ಸುಮಧುರ ಕಂಠಸಿರಿಯ ಮೂಲಕ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋ 12ನೇ ಆವೃತ್ತಿ ಫೈನಲ್ಗೆ ಲಗ್ಗೆ ಹಾಕಿದ್ದ ಕನ್ನಡಿಗ ನಿಹಾಲ್ಗೆ ನಿರಾಸೆಯಾಗಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಪವನ್ದೀಪ್ ರಂಜನ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
-
. #AdityaNarayan #HimeshReshammiya @fremantle_india @The_AnuMalik @SonuKakkar https://t.co/mkF1Hf3NmU
— sonytv (@SonyTV) August 15, 2021 ]" class="align-text-top noRightClick twitterSection" data="
]">. #AdityaNarayan #HimeshReshammiya @fremantle_india @The_AnuMalik @SonuKakkar https://t.co/mkF1Hf3NmU
— sonytv (@SonyTV) August 15, 2021
]. #AdityaNarayan #HimeshReshammiya @fremantle_india @The_AnuMalik @SonuKakkar https://t.co/mkF1Hf3NmU
— sonytv (@SonyTV) August 15, 2021
ಹಿಂದಿಯ ಖ್ಯಾತ ರಿಯಾಲಿಟಿ ಶೋ "ಇಂಡಿಯನ್ ಐಡಲ್" ಕಾರ್ಯಕ್ರಮದಲ್ಲಿ ಒಟ್ಟು 40 ಸ್ಪರ್ಧಿಗಳು 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಆದರೆ ಫೈನಲ್ಗೆ ಕನ್ನಡಿಗ ನಿಹಾಲ್ ತಾವ್ರೋ ಸೇರಿದಂತೆ 10 ಯುವ ಗಾಯಕರು ಲಗ್ಗೆ ಹಾಕಿದ್ದರು. ಅದರಲ್ಲಿ ಪವನ್ದೀಪ್, ಅರುಣಿತ ಕಂಜಿಲಾಲ್, ಮೊಹ್ಮದ್ ಡ್ಯಾನಿಶ್, ಷಣ್ಮುಖಪ್ರಿಯ, ನಿಹಾಲ್ ತಾವ್ರೋ ಮತ್ತು ಸಾಯ್ಲಿ ಕಾಂಬ್ಳೆ ಪ್ರಮುಖ ಸ್ಪರ್ಧಿಗಳಾಗಿದ್ದರು.
ಆಗಸ್ಟ್ 15ರ ಮಧ್ಯಾಹ್ನ 12ಗಂಟೆಗೆ ಆರಂಭಗೊಂಡಿದ್ದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ಮುಂದುವರೆದಿತ್ತು. ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಪವನ್ ದೀಪ್ ಅವರಿಗೆ 25 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಕಾರು ಸ್ವಿಫ್ಟ್ ನೀಡಲಾಗಿದೆ.
ರನ್ನರ್ ಅಪ್ ಆಗಿ ಅರುಣಿತ್ ಕಂಜಿಲಾಲ್ ಹಾಗೂ ಸಾಯ್ಲಿ ಕಾಂಬ್ಳೆ ಆಯ್ಕೆಯಾಗಿದ್ದು ತಲಾ 5 ಲಕ್ಷ ರೂ. ಪಡೆದುಕೊಂಡಿದ್ದಾರೆ. ಉಳಿದಂತೆ ಡ್ಯಾನಿಸ್ ಹಾಗೂ ಕನ್ನಡಿಗ ನಿಹಾಲ್ ತಾವ್ರೋ 3 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಗಾಯಕ ನಿಹಾಲ್ ಇಂಡಿಯನ್ ಐಡಲ್ ಫಿನಾಲೆ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಉತ್ತರಾಖಂಡದ ಪವನ್ದೀಪ್ ರಂಜನ್ ಆರಂಭದಿಂದಲೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಕ್ರಮದಲ್ಲಿ ಉದಿತ್ ನಾರಾಯಣ್, ಕುಮಾರ್ ಸಾನು, ಅಲ್ಕಾ ಯಾಗ್ನಿಕ್, ಜಾವೇದ್ ಅಲಿ, ರ್ಯಾಪರ್ ಮಿಕಾ ಸಿಂಗ್ ತೀರ್ಪುಗಾರರಾಗಿದ್ದರು. ಉಳಿದಂತೆ ಬಾಲಿವುಡ್ನ ಸಿದ್ಧಾರ್ಥ್ ಮಲ್ಹೋತ್ರಾ, ನಟಿ ಸೋನಿಯಾ ಕಪೂರ್ ಸೇರಿದಂತೆ ಅನೇಕರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು.