದ್ದಾರೆ.