ಕೊಡಗಿನ ಕುವರಿ ಶ್ವೇತಾ ಚಂಗಪ್ಪ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಅಭಿನಯಿಸಿರುವ ಶ್ವೇತಾ ಚಂಗಪ್ಪ ಕನ್ನಡದ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್ ಮೂಲಕ ಮನೆ ಮಾತಾಗಿದ್ದಾರೆ.

ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ಶ್ವೇತಾ ತಾಯ್ತನವನ್ನು ಎಂಜಾಯ್ ಮಾಡುತ್ತಾ ತಮ್ಮ ಸಮಯವನ್ನೆಲ್ಲಾ ಮಗ ಜಿಯಾನ್ ಅಯ್ಯಪ್ಪನ ಜೊತೆ ಕಳೆಯುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶ್ವೇತಾ ಚಂಗಪ್ಪ, ತಮ್ಮ ಮತ್ತು ಮಗನ ಫೋಟೋಗಳನ್ನು ಆಗಾಗ ಇನ್ಸ್ಟಾಗ್ರಾಮ್ನಲ್ಲಿ ಷೇರ್ ಮಾಡುತ್ತಿರುತ್ತಾರೆ. ಗಣೇಶ ಹಬ್ಬದಂದು ಕೂಡಾ ಸಾಂಪ್ರದಾಯಿಕ ಧಿರಿಸಿನಲ್ಲಿ ಅಮ್ಮ ಮಗ ಕಂಗೊಳಿಸುತ್ತಿದ್ದರು. ಆ ಫೋಟೋವನ್ನು ಕೂಡಾ ಶ್ವೇತಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಶ್ವೇತಾ ಅಭಿಮಾನಿ ಡಿಜಿಟಲ್ ಆರ್ಟಿಸ್ಟ್ ದೀಪಕ್ ಎನ್ನುವವರು ಶ್ವೇತಾ ಹಾಗೂ ಜಿಯಾನ್ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಗಣೇಶ ಹಬ್ಬದಂದು ಇನ್ ಸ್ಟಾಗ್ರಾಂನಲ್ಲಿ ಶ್ವೇತಾ ಹಂಚಿಕೊಂಡಿದ್ದ ಫೋಟೋವನ್ನು ದೀಪಕ್ ಅವರು ಎಡಿಟ್ ಮಾಡಿದ್ದು ಅದರಲ್ಲಿ ಜಿಯಾನ್ ಬಾಲ ಕೃಷ್ಣನ ರೀತಿಯಲ್ಲಿ ಕಂಗೊಳಿಸುತ್ತಿದ್ದಾರೆ. ಇದರಿಂದ ಖುಷಿಯಾಗಿರುವ ಶ್ವೇತಾ ಚಂಗಪ್ಪ ಈ ಪೋಟೋ ಎಡಿಟ್ ಮಾಡಿಕೊಟ್ಟಿದ್ದಕ್ಕೆ ದೀಪಕ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
- " class="align-text-top noRightClick twitterSection" data="
">
ಮುದ್ದು ಮಗ ಜಿಯಾನ್ನನ್ನು ಕೃಷ್ಣನ ಅವತಾರದಲ್ಲಿ ನೋಡಬೇಕೆಂಬ ಆಸೆ ನನಗೆ ತುಂಬಾನೇ ಇತ್ತು. ಆ ರೀತಿ ಅಲಂಕಾರ ಮಾಡಲು ಸಾಧ್ಯವಾಗಿರಲ್ಲ. ಆದರೆ ಇದೀಗ ನನ್ನ ಆಸೆಯನ್ನು ಈ ಚಿತ್ರ ಕಂಪ್ಲೀಟ್ ಮಾಡಿದೆ. ಇದು ಮನಸಿಗೆ ತುಂಬಾ ಹತ್ತಿರವಾದ ಚಿತ್ರ ಎಂದು ಶ್ವೇತಾ, ಅಭಿಮಾನಿ ನೀಡಿದ ಗಿಫ್ಟ್ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.