ಭಾರತದ ಜನಪ್ರಿಯ ವರ್ಣ ಚಿತ್ರಗಾರ ರಾಜಾ ರವಿವರ್ಮ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅವರು ಬರೆದಂತಹ ಒಂದೊಂದು ಚಿತ್ರಗಳು ಇಂದಿಗೂ ಜೀವಂತವಾಗಿವೆ. ಅವರು ಬರೆದ ಸುಂದರ ಕಲಾಕೃತಿಗೆ ಮನ ಸೋಲದವರಿಲ್ಲ. ತಮ್ಮ ಕಲಾಕುಂಚದಿಂದ ನಿರ್ಜೀವ ವಸ್ತುವಿಗೂ ಜೀವ ಭರಿಸುವ ಶಕ್ತಿ ರಾಜ ರವಿವರ್ಮರಿಗಿತ್ತು. ಕಿರುತೆರೆ ನಟಿಯೊಬ್ಬರು ರಾಜಾ ರವಿವರ್ಮರ ವರ್ಣಚಿತ್ರಗಳಂತೆಯೇ ಫೊಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಫೋಟೋಗಳನ್ನು ನೋಡುವಾಗ ರವಿವರ್ಮನ ವರ್ಣಚಿತ್ರ ನೆನಪಾಗಿಯೇ ಆಗುತ್ತದೆ. ಅಂದ ಹಾಗೇ ರವಿವರ್ಮನ ಕಲಾಕೃತಿಯನ್ನು ಫೋಟೋಶೂಟ್ ಮೂಲಕ ಮರು ಸೃಷ್ಟಿ ಮಾಡಿಸಿಕೊಂಡಿರುವ ಆ ಕಿರುತೆರೆ ನಟಿ ಹೆಸರು ನಯನಾ ವೆಂಕಟೇಶ್.
ಕಳೆದ ಅಕ್ಟೋಬರ್ 30ರಂದು ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನಯನಾ, ತಮ್ಮ ಮಗುವಿಗೆ ಪ್ರಯಾನ್ ಭಾರದ್ವಾಜ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ಮಗುವಿನ ಜೊತೆ ಫೊಟೋಗೆ ಪೋಸ್ ನೀಡಿದ್ದಾರೆ.
5 ತಿಂಗಳ ಮುದ್ದು ಹುಡುಗ ಪ್ರಯಾನ್ ಇನ್ಸ್ಟಾಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾನೆ. ಲಿಟಲ್ ಎನ್ವಿಸ್ ಎಂಬ ಹೆಸರಿನ ಈ ಖಾತೆಗೆ ಈಗಾಗಲೇ ಮೂರುವರೆ ಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ.
ಚಿಕ್ಕಮ್ಮ, ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಯನಾ ಸದ್ಯ ಪತಿ ವೆಂಕಟೇಶ್ ಮತ್ತು ಮಗ ಪ್ರಯಾನ್ರೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಾಯ್ತನವನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ.