ಬಾರ್ಸಿಲೋನಾ: ವಿಶ್ವಪ್ರಸಿದ್ಧ ಗಾಯಕಿ ಮಿಲೆ ಸೈರಸ್ ಜತೆ ವ್ಯಕ್ತಿಯೋರ್ವ ಅಸಭ್ಯ ವರ್ತನೆ ತೋರಿದ್ದಾನೆ. ಆಕೆಗೆ ಬಲವಂತವಾಗಿ ಮುತ್ತಿಕ್ಕಲು ಯತ್ನಿಸಿದ್ದಾನೆ.
ಇಲ್ಲಿಯ ಪ್ರಿಮಾವೆರಾ ಸೌಂಡ್ ಫೆಸ್ಟಿವಲ್‌ಲ್ಲಿ ಈ ಪ್ರಸಂಗ ನಡೆದಿದ್ದು, ಮಿಲೆ ತನ್ನ ಪತಿ ಲಿಯಾಮ್ ಹೆಮ್ಸ್‌ವರ್ಥ್ ಜೊತೆ ಕಾರಿನತ್ತ ಸಾಗುತ್ತಿದ್ದರು. ಕ್ಯಾಮರಾ ಮನ್ಗಳು, ಅಭಿಮಾನಿಗಳ ನೂಕು ನುಗ್ಗಲಿನ ದಟ್ಟಣೆ ನಡುವೆ ಮಿಲೆ ಹೋಗುತ್ತಿದ್ದರು. ಈ ವೇಳೆ ಅನಾಮಿಕನೋರ್ವ ಇವರ ತಲೆಗೂದಲನ್ನು ಹಿಡಿದು, ತಮ್ಮತ್ತ ಎಳೆದುಕೊಂಡು ಚುಂಬಿಸಲು ಮುಂದಾಗಿದ್ದಾನೆ. ಆದರೆ, ಅಷ್ಟರಲ್ಲೇ ಅವರು ಆತನಿಂದ ಬಿಡಿಸಿಕೊಂಡು ಮುಂದೆ ಸಾಗಿದ್ದಾರೆ.
-
Llego a estar ahí, y al “fan” que se ha tirado a por miley no se le olvida el guantazo que se lleva pic.twitter.com/30PUR4zXR0
— Alvaro (@AlvaroSaucedo13) June 2, 2019 " class="align-text-top noRightClick twitterSection" data="
">Llego a estar ahí, y al “fan” que se ha tirado a por miley no se le olvida el guantazo que se lleva pic.twitter.com/30PUR4zXR0
— Alvaro (@AlvaroSaucedo13) June 2, 2019Llego a estar ahí, y al “fan” que se ha tirado a por miley no se le olvida el guantazo que se lleva pic.twitter.com/30PUR4zXR0
— Alvaro (@AlvaroSaucedo13) June 2, 2019
ಈ ಘಟನೆಯ ವಿಡಿಯೋವನ್ನು ಫಾಕ್ಸ್ ನ್ಯೂಸ್ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪ್ರಪಂಚಾದ್ಯಂತ ಗೌರವ ಸಂಪಾದಿಸಿರುವ ಮಿಲೆಗೆ ಈ ಘಟನೆ ಮುಜುಗರನ್ನುಂಟು ಮಾಡಿದೆ ಎಂಬುದು ಅಭಿಮಾನಿಗಳ ಮಾತಾಗಿದೆ. ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.