ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಒಂದು ವರ್ಷದ ಗ್ಯಾಪ್ ನಂತರ ಮತ್ತೆ ನಿರೂಪಣೆಗೆ ಮರಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ವಾರಾಂತ್ಯದಂದು ಪ್ರಸಾರವಾಗಲಿರುವ 'ಪ್ರೇಮೋತ್ಸವ' ಎಂಬ ವಿಶೇಷ ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಲಿದ್ದಾರೆ.
ಇದನ್ನೂ ಓದಿ: ವಿದ್ಯುಲ್ಲೇಖ ಹೊಸ ಫೋಟೋಗಳನ್ನು ನೋಡಿ ಶಾಕ್ ಆದ ಅಭಿಮಾನಿಗಳು
ಪ್ರೇಮಿಗಳ ದಿನದ ಸಂಭ್ರಮದಂದು ನಿರಂಜನ್ 'ಪ್ರೇಮೋತ್ಸವ' ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಪ್ರೇಮವನ್ನು ಸಂಭ್ರಮ ಪಡುವಂತಹ ಕಾರ್ಯಕ್ರಮ ಇದಾಗಿದೆ. ಕಿರುತೆರೆ, ಹಿರಿತೆರೆ ಸೆಲಬ್ರಿಟಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಕಿಶನ್ ಬೆಳಗಲಿ , ನೇಹಾ ಗೌಡ , ಶೈನ್ ಶೆಟ್ಟಿ ,ಅನುಪಮಾ ಗೌಡ , ಶ್ವೇತಾ ಶ್ರೀವಾತ್ಸವ್ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್, ಬೊಂಬಾಟ್ ಭೋಜನ ಶೋಗಳಲ್ಲಿ ಭಾಗವಹಿಸಿದ್ದ ನಿರಂಜನ್, ಪ್ರೇಮಿಗಳ ದಿನದ ಪ್ರೇಮೋತ್ಸವ ಕಾರ್ಯಕ್ರಮದ ಮೂಲಕ ಮತ್ತೆ ನಿರೂಪಕ ಆಗಿ ಮರಳಿದ್ದಾರೆ. ನಿರಂಜನ್ ಅವರಿಗೆ ಶಾಲಿನಿ ಸಾಥ್ ಕೊಡಲಿದ್ದಾರೆ. ಲಾಕ್ಡೌನ್ಗೂ ಮುನ್ನ ನಿರಂಜನ್ 'ತುತ್ತಾ ಮುತ್ತಾ -2' ಸೀಸನ್ ನಡೆಸಿಕೊಡುತ್ತಿದ್ದರು.ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ತಮ್ಮ ಜೀವನಸಂಗಾತಿ ಹಾಗೂ ಅಮ್ಮನೊಂದಿಗೆ ಭಾಗವಹಿಸುತ್ತಿದ್ದರು. ಈ ಕಾರ್ಯಕ್ರಮದ ಜೊತೆಗೆ ನಿರಂಜನ್ ಇನ್ನಿತರ ಈವೆಂಟ್ಸ್ ಹಾಗೂ ವಾಹಿನಿಗಳಲ್ಲಿ ವಿಶೇಷ ಸಂಚಿಕೆಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರಿನಲ್ಲಿರುವ ತಮ್ಮ ರೆಸಾರ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಿರಂಜನ್ ಲಾಕ್ಡೌನ್ ದಿನಗಳಲ್ಲಿ ರೆಸಾರ್ಟ್ನಲ್ಲಿ ತಂಗಿದ್ದರು.