ಕಿರುತೆರೆ ನಟಿ ಯಮುನಾ ಶ್ರೀನಿಧಿ ಹೆಸರು ನೀವು ಕೇಳಿದ್ದೀರಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ಕಮಲಿಯ ಅಮ್ಮ ಗೌರಿಯಾಗಿ ನಟಿಸಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ನಟಿ ಇವರು.
- " class="align-text-top noRightClick twitterSection" data="
">
ಯಮುನಾ ಶ್ರೀನಿಧಿ ರಿಯಲ್ ಲೈಫಲ್ಲೂ ಎರಡು ಮಕ್ಕಳ ತಾಯಿ. ಸದ್ಯ ಲಾಕ್ಡೌನ್ ಸಮಯವನ್ನು ತಮ್ಮ ಮಕ್ಕಳೊಂದಿಗೆ ಕಳೆಯುತ್ತಿರುವ ಅವರು ಇತ್ತೀಚೆಗೆ ಬಹಳ ಖುಷಿಯಾಗಿದ್ದಾರೆ. ಯುಮನಾ ಶ್ರೀನಿಧಿ ತಮ್ಮ ಮನೆಯ ಬಳಿಯ ಮರದಲ್ಲಿ ಗೂಡುಕಟ್ಟಿರುವ ಹಕ್ಕಿಗಳು ಮೊಟ್ಟೆ ಇಟ್ಟು ಮರಿಗಳು ಹೊರಬಂದಿರುವುದನ್ನು ನೋಡಿ ಬಹಳ ಸಂಭ್ರಮ ಪಟ್ಟಿದ್ದಾರೆ.
ಹಕ್ಕಿಗಳು ಗೂಡು ಕಟ್ಟುವುದರಿಂದ ಹಿಡಿದು ಅವುಗಳ ಪ್ರತಿ ಚಲನವಲನಗಳನ್ನು ಉತ್ಸುಕರಾಗಿ ನೋಡಿದ್ದ ಯಮುನಾ ಶ್ರೀನಿಧಿ ಈಗ ಮೊಟ್ಟೆ ಒಡೆದು ಮರಿಗಳು ಹೊರ ಬಂದಿರುವುದಕ್ಕೆ ಬಹಳ ಖುಷಿಯಾಗಿದ್ಧಾರೆ. ಅಷ್ಟೇ ಅಲ್ಲ ಅವುಗಳ ಪೋಟೋ ತೆಗೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡಾ ಮಾಡಿದ್ದಾರೆ. ಈ ಖುಷಿ ಜೊತೆಗೆ ರೆಕ್ಕೆ ಬಲಿತ ಹಕ್ಕಿಗಳು ಹಾರಿ ಹೋಗಿರುವುದಕ್ಕೆ ಅವರು ಬೇಸರದಲ್ಲಿದ್ಧಾರಂತೆ. 'ಈ ಅನುಭವದಲ್ಲಿ ಭಾಗಿಗಳಾದ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
'ಅಶ್ವಿನಿ' ನಕ್ಷತ್ರ ಧಾರಾವಾಹಿ ಮೂಲಕ ಕರಿಯರ್ ಆರಂಭಿಸಿದ ಯಮುನಾ ಶ್ರೀನಿಧಿ, ನಂತರ 'ಅರಮನೆ', 'ಮಾನಸ ಸರೋವರ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು. ಇದೀಗ 'ಕಮಲಿ' ತಾಯಿಯ ಪಾತ್ರದ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಕಮಲಿಯ ತಾಯಿ ಪಾತ್ರದಂತೆ ನಾನು ಕೂಡಾ ತುಂಬಾ ಪ್ರೊಟೆಕ್ಟಿವ್. ಮಕ್ಕಳ ಬಗ್ಗೆ ತುಂಬಾ ಕಾಳಜಿ ತೋರಿಸುತ್ತೇನೆ. ಅವರೊಂದಿಗೆ ಕಳೆಯುವ ಕ್ಷಣ ಬಹಳ ಪ್ರಮುಖವಾದದ್ದು ಎಂದು ಹೇಳಿಕೊಂಡಿದ್ದಾರೆ ಯಮುನಾ ಶ್ರೀನಿಧಿ.