ಟಗರು ಸಿನಿಮಾ ಮೂಲಕ ಸ್ಯಾಂಡಲ್ ವುಡ್ನಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ನಟ ಧನಂಜಯ್, ಡಾಲಿ ಪಾತ್ರದ ಮೂಲ್ಕ ಮಾಸ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿರುವ ನಟ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್, ಸಲಗ ಹೀಗೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.
ಟೆಕ್ ಮಹೀಂದ್ರ ಕನ್ನಡ ಸಂಘ ಏರ್ಪಡಿಸಿದ್ದ ರಾಜ್ಯೋತ್ಸವ ಡಿಂಡಿಮ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ವಿಶೇಷ ಅತಿಥಿಯಾಗಿ ಬಂದಿದ್ರು. ಕಾರಣ ಧನಂಜಯ್ ಕೂಡ ಸಿನಿಮಾ ನಟ ಆಗುವುದಕ್ಕಿಂತ ಮುಂಚೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಈಗ ಕೆಲಸ ಬಿಟ್ಟು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿರೋದು ಮಹೀಂದ್ರ ಕಂಪನಿಯ ಟೆಕ್ಕಿಗಳಿಗೆ ಖುಷಿ ತಂದಿದೆ. ಟೆಕ್ಕಿಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಡಿಂಡಿಮ ಕಾರ್ಯಕ್ರಮವನ್ನ ಡಾಲಿ ಧನಂಜಯ್ ದೀಪ ಬೆಳಗಿಸುವ ಮೂಲಕ ತಮ್ಮದೆ ಚಿತ್ರದ ಡೈಲಾಗ್ ಹೊಡೆದು ಅಲ್ಲಿನ ಸಿನಿಮಾ ಪ್ರಿಯರನ್ನ ರಂಜಿಸಿದ್ರು. ಅಷ್ಟೇ ಅಲ್ಲ ಅಣ್ಣಾವ್ರು-ಶಂಕರ್ ನಾಗ್ ಸ್ಟೈಲಲ್ಲಿ ಬಡವ ರಾಸ್ಕಲ್ ಪಂಚಿಂಗ್ ಡೈಲಾಗ್ನ್ನು ಹೊಡೆಯುವ ಮೂಲಕ ರಂಜಿಸಿದ್ರು.