ETV Bharat / sitara

ಮಹಿಳಾ ದಿನಾಚರಣೆಯಂದು ನಿಜ ಜೀವನದ ಸತ್ಯರನ್ನು ಭೇಟಿಯಾದ ರೀಲ್ ಸತ್ಯ - Zee Kannada Satya serial

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ ತಂಡ ನಿಜ ಜೀವನದಲ್ಲಿ ಸತ್ಯಳಂತೆ ಬದುಕುತ್ತಿರುವ ಮಹಿಳೆಯರನ್ನು ಭೇಟಿ ಮಾಡುವ ಮೂಲಕ ವಿಭಿನ್ನವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

Reel Satya
ಗೌತಮಿ ಜಾಧವ್
author img

By

Published : Mar 10, 2021, 9:37 AM IST

ಜೀ ಕನ್ನಡ ಮನರಂಜನಾ ವಾಹಿನಿ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನವನ್ನುವಿನೂತನವಾಗಿ ಆಚರಿಸಿದೆ. ಜೀ ಕನ್ನಡದಲ್ಲಿ ಮೂಡಿಬರುತ್ತಿರುವ 'ಸತ್ಯ' ಧಾರಾವಾಹಿಯ ಸತ್ಯ ಪಾತ್ರವು ಎಲ್ಲಾ ದಿಟ್ಟ ಹೆಣ್ಣು ಮಗಳ ಪ್ರತಿನಿಧಿಯಂತೆ ಕಾಣಿಸಿಕೊಂಡಿದೆ. ನಿಜ ಜೀವನದಲ್ಲಿ ಸತ್ಯಳಂತೆ ಇರುವ ಮಹಿಳೆಯರನ್ನು ಭೇಟಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದ್ದಾರೆ ನಟಿ ಗೌತಮಿ ಜಾಧವ್.

ಇದನ್ನೂ ಓದಿ: 'ರಾಬರ್ಟ್' ಸಿನಿಮಾ ನೋಡಬೇಕು ಅಂದುಕೊಂಡಿರುವ ಅಭಿಮಾನಿಗಳಿಗೆ ಶಾಕ್​​...!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸತ್ಯ ಪಾತ್ರಧಾರಿ ಗೌತಮಿ, ನಿಜ ಜೀವನದ ಸತ್ಯರನ್ನು ಸಂದರ್ಶಿಸುವ ಅಪರೂಪದ ಕಾರ್ಯಕ್ರಮ ನಡೆಯಿತು. 'ಸತ್ಯ' ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲಾ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಮೈಸೂರಿನ ಆಟೋ ಚಾಲಕಿ ಸೌಮ್ಯಾ ರಾಣಿ, ಮಂಡ್ಯದಲ್ಲಿ ಪೆಟ್ರೋಲ್ ಬಂಕ್​ನಲ್ಲಿ ಕಾರ್ಯ ನಿರ್ವಹಿಸುವ ಸುಮಲತಾ, ಬೆಂಗಳೂರಿನ ಗೋ ಪಿಂಕ್ ಕ್ಲಬ್​ನ ರೂಪಾ ಆಲಿಸಾ, ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಉಮಾ ರೆಡ್ಡಿ ಅವರು ಸತ್ಯ ಧಾರಾವಾಹಿಯ ಪಾತ್ರಗಳಂತೆಯೇ ಬದುಕಿದವರು. ಬದುಕಿನ ಸಂಕಷ್ಟಗಳನ್ನು ಎದುರಿಸಿ ದಿಟ್ಟ ಹೆಜ್ಜೆ ಇಟ್ಟು ನಿಂತವರು. ಈ ಎಲ್ಲರೂ 'ಸತ್ಯ' ಧಾರಾವಾಹಿ ಪಾತ್ರಕ್ಕೆ ಸ್ಫೂರ್ತಿಯಾದವರು. ಇವರೆಲ್ಲಾ ಒಟ್ಟಿಗೆ ಸೇರಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ 'ಸತ್ಯ' ಕೂಡ ಒಂದು. ಇತ್ತೀಚೆಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್​ ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.