ETV Bharat / sitara

ಈ ವರ್ಷ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಕಲಾವಿದರು ಇವರು - ನೀರೆ ಸಿನಿಮಾದಲ್ಲಿ ನಟಿಸುತ್ತಿರುವ ಸಮೀಕ್ಷಾ

ಎಷ್ಟೋ ನಟ-ನಟಿಯರು ಹಿರಿತೆರೆಯಿಂದ ಕಿರುತೆರೆಗೆ ಬಂದಿದ್ದಾರೆ. ಅದೇ ರೀತಿ ಕಿರುತೆರೆ ನಟ-ನಟಿಯರು ಕೂಡಾ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ವರ್ಷ ಕೂಡಾ ಕೆಲವು ಕಿರುತೆರೆ ನಟ-ನಟಿಯರು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಯಾವ ಕಿರುತೆರೆ ನಕ್ಷತ್ರಗಳು ಬೆಳ್ಳಿತೆರೆಯಲ್ಲಿ ಮಿಂಚಿವೆ ಎಂಬುದರ ಬಗ್ಗೆ ಚಿಕ್ಕ ಮಾಹಿತಿ.

Small screen actors
ಕಿರುತೆರೆ ಕಲಾವಿದರು
author img

By

Published : Dec 27, 2019, 7:03 PM IST

ಸಮೀಕ್ಷಾ

Sameeksha
ಸಮೀಕ್ಷಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್​​​​ನಲ್ಲಿ ನಟಿಸಿರುವ ಶನಾಯ ಅಲಿಯಾಸ್ ಸಮೀಕ್ಷಾ 'ನೀರೆ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಗಗನ್ ಚಿನ್ನಪ್ಪ

Gagan chinnappa
ಗಗನ್ ಚಿನ್ನಪ್ಪ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಇನ್ಸ್​​​ಪೆಕ್ಟರ್​​​​​ ರಾಜೀವನಾಗಿ ನಟಿಸುತ್ತಿರುವ ಕೊಡಗಿನ ಕುವರ ಗಗನ್ ಚಿನ್ನಪ್ಪ ಅವರು 'ಅಲೆಗ್ಸಾಂಡರ್' ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ಸುಪ್ರಿತಾ ಸತ್ಯನಾರಾಯಣ

Suprita Satyanarayan
ಸುಪ್ರಿತಾ ಸತ್ಯನಾರಾಯಣ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾವಲ್ಲಭ' ಧಾರಾವಾಹಿಯಲ್ಲಿ ನಾಯಕಿ ಮೈಥಿಲಿ ಅಲಿಯಾಸ್ ಗುಬ್ಬಿಯಾಗಿ ನಟಿಸಿ ಮನೆ ಮಾತಾಗಿರುವ ಸುಪ್ರಿತಾ ಸತ್ಯನಾರಾಯಣ ಅವರು 'ರಹದಾರಿ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಚಂದು ಗೌಡ

Chandu gowda
ಚಂದು ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಾಯಕ ಚಂದು ಆಗಿ ನಟಿಸುತ್ತಿರುವ ಚಂದು ಗೌಡ ಅವರು ಕೂಡಾ ಬೆಳ್ಳಿತೆರೆಗೆ ಬಂದಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

ರಾಧಿಕಾ ರಾವ್

Radhika rao
ರಾಧಿಕಾ ರಾವ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾ ಆಗಿ ಮಿಂಚುತ್ತಿರುವ ರಾಧಿಕಾ ರಾವ್ ಕೂಡಾ 'ಲುಂಗಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದೀಕ್ಷಿತ್ ಶೆಟ್ಟಿ

Deekshith Shetty
ದೀಕ್ಷಿತ್ ಶೆಟ್ಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಮನೆ ಮಾತಾಗಿರುವ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟಿ 'ದಿಯಾ' ಸಿನಿಮಾದಲ್ಲಿ ನಾಯಕ ಆಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಜಿಗಿದಿದ್ದಾರೆ.

Intro:Body:ಹಿರಿತೆರೆ ಕಲಾವಿದರುಗಳು ಕಿರುತೆರೆಗೆ ಬರುವ ಸಂಗತಿ ವೀಕ್ಷಕರಿಗೆ ತಿಳಿದೇ ಇದೆ‌. ಅಂತೆಯೇ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ಕಲಾವಿದರುಗಳು ಹಿರಿತೆರೆಗೆ ಕಾಲಿಡುವುದು ಕೂಡಾ ಮಾಮುಲಿ! ಪ್ರತಿ ವರುಷವೂ ಹೊಸ ಹೊಸ ಕಲಾವಿದರುಗಳು ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಡುತ್ತಾರೆ. ಅಂದ ಹಾಗೇ ಈ ವರುಷ ಯಾವೆಲ್ಲಾ ಕಿರುತೆರೆ ನಕ್ಷತ್ರಗಳು ಹಿರಿತೆರೆಯಲ್ಲಿ ಮಿಂಚಿವೆ ಎಂಬುದನ್ನು ನೋಡೋಣ.

ಸಮೀಕ್ಷಾ
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಶನಾಯ ಆಗಿ ಅಭಿನಯಿಸುತ್ತಿರುವ ಸಮೀಕ್ಷಾ ಅವರು ನೀರೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ‌.

ಗಗನ್ ಚಿನ್ನಪ್ಪ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಇನ್ ಸ್ಪೆಕ್ಟರ್ ರಾಜೀವ ನಾಗಿ ನಟಿಸುತ್ತಿರುವ ಕೊಡಗಿನ ಕುವರ ಗಗನ್ ಚಿನ್ನಪ್ಪ ಅವರು ಅಲೆಗ್ಸಾಂಡರ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ಸುಪ್ರೀತಾ ಸತ್ಯನಾರಾಯಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕಿ ಮೈಥಿಲಿ ಆಲಿಯಾಸ್ ಗುಬ್ಬಿಯಾಗಿ ನಟಿಸಿ ಮನೆ ಮಾತಾಗಿರುವ ಸುಪ್ರೀತಾ ಸತ್ಯನಾರಾಯಣ ಅವರು ರಹದಾರಿ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಚಂದು ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಾಯಕ ಚಂದು ಆಗಿ ನಟಿಸುತ್ತಿರುವ ಚಂದು ಗೌಡ ಅವರು ಕೂಡಾ ಬೆಳ್ಳಿತೆರೆಗೆ ಬಂದಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಲ್ಲಿ ಅವರು ನಟಿಸಲಿದ್ದಾರೆ.

ರಾಧಿಕಾ ರಾವ್
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕ್ಯಾಣ ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ಮಿಂಚುತ್ತಿರುವ ರಾಧಿಕಾ ರಾವ್ ಕೂಡಾ ಲುಂಗಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದೀಕ್ಷಿತ್ ಶೆಟ್ಟಿ
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಮನೆ ಮಾತಾಗಿರುವ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟು ದಿಯಾ ಸಿನಿಮಾದಲ್ಲಿ ನಾಯಕ ಆಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಜಿಗಿದಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.