ETV Bharat / sitara

ನಾಗಿಣಿಯಾಗಿ ಬದಲಾದ 'ಪುಟ್ಟಗೌರಿ ಮದುವೆ' ಖ್ಯಾತಿಯ ಹಿಮಾ - ನಾಗಿಣಿಯಾಗಿ ಬದಲಾದ ಹಿಮ

ಬಾಲ ನಟಿಯಾಗಿ ಬಿ.ಸುರೇಶ್ ನಿರ್ದೇಶನದ 'ನಾಕುತಂತಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಪಯಣ ಆರಂಭಿಸಿದ ನಮ್ರತಾ ಗೌಡ, ನಂತರ ಎಕ್ಸ್​​​​​​​​ಕ್ಯೂಸ್ ಮಿ, ಮಿಲನ, ತುತ್ತೂರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು.

ನಮ್ರತಾ ಗೌಡ
author img

By

Published : Nov 13, 2019, 1:30 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಹಿಮಾ ಪಾತ್ರಧಾರಿ ನಿಮಗೆಲ್ಲಾ ನೆನಪಿರಬಹುದು. ಈ ಮುದ್ದು ಮುಖದ ಚೆಲುವೆ ಹಿಮಾ ಅಲಿಯಾಸ್ ನಮ್ರತಾ ಗೌಡ ಇದೀಗ ನಾಗಿಣಿಯಾಗಿ ಬದಲಾಗಿದ್ದಾರೆ.

Namrata gowda acting as Naagini 2, ನಾಗಿಣಿಯಾಗಿ ಬದಲಾದ ಹಿಮ
'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಹಿಮಾ ಪಾತ್ರಧಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ನಾಗಿಣಿ-2 ಧಾರಾವಾಹಿಯಲ್ಲಿ ನಾಗಿಣಿಯಾಗಿ ಅಭಿನಯಿಸುತ್ತಿರುವ ನಮ್ರತಾ, ಬಣ್ಣದ ಲೋಕಕ್ಕೆ ಬಂದಿದ್ದು ಬಾಲ ನಟಿಯಾಗಿ. ಬಿ.ಸುರೇಶ್ ನಿರ್ದೇಶನದ 'ನಾಕುತಂತಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಪಯಣ ಆರಂಭಿಸಿದ ನಮ್ರತಾ, ನಂತರ ಎಕ್ಸ್​ಕ್ಯೂಸ್ ಮಿ, ಮಿಲನ, ತುತ್ತೂರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ವಾತ್ಸಲ್ಯ, ಚೆಲುವಿ, ಸಿಲ್ಲಿ ಲಲ್ಲಿ, ಅಪಾರ್ಟ್​ಮೆಂಟ್ ಧಾರಾವಾಹಿಯಲ್ಲಿ ಅಭಿನಯಿಸಿದ ನಮ್ರತಾ, ನಂತರ ಓದಿನ ಸಲುವಾಗಿ ಕೊಂಚ ಬ್ರೇಕ್ ತೆಗೆದುಕೊಂಡರು. ಮುಂದೆ ಆಕಾಶ ದೀಪ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಇವರಿಗೆ ಹೆಸರು ತಂದು ಕೊಟ್ಟಿದ್ದು 'ಪುಟ್ಟಗೌರಿ ಮದುವೆ' ಧಾರಾವಾಹಿಯ ಹಿಮಾ ಪಾತ್ರ.

'ಆಕಾಶ ದೀಪ' ಧಾರಾವಾಹಿಯಲ್ಲಿ ಮನೆ ಕೆಲಸದ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ ನಮ್ರತಾ, ಮತ್ತೆ ನಾಯಕಿಯಾದದ್ದು 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ. ಪದವೀಧರೆಯಾಗಿರುವ ನಮ್ರತಾ, ಶಾಸ್ತ್ರೀಯ ನೃತ್ಯ ಕಲಾವಿದೆ ಕೂಡಾ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೆಸರಾಂತ ರಿಯಾಲಿಟಿ ಶೋ 'ತಕಧಿಮಿತ'ದಲ್ಲೂ ಭಾಗವಹಿಸಿದ್ದರು. ಜೊತೆಗೆ ಪ್ರತಿ ವಾರವೂ ಅತ್ಯದ್ಭುತ ನೃತ್ಯದ ಮೂಲಕ ಗಮನ ಸೆಳೆದಿದ್ದರು. ಇದೀಗ ರಾಮ್ ಜಿ. ನಿರ್ದೇಶನದ ನಾಗಿಣಿ 2 ಧಾರಾವಾಹಿಯಲ್ಲಿ ಸರ್ಪವಾಗಿ ನಟಿಸುತ್ತಿದ್ದಾರೆ. ಶೀಘ್ರವೇ ಈ ಧಾರಾವಾಹಿ ಪ್ರಸಾರವಾಗಲಿದೆ.

