ರಂಜನಿ ರಾಘವನ್ ಎಂಬ ಹೆಸರು ಕೇಳಿದೊಡನೆ ಕಿರುತೆರೆ ವೀಕ್ಷಕರಿಗೆ ಥಟ್ ಎಂದು ನೆನಪಾಗುವುದು 'ಪುಟ್ಟ ಗೌರಿ ಮದುವೆ' ಧಾರಾವಾಹಿ. ಈ ಧಾರಾವಾಹಿಯ ಗೌರಿ ಆಗಿ ಜನಪ್ರಿಯತೆ ಪಡೆದಿರುವ ರಂಜಿನಿ ಇಂದಿಗೂ ಪುಟ್ಟ ಗೌರಿ ಎಂದೇ ಫೇಮಸ್. 4 ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಈ ಧಾರಾವಾಹಿ, ಕಳೆದ ವರ್ಷ ಮುಕ್ತಾಯಗೊಂಡಿದ್ದರೂ ಇಂದಿಗೂ ಗೌರಿಯ ಪಾತ್ರ ಹಸಿರಾಗಿದೆ.
ಅಂದ ಹಾಗೇ ಇದೀಗ ನಿಮ್ಮ ಪ್ರೀತಿಯ ಪುಟ್ಟ ಗೌರಿ ಮತ್ತೆ ಬರುತ್ತಿದ್ದಾಳೆ. 4 ವರ್ಷಗಳ ಕಾಲ ಗೌರಿಯಾಗಿ ಮನರಂಜನೆಯ ರಸದೌತಣ ನೀಡಿರುವ ರಂಜನಿ ನಿಮ್ಮನ್ನೆಲ್ಲಾ ರಂಜಿಸಲು ಇದೀಗ ಕನ್ನಡತಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ಅವರು ಕನ್ನಡದವರಲ್ವೇ? ಮತ್ಯಾಕೆ ಮತ್ತೆ ಕನ್ನಡತಿ ಆಗುತ್ತಿದ್ದಾರೆ ಎಂದು ಕನ್ಫ್ಯೂಸ್ ಆಗಬೇಡಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಕನ್ನಡತಿ'ಯಲ್ಲಿ ರಂಜನಿ ಅವರು ಕನ್ನಡ ಪ್ರೇಮಿ ಭುವನೇಶ್ವರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ ರಂಜನಿ ಅವರನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
- View this post on Instagram
ಭುವನೇಶ್ವರಿ ಹೇಳ್ತಿದ್ದಾಳೆ, "ಸರಿಗನ್ನಡಂ ಗೆಲ್ಗೆ" ಅಂತ! ಬರ್ತಿದೆ ಹೊಸ ಕತೆ, ಕನ್ನಡತಿ! #Kannadati
">
ರಂಜನಿ ನಟಿ ಮಾತ್ರವಲ್ಲ, ನಿರ್ದೇಶನದತ್ತ ಒಲವಿದ್ದ ಅವರು ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಷ್ಟದೇವತೆ' ಧಾರಾವಾಹಿಯನ್ನು ರಂಜನಿ ನಿರ್ದೇಶಿಸಿದ್ದರು. ಇದರೊಂದಿಗೆ ಮಲಯಾಳಂನ 'ಪೌರ್ಣಮಿ ತಿಂಗಳ್' ನಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರಂಜನಿ ಅಲ್ಲೂ ತಮ್ಮ ನಟನಾ ಕೌಶಲ್ಯತೆ ಮೆರೆದಿದ್ದಾರೆ.