ETV Bharat / sitara

ವೀಕೆಂಡ್​​ನಲ್ಲಿ ನಿಮ್ಮನ್ನು ನಗಿಸಲು ಬರ್ತಿದಾರೆ ಸ್ಯಾಂಡಲ್​​ವುಡ್ ಕಾಮಿಡಿ ಸರದಾರರು - Shruti hariharan starring Mane maratakkide

ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಾಟಕ್ಕಿದೆ' ಸಿನಿಮಾ ಜೂನ್ 27ರಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಕಾರುಣ್ಯಾ ರಾಮ್ ಮತ್ತು ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿದ್ದಾರೆ.

Mane maratakkide movie in Small screen
'ಮನೆ ಮಾರಾಟಕ್ಕಿದೆ'
author img

By

Published : Jun 23, 2020, 4:45 PM IST

ನಗೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಹಾಸ್ಯ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಬಹಳ ಇಷ್ಟ. ಎಷ್ಟೇ ದು:ಖ ಇದ್ದರೂ ಎಲ್ಲವನ್ನೂ ಎಂಜಾಯ್ ಮಾಡುತ್ತಾರೆ. ಇದೀಗ ಸ್ಯಾಂಡಲ್​ವುಡ್​ ಖ್ಯಾತ ಕಾಮಿಡಿ ನಟರೆಲ್ಲರೂ ನಿಮ್ಮನ್ನು ರಂಜಿಸಲು ಕಿರುತೆರೆಗೆ ಬರುತ್ತಿದ್ದಾರೆ.

ಸಾಧು ಕೋಕಿಲ, ಚಿಕ್ಕಣ್ಣ,ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ನಟಿಸಿರುವ 'ಮನೆ ಮಾರಾಟಕ್ಕಿದೆ' ಸಿನಿಮಾ ಇದೇ ಶನಿವಾರ ಸಂಜೆ 6.30ಕ್ಕೆ ನಿಮ್ಮ ಮೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ವಾರವೂ ಹೊಸ ಮನರಂಜನೆ ಮೂಲಕ ರಂಜಿಸುತ್ತಿರುವ ಉದಯ ವಾಹಿನಿ ಇದೀಗ ನಿಮ್ಮನ್ನು ನಕ್ಕು ನಗಿಸಲು ಹೊರಟಿದೆ. ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಾಟಕ್ಕಿದೆ' ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ 'ಆನಂದೋ ಬ್ರಹ್ಮ' ಎಂಬ ಸಿನಿಮಾದ ರೀಮೇಕ್ ಇದಾಗಿದ್ದು ಈ ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಕಾರುಣ್ಯಾ ರಾಮ್ ಮತ್ತು ಶ್ರುತಿ ಹರಿಹರನ್ ಅಭಿನಯಿಸಿದ್ದಾರೆ.

Mane maratakkide movie in Small screen
'ಮನೆ ಮಾರಾಟಕ್ಕಿದೆ'

ವಿದೇಶದಲ್ಲಿ ನೆಲೆಸಿರುವ ಎನ್​ಆರ್​ಐ, ತನ್ನ ತಂದೆ-ತಾಯಿ ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಆದರೆ ಆ ಮನೆ ಖರೀದಿ ಮಾಡಲು ಬರುವವರೆಲ್ಲಾ ಮನೆಯಲ್ಲಿ ದೆವ್ವದ ಕಾಟ ಇದೆ ಎಂದು ಓಡಿ ಹೋಗ್ತಾರೆ. ಮಾತ್ರವಲ್ಲ ಆ ಭವ್ಯ ಬಂಗಲೆಯನ್ನು ಕೊಂಡುಕೊಳ್ಳಲು ಕೂಡಾ ತಯಾರಿರುವುದಿಲ್ಲ. ಆ ವೇಳೆ ಈ ಮನೆಯನ್ನು ಮಾರಲು ನಾವು ಸಹಾಯ ಮಾಡುತ್ತೇವೆ ಎಂದು ರಘುಪತಿ ರಾಘವ ರಾಜ ರಾಮ ಎಂಬ ಹೆಸರಿನ ನಾಲ್ಕು ಮಂದಿ ಬರುತ್ತಾರೆ.

ಇವರೆಲ್ಲಾ ಸೇರಿ ಮನೆಯಲ್ಲಿರುವ ದೆವ್ವ ಓಡಿಸುತ್ತಾರಾ? ಆ ಮನೆ ಮಾರಾಟವಾಗುತ್ತದೆಯಾ? ಎಂಬುದನ್ನೆಲ್ಲಾ ನೀವು ಈ ವಾರ ನೋಡಿ ತಿಳಿಯಬೇಕಷ್ಟೇ. ಒಟ್ಟಿನಲ್ಲಿ ಸ್ಯಾಂಡಲ್​​ವುಡ್​​​​​​ನ ನಾಲ್ವರು ಕಾಮಿಡಿ ಸರದಾರರು ಒಟ್ಟಿಗೆ ಸೇರಿರುವುದರಿಂದ ಮನರಂಜನೆಯ ಮಹಾಪೂರ ಸಿಗುವುದಂತೂ ಗ್ಯಾರಂಟಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.