ETV Bharat / sitara

ಹೆತ್ತವರಷ್ಟೇ ಫೇಮಸ್ ಆದ ಕಿರುತೆರೆ ನಟ-ನಟಿಯರ ಮುದ್ದು ಕಂದಮ್ಮಗಳು

author img

By

Published : Aug 31, 2020, 6:11 PM IST

ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಕಲಾವಿದರ ಪುಟ್ಟ ಮಕ್ಕಳು ಕೂಡಾ ಎಳೆ ವಯಸ್ಸಿಗೆ ಅಪ್ಪ ಅಮ್ಮನಂತೆ ಹೆಸರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪುಟಾಣಿಗಳ ಪೋಟೋ, ವಿಡಿಯೋಗಳು ಸದ್ದು ಮಾಡುತ್ತಿವೆ.

Small screen artist Kids
ಚೇತನ್ ಚಂದ್ರ

ಬಹಳಷ್ಟು ನಟ-ನಟಿಯರು ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕವೋ, ಗ್ಲಾಮರ್ ಮೂಲಕವೋ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಆದರೆ ಇದೀಗ ಈ ಕಿರುತೆರೆ ನಟ-ನಟಿಯರ ಮಕ್ಕಳು ಕೂಡಾ ತಮ್ಮ ತಂದೆ-ತಾಯಿಗಿಂತ ಬಹಳ ಫೇಮಸ್ ಆಗುತ್ತಿದ್ದಾರೆ.

ಸೋಹನ್ ಸೂರ್ಯ

Small screen artist Kids
ಪುತ್ರ ಸೋಹನ್ ಸೂರ್ಯ ಜೊತೆ ವಿಜಯ್ ಸೂರ್ಯ

ಅಗ್ನಿಸಾಕ್ಷಿ ಸಿದ್ದಾರ್ಥ್ ಆಗಿ ಕಿರುತೆರೆ ಲೋಕದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ ನಟ ವಿಜಯ್​​​​​​​ ಸೂರ್ಯ ಮುದ್ದು ಮಗನ ಹೆಸರು ಸೋಹನ್ ಸೂರ್ಯ. ಇದೇ ವರ್ಷ ಜನವರಿ 1 ರಂದು ಜನಿಸಿದ ಸೋಹನ್​​​​​​​​​ಗೆ ಈಗ 7 ತಿಂಗಳು ತುಂಬಿದೆ. ಆಗ್ಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದು ಕಂದನ ಫೋಟೋ, ವಿಡಿಯೋ ಷೇರ್ ಮಾಡುವ ವಿಜಯ್ ಸೂರ್ಯ ಇತ್ತೀಚೆಗಷ್ಟೇ ಷೇರ್ ಮಾಡಿದ್ದ ಒಂದು ವಿಡಿಯೋ ಬಹಳ ವೈರಲ್ ಆಗಿತ್ತು. ವಿಜಯ್ ಸೂರ್ಯ ಹಾಡಿಗೆ ಮಗನೂ ಧ್ವನಿ ಸೇರಿಸಿದ ವಿಡಿಯೋವನ್ನು ಬಹಳಷ್ಟು ಜನರು ಮೆಚ್ಚಿ ಲೈಕ್ಸ್​, ಕಮೆಂಟ್ ಮಾಡಿದ್ದರು.

ಜಿಯಾನ್ ಅಯ್ಯಪ್ಪ

Small screen artist Kids
ಪುತ್ರ ಜಿಯಾನ್ ಜೊತೆ ಶ್ವೇತಾ ಚಂಗಪ್ಪ

ಮಜಾ ಟಾಕೀಸ್ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಮುದ್ದು ಮಗ ಜಿಯಾನ್ ಅಯ್ಯಪ್ಪ ಕೂಡಾ ಈಗಾಗಲೇ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​​​​​​​​​​​​​​​ನಲ್ಲಿ ಜನಿಸಿದ್ದ ಜಿಯಾನ್, ಫೋಟೋಗಳು ಹಾಗೂ ವಿಡಿಯೋವನ್ನು ಶ್ವೇತಾ ಕೂಡಾ ಇನ್ಸ್​​ಟಾಗ್ರಾಮ್​​ನಲ್ಲಿ ಷೇರ್ ಮಾಡುತ್ತಿರುತ್ತಾರೆ. ಮಾತ್ರವಲ್ಲ ಮುದ್ದು ಕಂದನ ಹೆಸರಿನಲ್ಲಿ ಇನ್ಸ್​​​​ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ ಶ್ವೇತಾ.

ಸ್ಮಯ

Small screen artist Kids
ಪುತ್ರಿ ಸ್ಮಯ ಜೊತೆ ಚೇತನ್ ಚಂದ್ರ

ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಶಿವ ಪಾತ್ರಧಾರಿ ಚೇತನ್ ಚಂದ್ರರ ಪ್ರೀತಿಯ ಮಗಳ ಹೆಸರು ಸ್ಮಯ. ಮಗಳೊಂದಿಗೆ ಇರುವ ಫೋಟೋ, ವಿಡಿಯೋಗಳನ್ನು ಚೇತನ್​​​​​​​​​​​​​​​​ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಾರೆ. ಮುದ್ದು ಕಂದನ ಫೋಟೋಗಳನ್ನು ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.

ವಿಯಾನ್

Small screen artist Kids
ಪುತ್ರ ವಿಯಾನ್ ಜೊತೆ ದಿಶಾ ಮದನ್

ಕುಲವಧು ಧಾರಾವಾಹಿಯ ವಚನಾ ಆಗಿ ಮಿಂಚಿದ್ದ ದಿಶಾ ಮದನ್ ಕೂಡಾ ತಮ್ಮ ಮುದ್ದು ಮಗ ವಿಯಾನ್ ಪೋಟೋ, ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಿಶಾ ತಮ್ಮ ಮಗನ ಒಂದನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ ಮದನ್ ಕೂಡಾ ತಮ್ಮ ಮಗನ ಹೆಸರಿನಲ್ಲಿ ಇನ್ಸ್​​​ಟಾಗ್ರಾಮ್​​​​ ಖಾತೆ ತೆರೆದಿದ್ದಾರೆ

ನಿಹಾರ್

Small screen artist Kids
ಪುತ್ರ ನಿಹಾರ್ ಜೊತೆ ನವ್ಯಾಗೌಡ

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಶ್ವೇತಾ ಚಿಕ್ಕಿಯಾಗಿ ಅಭಿನಯಿಸಿದ್ದ ನವ್ಯಾಗೌಡ ಮಗನ ಹೆಸರು ನಿಹಾರ್. ಅಂದ ಹಾಗೆ ಈ ಪೋರ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಾಗಿದೆ. ತನ್ನ ಅಮ್ಮ ನಟಿಸುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕ್ಲೈಮಾಕ್ಸ್ ನಲ್ಲಿ ನಿಹಾರ್ ಅಮ್ಮನೊಂದಿಗೆ ತೆರೆ ಹಂಚಿಕೊಂಡಿದ್ದಾನೆ.

ಹವ್ಯಾ ಕೃಷ್ಣ

Small screen artist Kids
ಪುತ್ರಿ ಹವ್ಯಾ ಕೃಷ್ಣ ಜೊತೆ ರಾಜೇಶ್ವರಿ

ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಆಗಿ ಮನೆ ಮಾತಾಗಿದ್ದ ನಟಿ ರಾಜೇಶ್ವರಿಯ ಮಗಳು ಕೂಡಾ ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾಳೆ. ಮದುವೆಯಾದ ಬಳಿಕ ಪತಿ ಹಾಗೂ ಮಗಳೊಡನೆ ವಿದೇಶದಲ್ಲಿ ನೆಲೆಸಿರುವ ರಾಜೇಶ್ವರಿ ಅಲ್ಲಿಂದಲೇ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಪ್ರಯಾನ್

Small screen artist Kids
ಪುತ್ರ ಪ್ರಯಾನ್ ಜೊತೆ ನಯನಾ

ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ವಿಲನ್ ತಾಪ್ಸಿ ಪಾತ್ರಕ್ಕೆ ಜೀವ ತುಂಬಿದ್ದ ನಟಿ ನಯನಾ ಮಗನ ಹೆಸರು ಪ್ರಯಾನ್ ಭಾರದ್ವಾಜ್. ವರಲಕ್ಷ್ಮಿ ವ್ರತದಂದು ತಮ್ಮ ಮಗನಿಗೆ ಹೆಣ್ಣು ಮಗುವಿನ ರೀತಿಯಲ್ಲಿ ಅಲಂಕಾರ ಮಾಡಿದ್ದರು ನಯನಾ. ಪ್ರಯಾನ್ ಹೆಸರಿನಲ್ಲಿ ಕೂಡಾ ಇನ್ಸ್​​ಟಾಗ್ರಾಮ್ ಖಾತೆ ಇದೆ.

ಕಿಯಾನ್

Small screen artist Kids
ಪುತ್ರ ಕಿಯಾನ್ ಜೊತೆ ಶಶಾಂಕ್ ಪುರುಷೋತ್ತಮ್

ಅಗ್ನಿಸಾಕ್ಷಿ ಖ್ಯಾತಿಯ ಗೌತಮ್ ಪಾತ್ರಧಾರಿಯಾಗಿ ನಟಿಸಿದ್ದ ಶಶಾಂಕ್ ಪುರುಷೋತ್ತಮ್ ತಮ್ಮ ಬಹುಕಾಲದ ವಿದೇಶಿ ಗೆಳತಿಯನ್ನು ವರಿಸಿದ್ದು ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಶಶಾಂಕ್ ತಮ್ಮ ಪುತ್ರ ಕಿಯಾನ್​​​ನನ್ನು ಲಿಟ್ಲ್ ಜೀಬ್ರಾ ಎಂದೇ ಕರೆಯುತ್ತಾರಂತೆ ಶಶಾಂಕ್ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಕಿಯಾನ್ ದರ್ಶನ ಮಾಡಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.