ದಿನದಿಂದ ದಿನಕ್ಕೆ ಬದಲಾಗುತ್ತಿರುವ ಟ್ರೆಂಡ್ಗಳ ಪೈಕಿ ಫ್ಯಾಷನ್ ಕೂಡಾ ಒಂದು. ಕಾಲಕ್ಕೆ ತಕ್ಕ ಹಾಗೆ ನಾವು ಕೂಡಾ ಬದಲಾದರೆ ಮಾತ್ರ ಬದಲಾಗಿರುವ ಫ್ಯಾಷನನ್ನು ಸ್ವೀಕರಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಕೂಡಾ ಒಂದು ಫ್ಯಾಷನ್ ಆಗಿದೆ ಎಂದರೆ ತಪ್ಪಾಗಲಾರದು.
ಫೋಟೋ ಶೂಟ್ ಎಂಬ ಹೊಸದಾದ ಟ್ರೆಂಡನ್ನು ಒಮ್ಮತದಿಂದ ಸ್ವೀಕರಿಸಿರುವ ನಾವು ಅದಕ್ಕೆ ಬೇಕಾಗಿರುವ ತಯಾರಿಯನ್ನು ಕೂಡಾ ಮಾಡುತ್ತೇವೆ. ಎಂಗೇಜ್ಮೆಂಟ್, ಪ್ರೀ ವೆಡ್ಡಿಂಗ್ ಶೂಟ್, ಬೇಬಿ ಶೊವರ್ ಫೋಟೋ ಶೂಟ್, ಬೇಬಿ ಫೋಟೋ ಶೂಟ್ ಹೀಗೆ ಒಂದೊಂದು ರೀತಿಯ ಫೋಟೋ ಶೂಟ್ಗಳು ಈಗ ಟ್ರೆಂಡ್ ಆಗಿಬಿಟ್ಟಿದೆ. ಇನ್ನು ಸೆಲಬ್ರಿಟಿಗಳು ಎಂದರೆ ಕೇಳಬೇಕೆ? ಅವರು ಕೂಡಾ ಆಗಾಗ್ಗೆ ಅದ್ಧೂರಿ ಫೋಟೋ ಶೂಟ್ ಮಾಡುತ್ತಿರುತ್ತಾರೆ. ಇದೀಗ ಕಿರುತೆರೆಯ, ಮುದ್ದು ಮುಖದ ಚೆಲುವೆ ಮಾನ್ಸಿ ಜೋಷಿ, ವಿಭಿನ್ನ ಶೈಲಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ಸೀರೆಯನ್ನು ಧರಿಸಿ ಮಾನ್ಸಿ ಜೋಷಿ ಫೋಟೋ ಶೂಟ್ಗಾಗಿ ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡಿದ್ದಾರೆ.
ಕಪ್ಪು ಕೆಂಪು ಮಿಶ್ರಿತ, ಸೀರೆ ಮಾನ್ಸಿ ಅವರ ಚೆಲುವನ್ನು ದುಪ್ಪಟ್ಟಾಗಿಸಿದೆ. ಜೊತೆಗೆ ಸೀರೆಗೆ ಒಪ್ಪುವಂತ ಆಭರಣಗಳನ್ನು ಧರಿಸಿರುವ ಮಾನ್ಸಿ ಜೋಷಿ, ಜೀ ಕನ್ನಡ ವಾಹಿನಿಯ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಂದಹಾಗೆ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿರುವ ಅನುಷ್ಕಾ, ಹೆಚ್ಚಾಗಿ ಮಾಡರ್ನ್ ಡ್ರೆಸ್ನಲ್ಲೇ ಕಾಣಿಸಿಕೊಳ್ಳುತ್ತಾರೆ. ಇದೀಗ ಸೀರೆಯಲ್ಲಿ ಮಿಂಚುತ್ತಿರುವ ಮಾನ್ಸಿ ಜೋಷಿ ಫೋಟೋ ಕಂಡು ಹುಡುಗರು ಫಿದಾ ಆಗುವುದಂತೂ ನಿಜ.