ಈಗ ಕೊರೊನಾ ಸೋಂಕಿನ ಎಚ್ಚರಿಕೆ ಕುರಿತು ಮತ್ತೊಂದು ಹಾಡು ಜನಪ್ರಿಯ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರಿಂದ ಹೊರಬಂದಿದೆ. ಕೆಲವು ದಿನಗಳ ಹಿಂದೆ ಸಂಗೀತ ನಿರ್ದೇಶಕ ಗುರು ಕಿರಣ್ ‘ಕಿಲ್ಲ್ ಯು ಕೊರೊನಾ ಎಂಬ ಹಾಡು ರಚಿಸಿದ್ದರು.
ಅಭಿಮಾನ್ ನಿರ್ಮಾಣ ಮಾಡಿರುವ ಹಾಡು 2 ನಿಮಿಷ 51 ಸೆಕೆಂಡ್ ಇದ್ದು, ಅಭಿಮಾನ್ ರಾಯ್ ಗೆಲಾಕ್ಸಿ ಇಂದ ಹಾಸ್ಯಮಯವಾಗಿ ಮೂಡಿ ಬಂದಿದೆ. ಈ ಹಾಡಿಗೆ ಕಲಾವಿದರು ಇರುವ ಸ್ಥಳದಲ್ಲೇ ಶೂಟ್ ಮಾಡಲಾಗಿದ್ದು, ನಂತ್ರ ಅದನ್ನು ಜೋಡಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಹಾಡನ್ನು ಅಭಿಮಾನ್ ರಾಯ್ ನೀಡಿದ್ದಾರೆ.
ಬರಬೇಡ್ರಣ್ಣ ಬರಬೇಡಿ ಮನೆಯಿಂದಾಚೆ ಎಂದು ಶುರು ಆಗುವ ಈ ಹಾಡಲ್ಲಿ ಮೊದಲು ಡಾ. ವಿ. ನಾಗೇಂದ್ರ ಪ್ರಸಾದ್ ಕಾಣಿಸಿಕೊಳ್ಳುತ್ತಾರೆ. ಬಳಿಕ ಕೆಲವು ನಟರು ಹಾಗೂ ತಂತ್ರಜ್ಞರುಗಳಾದ ಸುರೇಶ್ ಬಾಬು, ಪ್ರದೀಪ್ ವರ್ಮಾ, ನಿರ್ದೇಶಕ ಹಾಗೂ ಬರಹಗಾರ ರಿಷಿ ಹಾಗೂ ಇತರರು ಬಂದು ಹೋಗುತ್ತಾರೆ.
ಕೆಲವು ಸಿನಿಮಾ ಡಾನ್ಸ್ ಕ್ಲಿಪ್ ಸಹ ಬಳಸಲಾಗಿದೆ. ವಿಕ್ರಾಂತ್ ಹಾಗೂ ಅಶೋಕ್ ನಿರ್ದೇಶನ ಮಾಡಿರುವ ಈ ಗೀತೆಯನ್ನು ಮುರಳಿ ಸಿದ್ ರಾಮ್ ರಚಿಸಿದ್ದಾರೆ.