ETV Bharat / sitara

ಈ ಬಾರಿಯೂ ಬಿಗ್​ಬಾಸ್​ನಲ್ಲಿ ಕಿಚ್ಚನಿಲ್ಲದ ಪಂಚಾಯ್ತಿ! - sudeep in bigboss

ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ವಾಹಿನಿ ತಿಳಿಸಿದೆ.

Sudeep not host the Big boss program this week also
ಈ ಬಾರಿಯೂ ಬಿಗ್​ಬಾಸ್​ನಲ್ಲಿ ಕಿಚ್ಚನಿಲ್ಲದ ಪಂಚಾಯ್ತಿ!
author img

By

Published : May 1, 2021, 2:42 AM IST

ಅನಿರೀಕ್ಷಿತ ಬೆಳವಣಿಗೆಯಲ್ಲಿ ಇಂದು ನಟ‌ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ ಎಂದು ವಾಹಿನಿ ತಿಳಿಸಿದೆ.

ಕಳೆದ ಎರಡು ವಾರಗಳ ಕಾಲ ವೀಕೆಂಡ್​ ಕಾರ್ಯಕ್ರಮಕ್ಕೆ ಗೈರಾಗಿದ್ದ ನಟ ಸುದೀಪ್, ಈ ವಾರವೂ ಕಾಣಿಸಿಕೊಳ್ಳದಿರುವುದು ಬಿಗ್ ಬಾಸ್ ಅಭಿಮಾನಿಗಳಿಗೆ ಈ ವಾರವೂ ಬಿಗ್​ ಶಾಕ್​ ನೀಡಿದೆ.

ವಾಹಿನಿ ಟ್ವೀಟ್​
ವಾಹಿನಿ ಟ್ವೀಟ್​

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ತಿಳಿಸಿದೆ.

ಆರೋಗ್ಯ ಸಮಸ್ಯೆಯಿಂದ 2 ವಾರದ ವೀಕೆಂಡ್ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ ಅವರು, ಇದೇ ವಾರ ವೀಕ್ಷಕರ ಎದುರು ಬರಲು ಮುಂದಾಗಿರುವುದಾಗಿ ಸ್ವತಃ ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಸುದೀಪ್, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೋಡಿನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದರು. ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.