ETV Bharat / sitara

ಎಸ್‌.ನಾರಾಯಣ್‌ '5 ಡಿ' ಚಿತ್ರಕ್ಕೆ ಕರೆದಾಗ ವಸಿಷ್ಠ ಸಿಂಹ ಹೀಗೆ ಹೇಳಿದರೇ? - S Narayan press meet about 5D film

'5 ಡಿ' ಚಿತ್ರಕ್ಕೆ ಎಸ್.ನಾರಾಯಣ್ ಆ್ಯಕ್ಷನ್ ಕಟ್ ಹೇಳಿದ್ದು ಚಿತ್ರೀಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

S Narayan
ಎಸ್. ನಾರಾಯಣ್
author img

By

Published : Aug 13, 2021, 12:27 PM IST

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಪಂಚ ಭಾಷೆಗಳಲ್ಲಿ ತಯಾರಾಗುತ್ತಿರುವ '5 ಡಿ' ಚಿತ್ರಕ್ಕೆ ಎಸ್. ನಾರಾಯಣ್ ಆ್ಯಕ್ಷನ್, ಕಟ್ ಹೇಳಿದ್ದು ಚಿತ್ರೀಕರಣ ಪೂರ್ಣಗೊಂಡಿದೆ.

'5 ಡಿ' ಚಿತ್ರಕ್ಕೆ ಆದಿತ್ಯ ಅವರನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಇನ್ನಿಬ್ಬರು ನಟರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆ. ಅದರಲ್ಲಿ ಒಬ್ಬರು, ಇವತ್ತಿನ ಸ್ಟೈಲ್​ಗೆ ತಕ್ಕಂತೆ ಸಿನಿಮಾ ಮಾಡುವುದಾದ್ರೆ ಬರುತ್ತೇನೆ ಎಂದರು. ಇನ್ನೊಬ್ಬ ನಟ, ಮನೆಗೆ ಬಂದು ಕಥೆ ಹೇಳಿ ಹೋಗಿ ಎಂದು ಹೇಳಿದರು. ಅವರಿಬ್ಬರ ವರ್ತನೆಯಿಂದ ಬೇಸತ್ತು ನಂತರ ಆದಿತ್ಯ ಅವರನ್ನು ಆಯ್ಕೆ ಮಾಡಿಕೊಂಡೆ ಎಂದು ಎಸ್​.ನಾರಾಯಣ್ ಹೇಳಿದರು.

ಅಷ್ಟಕ್ಕೂ ನಾರಾಯಣ್ ಅವರಿಗೆ ಈ ರೀತಿ ಹೇಳಿದ ಇಬ್ಬರು ನಟರು ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ನಾರಾಯಣ್ ಏನೂ ಹೇಳಿಕೊಳ್ಳದಿದ್ದರೂ ಸಹ ಚಿತ್ರತಂಡ ಕೆಲವು ಸುಳಿವು ಬಿಟ್ಟುಕೊಟ್ಟಿದೆ. ಆ ಪೈಕಿ ವಸಿಷ್ಠ ಸಿಂಹ ಹೆಸರು ಕೇಳಿಬಂದಿದೆ.

ಸದ್ಯಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿರುವ ವಸಿಷ್ಠ ಸಿಂಹ ಅವರನ್ನು ಚಿತ್ರತಂಡ ಸಂಪರ್ಕಿಸಿದಾಗ, ಅವರು ಚಿತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿಸಿದರೂ ಕೂಡ ನಾರಾಯಣ್ ಅವರಿಗೆ ಇಂದಿನ ಸ್ಟೈಲ್​ಗೆ ತಕ್ಕಂತೆ ಚಿತ್ರ ಮಾಡುವುದಕ್ಕೆ ಸಾಧ್ಯನಾ? ಎಂಬ ಅನುಮಾನ ವ್ಯಕ್ತಪಡಿಸಿದ್ದರಂತೆ. ಈ ತರ ಅನುಮಾನ ಬರುವುದು ಸಹಜವಾಗಿದ್ದು, ಇದು ಸಂಪೂರ್ಣ ತಪ್ಪು ಎಂದು ಕೂಡ ಹೇಳಲು ಸಾಧ್ಯವಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.