ಹಿರಿಯ ನಟ ಶ್ರೀನಿವಾಸ್ ಮೂರ್ತಿ ಪುತ್ರ, ಬಹುಮುಖ ಪ್ರತಿಭೆ ನವೀನ್ ಕೃಷ್ಣ ಕೊರೊನಾ ಲಾಕ್ ಡೌನ್ ನಡುವೆಯೂ ಬ್ಯುಸಿ ಇದ್ದವರು. ಕಿರುಚಿತ್ರ, ಹಾಡುಗಳು, ನಾಟಕ, ಸಿನಿಮಾ ಎಂದೆಲ್ಲಾ ತಮ್ಮನ್ನು ತೊಡಗಿಸಿಕೊಂಡಿರುವ ನವೀನ್ ಕೃಷ್ಣ ತಮ್ಮ ಪುತ್ರರಾದ ಹರ್ಷಿತ್, ಹರುಷ್ಗೆ ಆ್ಯಕ್ಟಿಂಗ್ ಟ್ರೈನಿಂಗ್ ಕೂಡಾ ನೀಡುತ್ತಿದ್ದಾರೆ.
- " class="align-text-top noRightClick twitterSection" data="">
ಇದೀಗ ನವೀನ್ ಕೃಷ್ಣ 'ದೇವರು ನಗುತಾನೆ' ಎಂಬ ಹಾಡೊಂದನ್ನು 'ಯು ರೈಟ್ ಐ ಸಿಂಗ್' ಅಡಿಯಲ್ಲಿ ಹೊರತಂದಿದ್ದಾರೆ. ಇತರ ಸಾಹಿತಿಗಳು ಬರೆದದ್ದನ್ನು ನವೀನ್ ಕೃಷ್ಣ ರಾಗ ಸಂಯೋಜಿಸಿ ಹಾಡುವುದು ಈ ಯು ರೈಟ್ ಐ ಸಿಂಗ್ ಪರಿಕಲ್ಪನೆ. ಇದೀಗ ದೇವರು ನಗುತಾನೆ ಎಂಬ ಹಾಡನ್ನು ನವೀನ್ ಕೃಷ್ಣ ರಾಗ ಸಂಯೋಜಿಸಿ ಹಾಡಿದ್ದಾರೆ. ಈ ಹಾಡಿಗೆ ಗಂಗಾವತಿಯ ದಂತ ವೈದ್ಯ ಡಾ. ಶಿವಕುಮಾರ ಮಾಲಿ ಪಾಟೀಲ್ ಸಾಹಿತ್ಯ ಬರೆದಿದ್ದಾರೆ.
ಕ್ಯಾಂಡಲ್ ಲೈಟ್ ಬೆಳಕಿನಲ್ಲಿ ಮೇಜು ಬಡಿಯುತ್ತಾ ನವೀನ್ ಕೃಷ್ಣ 'ಶಾಶ್ವತ ಕಟ್ಟಡ ಕಟ್ಟುತ್ತೇನೆನ್ನುವ ಇಂಜಿನಿಯರ ಕಂಡು ದೇವರು ನಗುತಾನೆ' ಹಾಡನ್ನು ಹಾಡಿದ್ದಾರೆ. ತಮ್ಮ ಫೇಸ್ಬುಕ್ನಲ್ಲಿ ನವೀನ್ ಕೃಷ್ಣ ಈ ಹಾಡನ್ನು ಹಂಚಿಕೊಂಡಿದ್ದು ಸ್ನೇಹಿತರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.