ಸೆಲಬ್ರಿಟಿಗಳು ತಾಯಿಯಾದರೆ ಅದು ಬಹುಬೇಗ ಸುದ್ದಿಯಾಗುತ್ತದೆ. ರಾಧಿಕಾ ಪಂಡಿತ್, ಶ್ವೇತಾ ಶ್ರೀವಾತ್ಸವ್, ದಿಶಾ ಮದನ್ ಹೀಗೆ ಸಾಲು ಸಾಲು ನಟಿಯರು ಈಗ ತಾಯ್ತನದ ಸಂತೋಷ ಅನುಭವಿಸುತ್ತಿದ್ದಾರೆ. ಇದೀಗ ಶ್ವೇತಾ ಚಂಗಪ್ಪ ಸರದಿ.
- " class="align-text-top noRightClick twitterSection" data="
">
‘ಸುಮತಿ‘ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ವೇತಾ ಈಗ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ‘ಮಜಾ ಟಾಕೀಸ್‘ ಕಾರ್ಯಕ್ರಮದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ತಾನು ತಾಯಿಯಾಗುತ್ತಿರುವ ವಿಚಾರವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ತಮ್ಮ ಬೇಬಿ ಬಂಪ್ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಮಜಾ ಟಾಕೀಸ್ ಶೋನಿಂದ ಬ್ರೇಕ್ ಪಡೆದಿರುವ ಶ್ವೇತಾ, ಅಮ್ಮನಾಗುತ್ತಿರುವ ಖುಷಿಯಲ್ಲಿದ್ದಾರೆ. ನಿನ್ನೆ ಶ್ವೇತಾ ಚಂಗಪ್ಪ ಅವರ ಪತಿ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆಶೀರ್ವಾದ ಕೇಳಿದ್ದಾರೆ.
- " class="align-text-top noRightClick twitterSection" data="
">
ಮೂಲತಃ ಕೊಡಗಿನವರಾದ ಶ್ವೇತಾ, ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ‘ಯಾರಿಗುಂಟು ಯಾರಿಗಿಲ್ಲ‘ ಕಾರ್ಯಕ್ರಮದ ನಿರೂಪಣೆ ಕೂಡಾ ಮಾಡಿದ್ದಾರೆ. ಅಲ್ಲದೆ ಬಿಗ್ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸೇರಿ ಕೆಲವೊಂದು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿ ಕೂಡಾ ಲಭಿಸಿದೆ.