ಚಿಕ್ಕಮಗಳೂರಿನ ಚೆಂದುಳ್ಳಿ ಚೆಲುವೆ ಗಾನವಿ ಇಂದು ವೀಕ್ಷಕರ ಪ್ರೀತಿಯ ಜಾನಕಿ ಆಗಿದ್ದಾರೆ. ಹೆಚ್ಚಿನವರಿಗೆ ಅವರ ನಿಜ ನಾಮಧೇಯವೇ ತಿಳಿದಿಲ್ಲ. ಅಷ್ಟರ ಮಟ್ಟಿಗೆ ಅವರು ಜಾನಕಿಯಾಗಿ ಪರಿಚಿತ. ಪರಿಸರ ಪ್ರೇಮಿಯಾಗಿರುವ ಗಾನವಿ ಕೆಲವು ದಿನಗಳಿಂದ ಮಹಾನಗರಿ ಬೆಂಗಳೂರಿನಲ್ಲೇ ಶೂಟಿಂಗ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಇದರಿಂದ ಅವರು ಪ್ರಕೃತಿ ಸೌಂದರ್ಯವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರಂತೆ. ತಮ್ಮ ಬ್ಯುಸಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಸಾವನದುರ್ಗದ ಸುಂದರ ತಾಣಗಳನ್ನು ಸುತ್ತಿ ಬಂದಿದ್ದಾರೆ ಗಾನವಿ.
- " class="align-text-top noRightClick twitterSection" data="
">
ಸ್ನೇಹಿತರೊಂದಿಗೆ ಸಾವನದುರ್ಗಕ್ಕೆ ಚಾರಣ ಹೋಗಿರುವ ಗಾನವಿ ಅಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 'ಬೆಟ್ಟ, ತೊರೆ ಮತ್ತು ನದಿಯ ತೊಟ್ಟಿಲು ಎಂದೇ ಜನಪ್ರಿಯವಾಗಿರುವ ಚಿಕ್ಕಮಗಳೂರಿನಲ್ಲಿ ಹುಟ್ಟಿದ್ದೇ ನನ್ನ ಪುಣ್ಯ. ನಿಸರ್ಗದ ಮಧ್ಯೆ ನಾನು ಕಳೆದಿರುವಂತಹ ಕ್ಷಣಗಳನ್ನು ವರ್ಣಿಸಲು ಸಾಧ್ಯವಿಲ್ಲ. ನಾನು ನಟಿಯಾಗಿ ನಿಮ್ಮ ಮುಂದೆ ಬರುವ ಮೊದಲು ಡ್ಯಾನ್ಸ್ ಹೇಳಿಕೊಡುತ್ತಿದ್ದೆ. ಪ್ರಕೃತಿಯ ಒಡನಾಟದೊಂದಿಗೆ ನಾನು ಡ್ಯಾನ್ಸ್ ಕಲಿತೆ ಎಂದರೆ ತಪ್ಪಾಗಲಾರದು. ನಿಸರ್ಗದೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಾತ್ರವಲ್ಲ ಪ್ರಕೃತಿ ಸಂಪರ್ಕದಿಂದ ಪಾಸಿಟಿವ್ ಶಕ್ತಿ ಕೂಡಾ ದೊರೆಯುತ್ತದೆ' ಎನ್ನುತ್ತಾರೆ ಗಾನವಿ.
- " class="align-text-top noRightClick twitterSection" data="
">
ಪ್ರಕೃತಿ ಸೌಂದರ್ಯ ನೋಡಿ ಸಂತೋಷಗೊಂಡಿರುವ ಗಾನವಿ ಅಲ್ಲಿ ಜನರು ಹಾಕಿರುವ ಕಸದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ನೇಹಿತರ ಜೊತೆ ಸೇರಿ ಕಸ ತೆಗೆದಿದ್ದಾರೆ. 'ಚಾರಣಕ್ಕೆ ಬರುವ ಜನರು ತಾವು ತಿಂದ ತಿಂಡಿಯ ಪ್ಯಾಕ್, ಕುಡಿದ ಜ್ಯೂಸ್ ಬಾಟಲ್ ಎಲ್ಲವನ್ನೂ ಎಲ್ಲೆಂದರಲ್ಲಿ ಎಸೆಯುತ್ತಾರೆ. ಅದರ ಬದಲು ಎಲ್ಲವನ್ನೂ ತಮ್ಮ ಬ್ಯಾಗ್ನಲ್ಲಿ ಹಾಕಿದರೆ ನಿಸರ್ಗ ಹಾಳಾಗುವುದು ತಪ್ಪುತ್ತದೆ. ಸಾವನದುರ್ಗವನ್ನು ಸ್ವಚ್ಛಗೊಳಿಸಲು ನಾವು ನಾಲ್ಕು ಗೋಣಿ ಚೀಲಗಳನ್ನು ಉಪಯೋಗಿಸಿದ್ದೇವೆ. ಮತ್ತೆ ನಾವು ಸಂಗ್ರಹಿಸಿದ ಕಸವನ್ನು ಕಸ ಹಾಕಲು ಮೀಸಲಿಟ್ಟ ಜಾಗಕ್ಕೆ ಹಾಕಿದ್ದೇವೆ' ಎಂದಿದ್ದಾರೆ. ಮಗಳು ಜಾನಕಿಯಾಗಿ ವೀಕ್ಷಕರ ಮನ ಸೆಳೆದಿರುವ ಗಾನವಿ ಇದೀಗ ಪರಿಸರ ಪ್ರೇಮಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.