ETV Bharat / sitara

8 ತಿಂಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾದ ನವರಸ ನಾಯಕ - comedy kiladigalu Championship

ಮೂರು ಸೀಸನ್ ಕಾಮಿಡಿ ಕಿಲಾಡಿ ಸ್ಪರ್ಧಿಗಳು ಇದೀಗ ಒಂದೇ ವೇದಿಕೆ ಮೇಲೆ ಸೇರುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ಒದಗಿಸಲು ರೆಡಿಯಾಗಿದ್ದಾರೆ. ಜಗ್ಗೇಶ್ ಕೂಡಾ ಸುಮಾರು 8 ತಿಂಗಳ ನಂತರ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

Jaggesh attended shooting
ನವರಸ ನಾಯಕ
author img

By

Published : Sep 3, 2020, 1:12 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಕಾಮಿಡಿ ಕಿಲಾಡಿಗಳು ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ - 2 ಆರಂಭವಾಗಲಿದ್ದು ಅದಕ್ಕಾಗಿ ಚಿತ್ರೀಕರಣ ಕೂಡಾ ಜರುಗುತ್ತಿದೆ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ 2 ರ ತೀರ್ಪುಗಾರರಾಗಿರುವ ನವರಸ ನಾಯಕ ಜಗ್ಗೇಶ್, ಲಾಕ್ ಡೌನ್ ನಂತರ ಮೊದಲ ಬಾರಿ ಮನೆಯಿಂದ ಹೊರ ಬಂದು ಇದೀಗ ಶೂಟಿಂಗ್​​​​​​​​ನಲ್ಲಿ ಪಾಲ್ಗೊಂಡಿದ್ದಾರೆ. 'ಕಾಮಿಡಿ ಕಿಲಾಡಿಗಳು, ಚಾಂಪಿಯನ್ಸ್ ಚಿತ್ರೀಕರಣ, 8 ತಿಂಗಳ ನಂತರ ಬಣ್ಣ ಹಚ್ಚುತ್ತಿರುವೆ. ಹರಸಿ, ಹಾರೈಸಿ, ಲವ್ ಯೂ ಆಲ್' ಎಂದು ಜಗ್ಗೇಶ್ ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ವಿಭಿನ್ನ ಹಾಸ್ಯ ಹಾಗೂ ಸ್ಪೂರ್ತಿ ತುಂಬುವ ಮಾತುಗಳಿಗೆ ಹೆಸರಾಗಿರುವ ಜಗ್ಗೇಶ್ ಆರ್ಥಿಕವಾಗಿ ಹಿಂದುಳಿದ ಸ್ಪರ್ಧಿಗಳಿಗೂ ಧೈರ್ಯ ತುಂಬುತ್ತಾರೆ. ಜಗ್ಗೇಶ್ ಅವರೊಂದಿಗೆ ಯೋಗರಾಜ್ ಭಟ್ ಹಾಗೂ ರಕ್ಷಿತ ಕೂಡಾ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಹಾಗೂ ಮಾಸ್ಟರ್ ಆನಂದ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ಒಟ್ಟಿನಲ್ಲಿ ಮೂರೂ ಸೀಸನ್ ಕಾಮಿಡಿ ಕಿಲಾಡಿಗಳು ಇದೀಗ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದು ಪ್ರೇಕ್ಷಕರಿಗಂತೂ ಹಾಸ್ಯದ ಮನರಂಜನೆ ದೊರೆಯುವುದು ಗ್ಯಾರಂಟಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.