ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿ ಯಶಸ್ವಿ 700 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ 'ಕಮಲಿ' ಧಾರಾವಾಹಿ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ. ಧಾರಾವಾಹಿ 700 ಸಂಚಿಕೆಗಳನ್ನು ಪೂರೈಸಿರುವುದಕ್ಕೆ ಧಾರಾವಾಹಿ ತಂಡ ಸಂತೋಷ ವ್ಯಕ್ತಪಡಿಸಿದೆ.
ಹಳ್ಳಿ ಹುಡುಗಿ ಕಮಲಿಯೇ ಈ ಧಾರಾವಾಹಿಯ ಕೇಂದ್ರ ಬಿಂದು. ಮಹಾಜನ್ ಕುಟುಂಬಕ್ಕೆ ಸೇರಿರುವ ಕಮಲಿಗೆ ತಾನೇ ಮಹಾಜನ್ ಕುಟುಂಬದ ಮೊಮ್ಮಗಳು ಎಂದು ಕೊನೆಗೂ ತಿಳಿಯುತ್ತದೆ. ಕಮಲಿ ಅಮ್ಮ ಆಕ್ಸಿಡೆಂಟ್ನಲ್ಲಿ ಸಾಯುತ್ತಾಳೆ. ಇದರಿಂದ ಕಮಲಿ ತಂದೆ ಶಾಕ್ನಿಂದ ಹುಚ್ಚನಂತಾಗುತ್ತಾನೆ. ಅನಿಕಾ ಮತ್ತು ಕಾಮಿನಿಯ ಕುತಂತ್ರದಿಂದ ತನ್ನ ಪ್ರೀತಿ ಪಾತ್ರರನ್ನು ಕಾಪಾಡಲು ಕಮಲಿ ಹರಸಾಹಸ ಪಡುತ್ತಿರುತ್ತಾಳೆ. ನಾಯಕ ರಿಷಿ ಹಾಗೂ ಕಮಲಿ ಪ್ರೀತಿಸುತ್ತಿದ್ದು ಇಬ್ಬರೂ ಮದುವೆಯಾಗಲು ನಿರ್ಧರಿಸಿರುತ್ತಾರೆ. ಆದರೆ ಇವರಿಬ್ಬರನ್ನೂ ದೂರ ಮಾಡಲು ಅನಿಕಾ ನಾನಾ ಪ್ರಯತ್ನ ಮಾಡುತ್ತಲೇ ಇರುತ್ತಾಳೆ. ಈ ನಡುವೆ ಕಮಲಿಯಂತೆ ಕಾಣುವ ಅಂಬಿ ಪಾತ್ರ ಧಾರಾವಾಹಿಯಲ್ಲಿ ಎಂಟ್ರಿ ಆಗಿದೆ. ಕಮಲಿಗೂ ಅಂಬಿಗೂ ಏನು ಸಂಬಂಧ...? ಇಬ್ಬರೂ ಅವಳಿಗಳಿರಬಹುದಾ...?ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಧಾರಾವಾಹಿಯಲ್ಲಿ ಅಮೂಲ್ಯಗೌಡ, ನಿರಂಜನ್ , ಅಂಕಿತಾ ಅಯ್ಯರ್, ರಚನಾ ಸ್ಮಿತ್, ಮೈಕೋ ಮಂಜು, ಸಪ್ನ ದೀಕ್ಷಿತ್, ಶಿಲ್ಪಾ, ಪ್ರಸನ್ನ ಶೆಟ್ಟಿ, ಯಮುನಾ ಶ್ರೀನಿಧಿ, ಮಿಥುನ್ ತೇಜಸ್ವಿ, ಪದ್ಮಾ ವಾಸಂತಿ ,ಭವ್ಯಾ ರೈ ,ಚಂದ್ರಕಲಾ ಮೋಹನ್ ಹಾಗೂ ಇನ್ನಿತರರು ನಟಿಸಿದ್ದಾರೆ.