ETV Bharat / sitara

ನಟಿ ಶುಭಾ ಪೂಂಜ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಎಲ್ಲಿ ಗೊತ್ತಾ? - Bigg Boss Kannada

ಬಿಗ್​ಬಾಸ್ ಸೀಸನ್ 8ರ ಸ್ಪರ್ಧಿ, ನಟಿ ಶುಭಾ ಪೂಂಜ ಆಗಸ್ಟ್​ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬದವರ ಜೊತೆಗೆ ಗೋವಾಗೆ ಹೋಗಿದ್ದಾರಂತೆ.

shubha
ನಟಿ ಶುಭಾ ಪೂಂಜ
author img

By

Published : Aug 6, 2021, 9:36 AM IST

ಬಿಗ್​ಬಾಸ್ ಸೀಸನ್ 8ರಿಂದ ಕಳೆದ ವಾರವಷ್ಟೇ ಎಲಿಮಿನೇಟ್ ಆಗಿರುವ ನಟಿ ಶುಭಾ ಪೂಂಜ ಆಗಸ್ಟ್​ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಬಿಗ್​ಬಾಸ್ ವೇದಿಕೆ ಮೇಲೆ ಸುದೀಪ್ ಅವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಹುಟ್ಟುಹಬ್ಬದಂದು ವೆಕೇಶನ್ ಹೋಗುವುದಾಗಿ ಅವರು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಸಿಕ್ಕಾಪಟ್ಟೆ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ. ಮುಂದಿನ ವಾರ ಗ್ರಾಂಡ್ ಫಿನಾಲೆಗೆ ಬರುವುದಿದೆ ಎಂದು ಎಚ್ಚರಿಸಿ ಕಳುಹಿಸಿದ್ದರು.

ಶುಭಾ ಇಷ್ಟಕ್ಕೂ ಎಲ್ಲಿಗೆ ಹೋಗಿದ್ದರು, ತಮ್ಮ ಹುಟ್ಟುಹಬ್ಬವನ್ನು ಎಲ್ಲಿ ಆಚರಿಸಿಕೊಂಡರು ಎಂಬ ಪ್ರಶ್ನೆ ಬರುವುದು ಸಹಜ. ಮೂಲಗಳ ಪ್ರಕಾರ, ಶುಭಾ ತಮ್ಮ ಕುಟುಂಬದವರ ಜೊತೆಗೆ ಗೋವಾಗೆ ಹೋಗಿದ್ದಾರಂತೆ. ಅಲ್ಲಿ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅವರು ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗುವ ಸಾಧ್ಯತೆ ಇದೆ. ಹೀಗೆ ತರಾತುರಿಯಲ್ಲಿ ಬರುತ್ತಿರುವುದಕ್ಕೂ ಕಾರಣವಿದೆ. ಬಿಗ್ ಬಾಸ್​ ಗ್ರಾಂಡ್ ಫಿನಾಲೆ ಶನಿವಾರ ನಡೆಯಲಿದ್ದು, ಅದರಲ್ಲಿ ಅವರು ಭಾಗವಹಿಸಬೇಕಿದೆ. ಅದರಲ್ಲಿ ಅವರು ಡ್ಯಾನ್ಸ್ ಕಾರ್ಯಕ್ರಮವನ್ನು ಕೊಡಬೇಕಿದೆ. ಹಾಗಾಗಿ, ಅವರು ಆದಷ್ಟು ಬೇಗ ಬಂದು ನೃತ್ಯ ತರಬೇತಿ ಪಡೆದು ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.

ಬರೀ ಶುಭಾ ಪೂಂಜ ಮಾತ್ರವಲ್ಲ, ಬಿಗ್ ಬಾಸ್​ನ ಈ ಸೀಸನ್​ನಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳು ಸಹ ಈ ಫಿನಾಲೆಯಲ್ಲಿ ಭಾಗವಹಿಸುತ್ತಿದ್ದಾರಂತೆ. ಈ ಫಿನಾಲೆಗಾಗಿ ಶಮಂತ್ ಒಂದು ವಿಶೇಷ ಹಾಡನ್ನು ಕಂಪೋಸ್ ಮಾಡಿಟ್ಟುಕೊಂಡು, ಅದನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.