ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ರಮ್ಯಾ ಪಾತ್ರಧಾರಿಯಾಗಿ ಬಣ್ಣದ ಲೋಕಕ್ಕೆ ಪರಿಚಿತರಾಗಿದ್ದ ಮುದ್ದು ಮುಖದ ಚೆಲುವೆ ಹೆಸರು ಮೇಘಾ ಶೆಣೈ. ಮೊದಲ ಧಾರಾವಾಹಿಯಲ್ಲೇ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆ ಮೇಘಾ ಇದೀಗ ಕೀರ್ತಿಯಾಗಿ ವೀಕ್ಷಕರ ಮುಂದೆ ಬರಲಿದ್ದಾರೆ.
ಹೆಸರು ಬದಲಾಯಿಸುತ್ತಿದ್ದಾರಾ ಎಂದು ಕನ್ಫ್ಯೂಸ್ ಆಗಬೇಡಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಮೇಘಾ, ಕೀರ್ತಿ ಎಂಬ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಧಾರಾವಾಹಿಯಲ್ಲಿ ಮೇಘಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಧಾರಾವಾಹಿ ಪ್ರೋಮೋದಲ್ಲಿ ರಗಡ್ ಲುಕ್ನಲ್ಲಿ ಮಿಂಚಿದ್ದಾರೆ. 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ಮೇಘಾ ಶ್ರೀಮಂತ ಉದ್ಯಮಿ ಮಗಳು ಆಗಿ ಕಾಣಿಸಿಕೊಂಡಿದ್ದರು. ಆದರೆ, ಧಾರಾವಾಹಿ ಅರ್ಧಕ್ಕೆ ನಿಂತಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.