ಕಲೆ ಎನ್ನುವುದು ಎಲ್ಲರಿಗೂ ಒಲಿಯಲಾರದು ಎಂಬುದು ಅನುಭವಸ್ಥರ ಮಾತು. ಕಲಾವಿದರಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಲವು ಮಂದಿ ಬಯಸುತ್ತಾರೆ ನಿಜ. ಆದರೆ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಆಕಸ್ಮಾತ್ತಾಗಿ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರವಷ್ಟೇ ಆರಾಮವಾಗಿ ಬಣ್ಣದ ಲೋಕದಲ್ಲಿ ಗುರತಿಸಿಕೊಳ್ಳಲು ಸಾಧ್ಯ. ಅದಕ್ಕೆ ಪ್ರಸಕ್ತ ಉದಾಹರಣೆ ಚಂದನಾ ಸುಬ್ರಹ್ಮಣ್ಯ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೂರುಗಂಟು ಧಾರಾವಾಹಿಯಲ್ಲಿ ನಾಯಕ ವಿಕ್ರಮಾದಿತ್ಯನ ಅಕ್ಕ ಮಯೂರಿ ಪಾತ್ರಕ್ಕೆ ಜೀವ ತುಂಬುತ್ತಿರುವ ಚಂದನಾ ಸುಬ್ರಹ್ಮಣ್ಯ ಬಯಸದೇ ಈ ಕ್ಷೇತ್ರಕ್ಕೆ ಬಂದವರು. ಫೇಸ್ ಬುಕ್ ನಲ್ಲಿ ಕೊಂಚ ಆ್ಯಕ್ಟೀವ್ ಆಗಿದ್ದ ಚಂದನಾಗೆ ಸ್ನೇಹಿತರೆಲ್ಲಾ ನೀನ್ಯಾಕೆ ನಟಿಸಬಾರದು ಎಂದು ಆಗಾಗ ಕೇಳುತ್ತಿದ್ದರು. ಜೊತೆಗೆ ಪಕ್ಕಾ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿರುವ ಚಂದನಾರ ಕುಟುಂಬದಲ್ಲಿ ಯಾರೂ ಕಲಾವಿದರಾಗಿರಲಿಲ್ಲ. ಆದ ಕಾರಣ ನಟಿಸೋದ ಬೇಡ್ವಾ ಎಂಬ ಗೊಂದಲದಲ್ಲಿ ಆಕೆಯಿದ್ದರು.
ಕೊನೆಗೆ ಫ್ಯಾಮಿಲಿ ಫ್ರೆಂಡ್ ಸಲಹೆಗೆ ಮಣಿದು ಆಡಿಷನ್ ಅಟೆಂಡ್ ಮಾಡ ತೊಡಗಿದರು ಚಂದನಾ. ಡಿಗ್ರಿಗೆ ಬಂದಾಗ ಟೆಲಿಫಿಲ್ಮ್ ನಲ್ಲಿ ನಟಿಸುವ ಅವಕಾಶ ದೊರಕಿತು. ಸೃಜನ್ ರಾಘವೇಂದ್ರ ಅವರ ತ್ರೀ ರೋಸಸ್ ಟೆಲಿಫಿಲ್ಮಿಗೆ ಆಯ್ಕೆ ಆದ ಚಂದನಾ ಅದರಲ್ಲಿ ಮುಖ್ಯಪಾತ್ರ ನಿರ್ವಹಿಸಿದರು. ಆಕ್ಟಿಂಗ್ ಬ್ಯಾಕ್ ಗ್ರೌಂಡ್ ಇರದ ಚಂದನಾಗೆ ಮೊದಲ ಬಾರಿ ಬಣ್ಣ ಹಚ್ಚಿದಾಗ ಆ್ಯಕ್ಟಿಂಗ್ ಎಂದರೇನು, ಹೇಗಿರುತ್ತದೆ ಎಂಬುದೇ ತಿಳಿದಿರಲಿಲ್ಲ. ಮೊದಲ ಬಾರಿಯ ಪ್ರಯತ್ನದಲ್ಲಿಯೇ ಯಶಸ್ವಿಯಾದ ಈಕೆ ಮುಂದೆ ಮುಖ ಮಾಡಿದ್ದು ಕಿರುತೆರೆಯತ್ತ.
ದೇವತೆ ಧಾರಾವಾಹಿಯಲ್ಲಿ ನಾಯಕನ ಅಕ್ಕ ನಿವೇದಿತಾ ಆಗಿ ಕಿರುತೆರೆ ಪಯಣ ಶುರು ಮಾಡಿದ ಚಂದನಾ ನಂತರ ಚಂದನದ ಗೊಂಬೆ ಧಾರಾವಾಹಿಯಲ್ಲಿ ನಾಯಕಿಯ ಅತ್ತಿಗೆ ಆಗಿ ಅಭಿನಯಿಸಿದ್ದರು. ಮುಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕನ ಅಣ್ಣ ಗೌತಮ್ ಗೆಳತಿ ಸುರಭಿ ಆಗಿ ನಟಿಸಿದ್ದ ಚಂದನಾ
ಮುಂದೆ ಗೀತಾಂಜಲಿ ಧಾರಾವಾಹಿಯಲ್ಲಿ ಅಂಜಲಿಯ ಚಿಕ್ಕ ಅತ್ತೆಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಹಯವದನ ನಿರ್ದೇಶನದ ನಾಗಿಣಿ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆ ಚಿತ್ರಾಳಾಗಿ ಅಭಿನಯಿಸಿದ ಚಂದನಾ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟನೆಯ ಜೊತೆಗೆ ಚಂದನಾ ನಿರೂಪಣಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಪಸರಿಸಿದ್ದಾರೆ. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಫೋಕಸ್ ಆನ್ ಎನ್ನುವ ಪಬ್ಲಿಕ್ ಫರ್ಮೇಶನ್ ಕಾರ್ಯಕ್ರಮದ ನಿರೂಪಕಿಯಾಗಿಯೂ ಈಕೆ ಗಮನ ಸೆಳೆದಿದ್ದಾರೆ.
ನಾಗಿಣಿಯ ನಂತರ ಇದೀಗ ಮತ್ತೆ ಮೂರು ಗಂಟು ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಬಂದ ಚಂದನಾ ಮಯೂರಿ ಆಗಿ ಬದಲಾಗಿದ್ದಾರೆ. ನಾಗಿಣಿಯ ನಂತರ ಇದೀಗ ಮತ್ತೆ ಮೂರುಗಂಟು ಧಾರಾವಾಹಿಯ ಮಯೂರಿ ಆಗಿ ಕಿರುತೆರೆಯತ್ತ ಚಂದನಾ ಮುಖ ಮಾಡಿದ್ದು ಅವರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.