ETV Bharat / sitara

ಅಭಿಮಾನಿಗೆ ಮಾತು ಕೊಟ್ಟ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ - KGF director Prashanth Neel give promise to fan

ಕೆಜಿಎಫ್ 2 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಯೊಬ್ಬರಿಗೆ 'ಕೆಜಿಎಫ್​ ಚಾಪ್ಟರ್​ 2’ ಬಿಡುಗಡೆಯಾದ ಮೊದಲ ದಿನ, ಮೊದಲ ಶೋ ನೋಡಲು ಟಿಕೆಟ್​ ಕೊಡುವುದಾಗಿ ಮಾತು ಕೊಟ್ಟಿದ್ದಾರೆ.

Prashanth Neel
ಪ್ರಶಾಂತ್ ನೀಲ್
author img

By

Published : Jul 24, 2021, 1:30 PM IST

ಇಡೀ ಭಾರತೀಯ ಚಿತ್ರರಂಗದಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿರೋ 'ಕೆಜಿಎಫ್​ ಚಾಪ್ಟರ್​ 2’ ಬಿಡುಗಡೆ ದಿನಾಂಕ ಘೋಷಣೆ ಆಗಬೇಕಿದೆ. ಈ ಚಿತ್ರವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.

ಎಲ್ಲವೂ ಪ್ಲಾನ್​ ಪ್ರಕಾರವೇ ನಡೆದಿದ್ದರೆ ಯಶ್​ ನಟನೆಯ ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ ಈಗಾಗಲೇ ಅದ್ಧೂರಿಯಾಗಿ ಬಿಡುಗಡೆಯಾಗಿ ಧೂಳೆಬ್ಬಿಸಿರಬೇಕಿತ್ತು. ಆದರೆ, ಕೊರೊನಾ ವೈರಸ್​​ ಎರಡನೇ ಅಲೆಯ ಹಾವಳಿಯಿಂದಾಗಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಸಿನಿಮಾ ಬಿಡುಗಡೆ ಯಾವಾಗ ಅನ್ನೋದು ಅಭಿಮಾನಿಗಳಲ್ಲಿ ಯಕ್ಷ ಪ್ರಶ್ನೆಯಾಗಿದೆ. ಹಾಗಂತ ಅಭಿಮಾನಿಗಳ ನಿರೀಕ್ಷೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಇದಕ್ಕೆ ಹೊಸ ಉದಾಹರಣೆಯೊಂದು ಇಲ್ಲಿದೆ.

ಸದ್ಯಕ್ಕೆ ಟೀಸರ್​ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿರೋ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ನೋಡಲು ಮುಂಚೆಯೇ ಅಭಿಮಾನಿಗಳು ಸಾವಿರರೂ ರೂ. ಕೊಟ್ಟು ಟಿಕೆಟ್ ಖರೀದಿಸಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಅಭಿಮಾನಿಗೆ ತುಂಬ ಸುಲಭವಾಗಿ ‘ಕೆಜಿಎಫ್​ 2’ ಚಿತ್ರದ ಮೊದಲ ದಿನ ಮೊದಲ ಶೋ ನೋಡಲು ಟಿಕೆಟ್​ ಸಿಕ್ಕಿದೆ. ಅದು ಕೂಡ ಸ್ವತಃ ನಿರ್ದೇಶಕ ಪ್ರಶಾಂತ್​ ನೀಲ್​ ಕಡೆಯಿಂದ ಎಂಬುದೇ ಅಚ್ಚರಿ ವಿಚಾರ.

ವೈವಸ್ವತ್ ತಾಂಡುಲ ಎಂಬ 12ನೇ ತರಗತಿ ವಿದ್ಯಾರ್ಥಿಯೊಬ್ಬ ಕೆಜಿಎಫ್ 2 ನಿರ್ಮಾಣ ಸಂಸ್ಥೆ ಹೊಂಬಾಳೆಗೆ ಪತ್ರವೊಂದನ್ನು ಬರೆದಿದ್ದನು. ಹೊಂಬಾಳೆ ಕೆಜಿಎಫ್ 2 ಎಂದು ಅಕ್ಕಿ ಕಾಳಿನ ಮೇಲೆ ಸುಂದರವಾಗಿ ಬರೆದು ಅದನ್ನು ಉಡುಗೊರೆಯಾಗಿ ನೀಡಿದ್ದನು. ಪತ್ರದಲ್ಲಿ ಹೊಂಬಾಳೆ ಫಿಲಮ್ಸ್‌ನಿಂದ ಹೊರಬರುತ್ತಿರುವ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿದ್ಯಾರ್ಥಿ ವೈವಸ್ವತ್ ತಾಂಡುಲ, ನಿಮ್ಮ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ, ಕೆಜಿಎಫ್ 2 ಸಿನಿಮಾವು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿ ಅಂತಾ ಹಾರೈಸಿದ್ದನು.

ವೈವಸ್ವತ್‌ನ ಉಡುಗೊರೆಯಿಂದ ಖುಷಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ 2 ಸಿನಿಮಾದ ಮೊದಲ ದಿನದ ಮೊದಲ ಶೋಗೆ ಟಿಕೆಟ್ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಭರವಸೆ ನೀಡಿದ್ದಾರೆ. ಹೊಂಬಾಳೆ ಫಿಲಮ್ಸ್ ಸಹ ವೈವಸ್ವತ್ ಕಳಿಸಿರುವ ಉಡುಗೊರೆಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಪ್ರಶಾಂತ್ ನೀಲ್ ಟ್ವೀಟ್​
ಪ್ರಶಾಂತ್ ನೀಲ್ ಟ್ವೀಟ್​

ಇನ್ನು ವೈವಸ್ವತ್ ತಾಂಡುಲಾ ಅಪರೂಪದ ಕಲಾವಿದನಾಗಿದ್ದು, ಅಕ್ಕಿಕಾಳಿನ ಮೇಲೆ ಬರೆದ ಆತನ ಬರವಣಿಗೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.