Ram G is directing Naagini 2 serial, ರಾಮ್ ಜಿ ನಾಗಿಣಿ 2 ಧಾರಾವಾಹಿ ನಿರ್ದೇಶಕ
ನಮ್ರತಾ ಬಣ್ಣದ ಲೋಕಕ್ಕೆ ಬಂದಿದ್ದು ಬಾಲ ನಟಿಯಾಗಿ

Intro:Body:ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾ ಪಾತ್ರಧಾರಿಯಾಗಿ ಗಮನ ಸೆಳೆದಿರುವ ಮುದ್ದು ಮುಖದ ಚೆಲುವೆ ನಮ್ರತಾ ಗೌಡ ಇದೀಗ ನಾಗಿಣಿಯಾಗಿ ಬದಲಾಗಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಾಗಿಣಿಯಾಗಿ ಕಾಣಿಸಿಕೊಂಡಿರುವ ನಮ್ರತಾ ಬಣ್ಣದ ಲೋಕಕ್ಕೆ ಬಂದಿದ್ದು ಬಾಲನಟಿಯಾಗಿ! ಬಿ ಸುರೇಶ್ ಅವರ ನಿರ್ದೇಶನದ ನಾಕುತಂತಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಪಯಣ ಆರಂಭಿಸಿದ ನಮ್ರತಾ ಮುಂದೆ ಎಕ್ಸ್ ಕ್ಯೂಸ್ ಮೀ, ಮಿಲನ, ತುತ್ತೂರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ವಾತ್ಸಲ್ಯ, ಚೆಲುವಿ, ಸಿಲ್ಲಿ ಲಲ್ಲಿ, ಅಪಾರ್ಟ್ ಮೆಂಟ್ ಧಾರಾವಾಹಿಯಲ್ಲಿ ಅಭಿನಯಿಸಿದ ನಮ್ರತಾ ತದ ನಂತರ ಓದಿನ ಸಲುವಾಗಿ ಕೊಂಚ ಬ್ರೇಕ್ ತೆಗೆದುಕೊಂಡರು. ಮುಂದೆ ಆಕಾಶದೀಪ ಧಾರಾವಾಹಿಯ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಇವರಿಗೆ ಹೆಸರು ತಂದು ಕೊಟ್ಟಿದ್ದು ಹಿಮಾ ಪಾತ್ರ.

ಆಕಾಶ ದೀಪ ಧಾರಾವಾಹಿಯಲ್ಲಿ ಮನೆ ಕೆಲಸದ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ ನಮ್ರತಾ ಮತ್ತೆ ನಾಯಕಿಯಾದದ್ದು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ. ಪದವೀಧರೆಯಾಗಿರುವ ನಮ್ರತಾ ಕ್ಲಾಸಿಕಲ್ ಡ್ಯಾನ್ಸರ್ ಹೌದು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೆಸರಾಂತ ರಿಯಾಲಿಟಿ ಶೋ ತಕಧಿಮಿತ ಶೋ ವಿನಲ್ಲಿ ಭಾಗವಹಿಸಿದ್ದರು. ಜೊತೆಗೆ ಪ್ರತಿ ವಾರವೂ ಅತ್ಯದ್ಭುರ ನೃತ್ಯದ ಮೂಲಕ ಗಮನ ಸೆಳೆದಿದ್ದರು.

ಇದೀಗ ರಾಮ್ ಜೀ ನಿರ್ದೇಶನದ ನಾಗಿಣಿ 2 ಧಾರಾವಾಹಿಯಲ್ಲಿ ಹೆಣ್ಣು ಸರ್ಪವಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.