ETV Bharat / sitara

ಕಿರುತೆರೆ ವೀಕ್ಷಕರನ್ನು ರಂಜಿಸಲು 'ಮತ್ತೆ ವಸಂತ'ನ ಆಗಮನ - ಮಾರ್ಚ್ 2 ರಿಂದ ಮತ್ತೆ ವಸಂತ ಧಾರಾವಾಹಿ ಆರಂಭ

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮತ್ತೆ ವಸಂತ' ಎಂಬ ಹೊಸ ಧಾರಾವಾಹಿ ಮಾರ್ಚ್ 2 ರಿಂದ ಪ್ರಸಾರವಾಗಲಿದೆ. ಅಣ್ಣಾಜಿ ಎಂಬ ಏರಿಯಾ ಡಾನ್ ಆಶ್ರಯದಲ್ಲಿ ಬೆಳೆಯುವ ವಸಂತ ಹಾಗೂ ತಂದೆ ತಾಯಿಯ ಪ್ರೀತಿಯಲ್ಲಿ ಬೆಳೆಯುವ ಅಪರ್ಣಾಳ ನಡುವೆ ನಡೆಯುವ ಕಥೆಯೇ 'ಮತ್ತೆ ವಸಂತ '.

Matte Vasanta
ಮತ್ತೆ ವಸಂತ
author img

By

Published : Feb 29, 2020, 2:49 PM IST

ಕಿರುತೆರೆ ವೀಕ್ಷಕರಿಗೆ ಮನರಂಜನೆಗೆ ಯಾವುದೇ ಕೊರತೆ ಇಲ್ಲ. ರಿಯಾಲಿಟಿ ಶೋ, ಮ್ಯೂಸಿಕ್, ಡ್ಯಾನ್ಸ್ ಕಾರ್ಯಕ್ರಮ, ಇದರೊಂದಿಗೆ ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿಗಳು ವೀಕ್ಷಕರನ್ನು ಪ್ರತಿದಿನ ರಂಜಿಸುತ್ತಿದೆ. ಒಂದು ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿ ಆರಂಭವಾಗುತ್ತದೆ. ಇದೀಗ ಮತ್ತೊಂದು ಹೊಸ ಧಾರಾವಾಹಿ ವೀಕ್ಷಕರನ್ನು ರಂಜಿಸಲು ಬರುತ್ತಿದೆ.

