ETV Bharat / sitara

'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ ಬೆಲ್ ಬಾಟಮ್ ಹೀರೋ..! - ಜೂನ್​​ 5 ರಂದು ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಪ್ರಸಾರ

'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರಕ್ಕಾಗಿ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕನ್ನಡದಲ್ಲಿ ಡಬ್ಬಿಂಗ್​​​​​​​​​​​ ಮಾಡಿದ್ದಾರೆ. ಜೂನ್ 5 ರಂದು ಈ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಡಿಸ್ಕವರಿ ಚಾನಲ್​​​​ನಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

Rishab Shetty gave voice to Wild karnataka Telefilm
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ'
author img

By

Published : May 26, 2020, 11:33 PM IST

ಭಾರತದ ಮೊಟ್ಟ ಮೊದಲ ವನ್ಯಜೀವಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಲಾಕ್​ಡೌನ್​​​ಗೂ ಮುನ್ನ ಮಲ್ಟಿಪ್ಲೆಕ್ಸ್​​​​ನಲ್ಲಿ ಪ್ರದರ್ಶನಗೊಂಡಿತ್ತು. ಮುಖ್ಯಮಂತ್ರಿ, ಬಿ.ಎಸ್​. ಯಡಿಯೂರಪ್ಪ ಕೂಡಾ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು.

'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರಕ್ಕೆ ರಿಷಭ್ ಶೆಟ್ಟಿ ಡಬ್ಬಿಂಗ್

ಇಂಗ್ಲೀಷ್ ಭಾಷೆಯಲ್ಲಿದ್ದ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಇದೀಗ ಕನ್ನಡದಲ್ಲಿ ನೋಡುವ ಸುವರ್ಣಾವಕಾಶ ಬಂದಿದೆ. ನಟ, ನಿರ್ದೇಶಕ ರಿಷಭ್​​​ ಶೆಟ್ಟಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಸದ್ಯ ರಿಷಭ್​​​​​​​​​​ ಶೆಟ್ಟಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಪ್ರೊಮೋ ರಿಲೀಸ್ ಆಗಿದೆ. ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ, ಡಿಸ್ಕವರಿ ಚಾನಲ್ ನಿರ್ಮಾಣ ಮಾಡಿರುವ ಈ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ಬಿಂಗ್ ಆಗಿ ಬರುತ್ತಿದೆ. ತೆಲುಗು ಹಾಗೂ ತಮಿಳು ಭಾಷೆಗೆ ಬಹುಭಾಷಾ ನಟ ಪ್ರಕಾಶ್ ರೈ ಡಬ್ಬಿಂಗ್ ಮಾಡಿದ್ದು, ಹಿಂದಿಯಲ್ಲಿ ರಾಜ್​​​​ಕುಮಾರ್​​ ರಾವ್ ಡಬ್ಬಿಂಗ್ ಮಾಡಿದ್ದಾರೆ.

ಅಮೋಘವರ್ಷ ಜೆ.ಎಸ್ , ಕಲ್ಯಾಣ್ ವರ್ಮಾ, ಶರತ್ ಚಂಪಾತಿ, ವಿಜಯ್ ಮೋಹನ್ ರಾಜ್ ಈ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದಕ್ಕೆ ರಿಕ್ಕಿಕೇಜ್ ಸಂಗೀತ ನೀಡಿದ್ದು, ಆ್ಯಡಮ್ ಕಿರ್ಬಿ ಎಡಿಟಿಂಗ್ ಮಾಡಿದ್ದಾರೆ. ಸುಮಾರು 4-5 ವರ್ಷಗಳಿಂದ‌, ನಮ್ಮ ಕರ್ನಾಟಕದಲ್ಲಿರುವ ಅರಣ್ಯ ಹಾಗೂ ವನ್ಯಜೀವಿಗಳನ್ನು ಚಿತ್ರೀಕರಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಜೂನ್ 5ರಂದು ಡಿಸ್ಕವರಿ ಚಾನಲ್​​​​ನಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಆಗುತ್ತಿದೆ.

ಕನ್ನಡ ವರ್ಷನ್​​ಗೆ ಡಬ್ಬಿಂಗ್ ಮಾಡಿರುವ ರಿಷಭ್​​​​​ ಶೆಟ್ಟಿ ಮೊದಲು ಡಬ್ಬಿಂಗ್ ಮಾಡಲು ಒಪ್ಪಿರಲಿಲ್ಲವಂತೆ. ಆದರೆ ಈ ವಿಡಿಯೋ ನೋಡಿದ ನಂತರ ಸಂತೋಷದಿಂದ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಮುಖ್ಯವಾಗಿ ಈ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಕುಟುಂಬ ಸಹಿತ ನೋಡಬೇಕು ಎನ್ನುವುದು ರಿಷಭ್​​​ ಶೆಟ್ಟಿ ಹೇಳುವ ಮಾತು. ನಮ್ಮ‌ ಕರ್ನಾಟಕದ ಸಿರಿ ಸಂಪತ್ತು ಎಲ್ಲರಿಗೂ ತಿಳಿಯಲಿ ಎಂಬುದೇ ರಿಷಭ್ ಶೆಟ್ಟಿ ಉದ್ದೇಶ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.