ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕನ್ನಡ ಪ್ರಾಧ್ಯಾಪಕಿ ಭುವನೇಶ್ವರಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನಕ್ಕೆ ಮತ್ತಷ್ಟು ಹತ್ತಿರವಾಗಿರುವ ನಟಿ ರಂಜನಿ ರಾಘವನ್.
- " class="align-text-top noRightClick twitterSection" data="
">
ಈಗಾಗಲೇ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಗೌರಿ ಆಗಿ ಕೆಲವು ವರ್ಷ ವೀಕ್ಷಕರಿಗೆ ಮನರಂಜನೆ ನೀಡಿದ ರಂಜನಿಯ ಹೊಸ ಅವತಾರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅರಳು ಹುರಿದಂತೆ ಪಟಪಟನೆ ಕನ್ನಡ ಮಾತನಾಡುವ ಭುವಿಯ ಪಾತ್ರಕ್ಕೆ ಜನ ಸೋತಿದ್ದಾರೆ. ಭುವಿ ಆಲಿಯಾಸ್ ರಂಜನಿ ಇದೀಗ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಬದಲಾಗಲಿದ್ದಾರೆ. 'ಕನ್ನಡತಿ'ಯ ಜೊತೆಗೆ ರಂಜನಿ ಹೊಸ ಧಾರಾವಾಹಿಯಲ್ಲಿ ಆ್ಯಕ್ಟ್ ಮಾಡ್ತಿದ್ದಾರಾ ಎಂದು ಯೋಚಿಸಬೇಡಿ. ಏಕೆಂದರೆ ಭುವಿ ಪೊಲೀಸ್ ವಾರ್ಡನ್ ಆಗಿರುವುದು ರೀಲ್ ಅಲ್ಲ, ರಿಯಲ್ ಲೈಫ್ನಲ್ಲಿ. ಆಶ್ಚರ್ಯ ಎಂದೆನಿಸಿದರೂ ಸತ್ಯ. ಅದರ ಬಗ್ಗೆ ಸ್ವತಃ ರಂಜನಿ ರಾಘವನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
'ನಮಸ್ಕಾರ, ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಕೊರೊನಾ ನಿಯಂತ್ರಣ ಹಾಗೂ ನಿಯಮಗಳನ್ನು ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಪೊಲೀಸ್ ಇಲಾಖೆಗೂ ಅತಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಸ್ವಯಂ ಸೇವಕರ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆ ಸಲ್ಲಿಸುವಂತೆ ಕರೆ ನೀಡಿದ್ದಾರೆ.
- " class="align-text-top noRightClick twitterSection" data="
">
ಈ ಕಾರಣದಿಂದ ನಾನೂ ಕೂಡಾ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಾಗೆ ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯದಲ್ಲಿ ಸೇರುವಂತೆ ಸೂಚಿಸುತ್ತೇನೆ' ಎಂದು ರಂಜನಿ ಬರೆದುಕೊಂಡಿದ್ದಾರೆ. ಆ ಮೂಲಕ ಲಾಕ್ ಡೌನ್ ಸಮಯವನ್ನು ಉತ್ತಮ ಕಾರ್ಯಕ್ಕೆ ಉಪಯೋಗ ಮಾಡಿದ್ದಾರೆ ರಂಜನಿ ರಾಘವನ್.