  • " class="align-text-top noRightClick twitterSection" data="">

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮತ್ತೆ ವಸಂತ' ಎಂಬ ಹೊಸ ಧಾರಾವಾಹಿ ಮಾರ್ಚ್ 2 ರಿಂದ ಪ್ರಸಾರವಾಗಲಿದೆ. ಅಣ್ಣಾಜಿ ಎಂಬ ಏರಿಯಾ ಡಾನ್ ಆಶ್ರಯದಲ್ಲಿ ಬೆಳೆಯುವ ವಸಂತ ಹಾಗೂ ತಂದೆ ತಾಯಿಯ ಪ್ರೀತಿಯಲ್ಲಿ ಬೆಳೆಯುವ ಅಪರ್ಣಾ ನಡುವೆ ನಡೆಯುವ ಕಥೆಯೇ 'ಮತ್ತೆ ವಸಂತ. ಧಾರಾವಾಹಿಯ ನಾಯಕ ವಸಂತ, ಕಾರ್ ರಿಪೇರಿ ಮಾಡುವ ಗ್ಯಾರೇಜ್ ನಡೆಸುತ್ತಾ, ಸಣ್ಣ ಪುಟ್ಟ ಗೂಂಡಾಗಿರಿ ಕೆಲಸ ಮಾಡುತ್ತಿರುತ್ತಾನೆ. ನಾಯಕಿ ಅಪರ್ಣ ಫ್ಯಾಷನ್ ಡಿಸೈನರ್ ಆಗಬೇಕೆಂದು ಕನಸು ಕಂಡಿರುವ ಸಂಪ್ರದಾಯಸ್ಥ ಮನೆತನದ ಮಗಳು. ವಸಂತ, ಅಣ್ಣಾಜಿ ಮೇಲಿನ ಗೌರವಕ್ಕೆ ಗೂಂಡಾಗಿರಿಯಲ್ಲಿ ತೊಡಗಿರುತ್ತಾನೆ. ಅಪರ್ಣಾಳಿಗೆ ತಮ್ಮನ ಭವಿಷ್ಯ ಮತ್ತು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದೇ ಧ್ಯೇಯವಾಗಿರುತ್ತದೆ. ವಸಂತ ಮುಂಗೋಪಿಯಾಗಿದ್ದರೆ, ಅಪರ್ಣ ಬಹಳ ಸಂಯಮಿ. ವಸಂತ ಬೇಜವಾಬ್ದಾರಿ ಸ್ವಭಾವ , ಇವಳು ಮಹತ್ವಾಕಾಂಕ್ಷಿ. ಅವನಿಗೆ ಕರುಣೆಯೇ ಇಲ್ಲ, ಆದರೆ ಈಕೆ ಮಮತಾಮಯಿ.ಇಬ್ಬರದ್ದು ವಿರುದ್ಧ ವ್ಯಕ್ತಿತ್ವ. ವೈರಿಗಳಂತೆ ಭೇಟಿಯಾಗುತ್ತಾರೆ, ವೈರಿಗಳಂತಿದ್ದವರು ಸ್ನೇಹಿತರಾಗುತ್ತಾರೆ. ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ. ಇದು ಕಥೆಯಲ್ಲಿ ದೊಡ್ಡ ತಿರುವು ನೀಡುತ್ತದೆ. ಜೀವನದುದ್ದಕ್ಕೂ ಸ್ನೇಹಿತರಾಗಿರುತ್ತೇವೆ ಅಂದುಕೊಂಡವರು ಮದುವೆಯಾಗುವ ಸಂದರ್ಭ ಒದಗಿಬರುತ್ತದೆ. ಇಬ್ಬರಿಗೆ ಇಷ್ಟವಿಲ್ಲದಿದ್ದರೂ ಮದುವೆಗೆ ಒಪ್ಪುತ್ತಾರಾ ಎನ್ನುವುದೇ ಪ್ರಶ್ನೆ.

Matte Vasanta
'ಮತ್ತೆ ವಸಂತ

ಕಿರುತೆರೆಯಲ್ಲದೆ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ವಿವೇಕ್ ಸಿಂಹ ವಸಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಸ್ಟಾರ್ ಸುವರ್ಣ ವಾಹಿನಿಯ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ಅಕ್ಷತಾ ದೇಶಪಾಂಡೆ ಅಪರ್ಣ ಪಾತ್ರದಲ್ಲಿದ್ದಾರೆ. ಉಳಿದಂತೆ ಕೀರ್ತಿ ಬಾನು, ಸ್ಪಂದನ, ಜಯದೇವ್, ಜಗದೀಶ್ ಮಲ್ನಾಡ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಮತ್ತೆ ವಸಂತ' ಧಾರಾವಾಹಿಯ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಎಲ್ಲವೂ ವಿಭಿನ್ನವಾಗಿರಲಿದೆ.ಧಾರಾವಾಹಿಯ ಸಂಪೂರ್ಣ ತಂಡ ಮೈಸೂರಿನಲ್ಲಿದ್ದು , ಮೈಸೂರು ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣವಾಗುತ್ತಿದೆ. ಗ್ರೀನ್ ಆ್ಯಪಲ್ ಸ್ಟುಡಿಯೋಸ್ , 'ಮತ್ತೆ ವಸಂತ' ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ. ಈ ಹಿಂದೆ ಪಲ್ಲವಿ - ಅನುಪಲ್ಲವಿ, ಮಿಲನ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಕಿರುತೆರೆಯ ಅನುಭವಿ ನಿರ್ದೇಶಕ ಮಧುಸೂದನ್, 'ಮತ್ತೆ ವಸಂತ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.'ಮತ್ತೆ ವಸಂತ' ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.