ETV Bharat / sitara

ಕಿರುತೆರೆಯಿಂದ ಬ್ರೇಕ್ ಪಡೆದ ಪ್ರಿಯಾ ಕೆಸರೆ...ಅಸಲಿ ಕಾರಣ ಇದು

author img

By

Published : Mar 5, 2021, 3:49 PM IST

ಕಿರುತೆರೆ ನಟಿ ಪ್ರಿಯಾ ಕೆಸರೆ ಸುಮಾರು 1 ವರ್ಷದಿಂದ ಕಿರುತೆರೆಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ ಅವರು ಮಗುವಿಗೆ ಜನ್ಮ ನೀಡಿದ್ದು. ಪ್ರಿಯಾ ತಾವು ಗರ್ಭಿಣಿ, ಮಗುವಿಗೆ ಜನ್ಮ ನೀಡಿದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ ಇದೀಗ ಆಕೆ ಕಿರುತೆರೆಯಿಂದ ದೂರ ಉಳಿದ ಕಾರಣ ಏನು ಎಂಬುದು ರಿವೀಲ್ ಆಗಿದೆ.

Priya kesare
ಪ್ರಿಯಾ ಕೆಸರೆ

ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದಲ್ಲಿ ಖಳನಾಯಕಿ ಭಾವನಾ ಆಗಿ ನಟಿಸಿ ಸೀರಿಯಲ್ ಕ್ಷೇತ್ರದಲ್ಲಿ ಮನೆ ಮಾತಾಗಿದ್ದ ಮಲೆನಾಡ ಚೆಲುವೆ ಪ್ರಿಯಾ ಕೆಸರೆ ಇದೀಗ ಬಣ್ಣದ ಲೋಕದಿಂದ ದೂರವಿದ್ದಾರೆ. 'ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡ ಪ್ರಿಯಾ ಕೆಸರೆ ಎರಡು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿಲ್ಲ. ಅದಕ್ಕೆ ಏನು ಕಾರಣ ಎಂಬುದು ಈಗ ಹೊರಬಿದ್ದಿದೆ.

Priya kesare
ಪತಿ ಹಾಗೂ ಪುತ್ರನೊಂದಿಗೆ ಪ್ರಿಯಾ

ಇದನ್ನೂ ಓದಿ: 'ರಾಬರ್ಟ್' ರಿಲೀಸ್​​​​​​ಗೂ ಮುನ್ನವೇ ಹೊಸ ದಾಖಲೆ ಮಾಡಲು ಹೊರಟ ದಚ್ಚು ಅಭಿಮಾನಿಗಳು..!

ಕಳೆದ ವರ್ಷ ಜನವರಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ ಕೆಸರೆ ಇದೀಗ ಮುದ್ದು ಮಗ ವಿಶಿಷ್ಟನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಗನ ಲಾಲನೆ ಪಾಲನೆಯ ಜೊತೆಗೆ ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಪ್ರಿಯಾ ಅದೇ ಕಾರಣದಿಂದ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. "ಕಳೆದ ವರ್ಷ ಜನವರಿಯಲ್ಲಿ ಮುದ್ದು ಕೃಷ್ಣನನ್ನು ಬರಮಾಡಿಕೊಂಡಿದ್ದೇವೆ. ಮುದ್ದು ಕಂದನ ಆಗಮನ ನಮ್ಮ ಕುಟುಂಬವನ್ನು ಪೂರ್ಣಗೊಳಿಸಿದೆ. ಇಬ್ಬರಾಗಿದ್ದ ನಾವು ಮೂವರಾಗಿದ್ದೇವೆ. ಸಂತಸ ಮನೆ ಮಾಡಿದೆ. ಇನ್ನು ಜನವರಿಯಲ್ಲಿ ಮಗ ಹುಟ್ಡಿದ್ದು ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲೂ ಅನೌನ್ಸ್ ಮಾಡಲು ಸಾಧ್ಯವಾಗಲಿಲ್ಲ. ತುಂಬಾ ವಿಭಿನ್ನವಾಗಿ ಮಗನನ್ನು ಪರಿಚಯಿಸಬೇಕು ಎಂಬ ಕಾರಣದಿಂದ ಮೊದಲ ಹುಟ್ಟುಹಬ್ಬದಂದೇ ಎಲ್ಲರಿಗೂ ಆತನನ್ನು ಪರಿಚಯಿಸಿದ್ದೇವೆ. ಮಗ ಹುಟ್ಟಿದ್ದಾನೆ, ಮೊದಲ ಬರ್ತ್ ಡೇ ಎಂದು ಕರೆದಾಗ ತುಂಬಾ ಜನರಿಗೆ ಶಾಕ್ ಆಗಿತ್ತು. ಏಕೆಂದರೆ ನಾನು ಗರ್ಭಿಣಿಯಾಗಿದ್ದ ವಿಚಾರ ತುಂಬಾ ಜನರಿಗೆ ತಿಳಿದಿರಲಿಲ್ಲ" ಎಂದು ಹೇಳುವ ಪ್ರಿಯಾ ಕೆಸರೆಗೆ ಈಗಲೂ ಕಿರುತೆರೆಯಿಂದ ಆಫರ್​​​​ಗಳು ಬರುತ್ತಿದೆಯಂತೆ. ಸದ್ಯ ಮಗನ ಆರೈಕೆಯಲ್ಲಿ ಬ್ಯುಸಿ ಇರುವ ಕಾರಣ ಯಾವಾಗ ಕಿರುತೆರೆಗೆ ಮರಳಲಿದ್ದಾರೆ ಕಾದು ನೋಡಬೇಕು.

Priya kesare
ಪ್ರಿಯಾ ಕೆಸರೆ ಪುತ್ರ ವಿಶಿಷ್ಟ
Priya kesare
ಮಗನ ಹುಟ್ಟುಹಬ್ಬ ಆಚರಿಸಿದ ಪ್ರಿಯಾ ಕೆಸರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.