ETV Bharat / sitara

'ಜೀವ ಹೂವಾಗಿದೆ' ಧಾರಾವಾಹಿಯ ಅಂಜಲಿಯಾಗಿ ಮೋಡಿ ಮಾಡುತ್ತಿರುವ ತೇಜಸ್ವಿನಿ

ಸಿನಿಮಾವೊಂದರ ಮೂಲಕ ಬಣ್ಣದ ಬದುಕಿಗೆ ಬಂದ ತೇಜಸ್ವಿನಿ ಆನಂದ್ ಕುಮಾರ್ ಈಗ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನಾಗಿಣಿ - 2 ಧಾರಾವಾಹಿಯಲ್ಲಿ ನಟಿಸುತ್ತಿರುವ ತೇಜಸ್ವಿನಿ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಅಂಜಲಿ ಆಗಿ ಕೂಡಾ ನಟಿಸುತ್ತಿದ್ದಾರೆ.

Tejaswini
ತೇಜಸ್ವಿನಿ
author img

By

Published : Mar 20, 2021, 2:19 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಖಳನಾಯಕಿ ಅಂಜಲಿ ಆಗಿ ಅಭಿನಯಿಸುತ್ತಿದ್ದ ಮೇಘಾ ಶೆಣೈ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ‌ಆ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ತೇಜಸ್ವಿನಿ ಆನಂದ್ ಕುಮಾರ್ ಇನ್ನು ಮುಂದೆ ಅಂಜಲಿಯಾಗಿ ಸೀರಿಯಲ್ ವೀಕ್ಷಕರಿಗೆ ಮನರಂಜನೆ ನೀಡಲು ನಿಮ್ಮ ಮುಂದೆ ಬರುತ್ತಿದ್ದಾರೆ.

Tejaswini
ಕಿರುತೆರೆ ನಟಿ ತೇಜಸ್ವಿನಿ

ಅಂಜಲಿಯಾಗಿ ನಟಿಸುತ್ತಿರುವ ತೇಜಸ್ವಿನಿ ಆನಂದ್ ಕುಮಾರ್ ಕಿರುತೆರೆಗೆ ಹೊಸಬರೇನಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2' ರಲ್ಲಿ ದಿಗ್ವಿಜಯ್ ಮಗಳಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ 14 ವರ್ಷ ವಯಸ್ಸು. 'ಕೇಳದೇ ನಿಮಗೀಗ' ಸಿನಿಮಾ ಮೂಲಕ ನಟನಾ ಪಯಣ ಶುರು ಮಾಡಿದ ತೇಜಸ್ವಿನಿ ಆಚಾನಕ್ ಆಗಿ ಬಣ್ಣದ ನಂಟು ಬೆಳೆಸಿಕೊಂಡಾಕೆ. 9 ತರಗತಿಯಲ್ಲಿ ಕಲಿಯುತ್ತಿರುವಾಗ ಸಿನಿಮಾದಲ್ಲಿ ನಟಿಸುವ ಅವಕಾಶ ಆಕೆಗೆ ದೊರಕಿತು. ಬಂದ ಅವಕಾಶ ಬೇಡ ಎನ್ನದ ಆಕೆ ಸಿನಿಮಾದಲ್ಲಿ ನಟಿಸಿದರೂ ಆ ಸಿನಿಮಾ ಬಿಡುಗಡೆಯಾಗಲಿಲ್ಲ.

Tejaswini
'ಜೀವಿ ಹೂವಾಗಿದೆ' ಧಾರಾವಾಹಿಯಲ್ಲಿ ನಟಿಸುತ್ತಿರುವ ಅಂಜಲಿ

ಇದನ್ನೂ ಓದಿ: ಬದಲಾದ ರುಕ್ಕು ಪಾತ್ರಧಾರಿ...ಶೋಭಾ ಶೆಟ್ಟಿ ಜಾಗಕ್ಕೆ ಬಂದ ರಚನಾ ಗೌಡ

ಇದಾದ ನಂತರ ಕೆಲವು ದಿನಗಳ ಕಾಲ ನಟನೆಯಿಂದ ದೂರವಿದ್ದ ತೇಜಸ್ವಿನಿ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಪದವಿ ಪಡೆದ ಬಳಿಕ ಮತ್ತೆ ನಟನಾ ಕ್ಷೇತ್ರದತ್ತ ಮುಖ ಮಾಡಿದ ತೇಜಸ್ವಿನಿ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ವಿಲನ್ ನಂದಿನಿ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿಯಾಗಿ ನಟಿಸಿದ ತೇಜಸ್ವಿನಿ ತಮಿಳಿನ 'ಸುಬ್ರಹ್ಮಣ್ಯಪುರಂ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ. ಇದೀಗ ನಾಗಿಣಿ 2 ಧಾರಾವಾಹಿಯ ಜೊತೆಗೆ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ತೇಜಸ್ವಿನಿ ನಟಿ ಅನುಪಮಾ ಗೌಡ ತಂಗಿ ಎಂಬುದು ಹಲವರಿಗೆ ತಿಳಿದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.