ETV Bharat / sitara

ಸಾಮಾಜಿಕ ಜಾಲತಾಣದಲ್ಲಿ ತಾರೆಗಳ ಪ್ರಭಾವ: ಫೋರ್ಬ್ಸ್‌ ಇಂಡಿಯಾ ಪಟ್ಟಿಯಲ್ಲಿ ರಶ್ಮಿಕಾಗೆ ಅಗ್ರಸ್ಥಾನ - ಫೋರ್ಬ್ಸ್ ಪಟ್ಟಿ

ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ತಾರೆಗಳ ಫೋರ್ಬ್ಸ್ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅಗ್ರಸ್ಥಾನದಲ್ಲಿದ್ದಾರೆ.

ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
author img

By

Published : Oct 18, 2021, 10:22 AM IST

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಹುಭಾಷೆಯಲ್ಲಿ ಅವರಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತ ಮಾತ್ರವಲ್ಲದೇ, ಬಾಲಿವುಡ್​ಗೂ ಕಾಲಿಟ್ಟಿದ್ದು ಅವರ ಕೆಲಸಕ್ಕೆ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ.

'ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ ಸದ್ಯಕ್ಕೆ ಹಿಂದಿ, ತೆಲುಗು, ತಮಿಳು ಸಿನಿಮಾಗಳ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಮುಂಬೈ ಟು ಹೈದರಾಬಾದ್ ಅಂತ ಓಡಾಡುತ್ತಲೇ ಇರುವ ಇವರು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದು ಇದೀಗ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹೌದು, ಫೋರ್ಬ್ಸ್ ಇಂಡಿಯಾದ ಅತ್ಯಂತ ಪ್ರಭಾವಶಾಲಿ ನಟರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅಗ್ರಸ್ಥಾನದಲ್ಲಿದ್ದಾರೆ. ಸಮಂತಾ, ವಿಜಯ್ ದೇವರಕೊಂಡ ಮತ್ತು ಯಶ್ ಅವರನ್ನು ಹಿಂದಿಕ್ಕಿ ಈ ಕೊಡಗಿನ ಬೆಡಗಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು 'ಪೆಲ್ಲಿ ಚೂಪುಲು' , 'ಅರ್ಜುನ್ ರೆಡ್ಡಿ' ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ವಿಜಯ್ ದೇವರಕೊಂಡ, ಸಾಮಾಜಿಕ ಮಾಧ್ಯಮ ತಾರೆಗಳ ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಕನ್ನಡದ ನಟ ಯಶ್ ಇದ್ದಾರೆ. ಮತ್ತು ಸಮಂತಾ ರುತ್ ಪ್ರಭು ನಾಲ್ಕನೇ ಸ್ಥಾನದಲ್ಲಿದ್ದರೆ, ಅಲ್ಲು ಅರ್ಜುನ್ ನಂತರದ ಸ್ಥಾನದಲ್ಲಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಫೋಟೋಗಳಿಗೆ ಮತ್ತು ವೀಡಿಯೋಗಳಿಗೆ ಮಾಡಿರುವ ಲೈಕ್ಸ್​, ಕಾಮೆಂಟ್‌, ವಿಡಿಯೋ ವೀಕ್ಷಣೆ ಸೇರಿದಂತೆ ಇತರೆ ಅಂಶಗಳನ್ನು ಪರಿಗಣಿಸಿ, ಫೋರ್ಬ್ಸ್ ಈ ಪಟ್ಟಿ ಬಿಡುಗಡೆ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.