'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ಮೋಡಿ ಮಾಡಿದ್ದ ಮೇಘಶ್ರೀ ಇದೀಗ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ.
ಹೌದು, ಸೂಪರ್ ನ್ಯಾಚುರಲ್ ಧಾರಾವಾಹಿ ನಂದಿನಿ -2 ಮೂಲಕ ತೆಲುಗು ಕಿರುತೆರೆಯಲ್ಲಿ ಮೇಘಶ್ರೀ ಮಿಂಚಲಿದ್ದಾರೆ. ರಾಜ್ ಕಪೂರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಜ್ಯೋತಿ ಪಾತ್ರಕ್ಕೆ ಮೇಘಶ್ರೀ ಜೀವ ತುಂಬಲಿದ್ದು ಸದ್ಯದಲ್ಲಿಯೇ ಈ ಧಾರಾವಾಹಿ ಆರಂಭವಾಗಲಿದೆ.
ಮೊದಲ ಬಾರಿಗೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿರುವ ಮೇಘಶ್ರಿ, ಮೇಕಿಂಗ್, ಕಥೆ ಅಥವಾ ಪ್ರೊಡಕ್ಷನ್ ವಿಷಯಗಳಲ್ಲಿ ಕನ್ನಡ-ತೆಲುಗು ಧಾರಾವಾಹಿಗಳು ಸರಿಸಮವಾಗಿವೆ. ಕಂಟೆಂಟ್ ವಿಷಯದಲ್ಲಿ ಸಹ ವ್ಯತ್ಯಾಸವಿಲ್ಲ ಎಂದಿದ್ದಾರೆ.
ತನ್ನ ಪಾತ್ರದ ಕುರಿತು ಮಾತನಾಡಿರುವ ಮೇಘಶ್ರೀ, ನಾನು 'ನಂದಿನಿ -2' ಧಾರಾವಾಹಿಯಲ್ಲಿ ಜ್ಯೋತಿ ಎಂಬ ಅನಾಥೆಯ ಪಾತ್ರ ಮಾಡುತ್ತಿರುವೆ. ಅಪಘಾತದಲ್ಲಿ ತನ್ನ ಪೋಷಕರನ್ನು ಕಳೆದುಕೊಂಡು, ಶ್ರೀಮಂತ ಕುಟುಂಬದಲ್ಲಿ ಜ್ಯೋತಿ ಕೆಲಸ ಮಾಡುತ್ತಿರುತ್ತಾಳೆ.ಈ ಧಾರಾವಾಹಿಯಲ್ಲಿ ಅನೇಕ ತಿರುವುಗಳಿವೆ. ಎಲ್ಲರೂ ವೀಕ್ಷಿಸಿ ಎಂದಿದ್ದಾರೆ.